ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ

ಬೆಂಗಳೂರು, ಡಿಸೆಂಬರ್ 04 : ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಮುಂದಾಗಿದೆ. ಆದ್ದರಿಂದ, ರೈಲು ನಿಲ್ದಾಣದ ಫ್ಲಾಟ್‌ ಫಾರಂಗಳಲ್ಲಿ ಹಳಿಯ ಸಮೀಪ ಗಾಜಿನ ಬಾಗಿಲುಗಳನ್ನು ಅಳವಡಿಸಲಿದೆ.

ಈಗಾಗಲೇ ವಿದೇಶಗಳಲ್ಲಿ ರೈಲ್ವೇ ಟ್ರಾಕ್‌ ಸಮೀಪ ಗಾಜಿನ ಬಾಗಿಲು ಅವಳವಡಿಕೆ ಮಾಡಲಾಗಿದ್ದು, ಇದು ಯಶಸ್ವಿಯಾಗಿದೆ. ಇದರಿಂದಾಗಿ ಆಕಸ್ಮಿಕವಾಗಿ ಪ್ರಯಾಣಿಕರು ಟ್ರಾಕ್‌ಗೆ ಬೀಳುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತಡೆ ಬಿದ್ದಿದೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ರೈಲು ಬರುವ ಮುಂಚೆ ಪ್ರಯಾಣಿಕರು ಹಳದಿ ಪಟ್ಟಿಯನ್ನು ದಾಟದಂತೆ ಅವರು ಎಚ್ಚರಿಕೆ ವಹಿಸುತ್ತಾರೆ. ಈಗ ಟ್ರಾಕ್‌ ಸಮೀಪ ಬಾಗಿಲುಗಳ್ನು ಅವಳಡಿಸಲು ಚಿಂತನೆ ನಡೆಸಲಾಗಿದೆ.

BMRCL to install sliding doors at edge of the platforms

ಗಾಜಿನ ಬಾಗಿಲುಗಳನ್ನು ಟ್ರಾಕ್‌ ಸಮೀಪ ಅಳವಡಿಕೆ ಮಾಡಲಾಗುತ್ತದೆ. ರೈಲು ಬಂದು ನಿಂತ ತಕ್ಷಣ ಬಾಗಿಲು ತೆರೆಯುತ್ತದೆ, ಬಳಿಕ ಮುಚ್ಚಿಕೊಳ್ಳುತ್ತದೆ. ಇದರಿಂದಾಗಿ ಪ್ರಯಾಣಿಕರು ಟ್ರಾಕ್‌ಗೆ ಬೀಳದಂತೆ ತಡೆಯಬಹುದಾಗಿದೆ.

ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಡೆದಿಲ್ಲ. ಕೆಲವು ವರ್ಷಗಳ ಹಿಂದೆ ಯುವಕನೊಬ್ಬರ ಆಯತಪ್ಪಿ ಟ್ರಾಕ್ ಸಮೀಪ ಬಿದ್ದಿದ್ದ. ಆದರೆ, ಮುಂಜಾಗ್ರತಾ ಕ್ರಮವಾಗಿ ಗಾಜಿನ ಬಾಗಿಲುಗಳನ್ನು ಅಳವಡಿಸಲಾಗುತ್ತದೆ.

'ವಿದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ನಮ್ಮ ಮೆಟ್ರೋ ಸುರಂಗ ಮಾರ್ಗದ ನಿಲ್ದಾಣದಲ್ಲಿ ಗಾಜಿನ ಬಾಗಿಲುಗಳನ್ನು ಮೊದಲು ಅಳವಡಿಕೆ ಮಾಡಲು ಚಿಂತಿಸಲಾಗಿದೆ' ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+