ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro: ಜ.1ರಿಂದ ಸಣ್ಣ, ಮಧ್ಯಮ, ದೊಡ್ಡ ಗುಂಪುಗಳ ಪ್ರಯಾಣದ ಟಿಕೆಟ್‌ಗೆ ಶೇ.10-20 ರಿಯಾಯಿತಿ

|
Google Oneindia Kannada News

ಬೆಂಗಳೂರು, ಜನವರಿ 02: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಜನವರಿ 1ರಿಂದ ಅನ್ವಯವಾಗುವಂತೆ ಚಿಕ್ಕ, ಮಧ್ಯಮ ಹಾಗೂ ದೊಡ್ಡ ಗುಂಪುಗಳ ಪ್ರಯಾಣಿಕರ ಟಿಕೇಟ್ ಖರೀದಿ ಮೇಲೆ ರಿಯಾಯಿತಿ ಘೋಷಿಸಿದೆ.

ಎರಡು ಮೆಟ್ರೋ ನಿಲ್ದಾಣಗಳ ನಡುವೆ ಪ್ರಯಾಣ ಮಾಡುವ ಪ್ರಯಾಣಿಕರ ಸಣ್ಣ ಗುಂಪು ಅಂದರೆ ಸುಮಾರು 25ರಿಂದ 100 ಜನರ ಗುಂಪಿಗೆ ಪ್ರಯಾಣದ ಟೋಕನ್ ದರಕ್ಕಿಂತ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದು ಒಂದು ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ.

ಅದೇ ರೀತಿ ಮಧ್ಯಮ ಹಾಗೂ ದೊಡ್ಡ ಗಾತ್ರದ ಪ್ರಯಾಣಿಕರ ಗುಂಪಿಗೂ ರಿಯಾಯಿತಿ ನೀಡಲಾಗಿದೆ. ಅವೆಲ್ಲವು 2023ರ ಜನವರಿ 1ರಿಂದ ಜಾರಿಗೆ ಬಂದಿವೆ. ರ್‍ಯಾಲಿ, ಬೃಹತ್ ಸಮಾವೇಶ, ಮದುವೆ ಇನ್ನಿತರ ಸಭೆ ಸಮಾರಂಭಗಳ ಆಯೋಜಕರು ಮತ್ತು ಅದರಲ್ಲಿ ಭಾಗವಹಿಸುವವರು ಈ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಬೇಕು ರಿಯಾಯಿತಿ ಎಷ್ಟು? ಪ್ರಯಾಣಿಕರ ಸಂಖ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

BMRCL Provided Exemption For Group Travellers At Discount Rate From January 1, Know More

ಇನ್ನು ಮಧ್ಯಮ ಗುಂಪು ಎನ್ನಲಾಗುವುದ 100ರಿಂದ 1000ವರೆಗಿನ ಪ್ರಯಾಣಿಕರು ಒಟ್ಟಾಗಿ ಒಂದೇ ನಿಲ್ದಾಣ ಪ್ರವೇಶಿಸಿ ಗಮ್ಯಸ್ಥಾನದಿಂದ ಒಂದೇ ನಿಲ್ದಾಣದಲ್ಲಿ ಎಲ್ಲರೂ ಇಳಿದುಕೊಳ್ಳಬೇಕು. ಈ ಗುಂಪು ಖರೀದಿಸುವ ಟಿಕೆಟ್ ಮೇಲೆ ಶೇ. 15ರಷ್ಟು ರಿಯಾಯಿತಿ ನೀಡಲಾಗಿದೆ. ನಿಗದಿತ ಒಂದು ಮೆಟ್ರೋ ನಿಲ್ದಾಣ ಪ್ರವೇಶಿಸಿ, ನಮೂದಿಸಿದ ನಿಲ್ದಾಣದಲ್ಲಿ ಇಳಿದುಕೊಳ್ಳುವವರಿಗೆ ಫ್ಲಾಟ್‌ ದರ 35ರೂ. ನಿಗದಿ ಮಾಡಲಾಗಿದೆ.

ಫ್ಲಾಟ್ ದರ ರೂ.30 ರಿಂದ ರೂ.35 ನಿಗದಿ

ಪ್ರಯಾಣಿಸುವ ಜನರ ಸಂಖ್ಯೆ ಮತ್ತು ಖರೀದಿದಾರರು ನಿಲ್ದಾಣ ಪ್ರವೇಶ ಹಾಗೂ ನಿರ್ಗಮದ ಮಾರ್ಗಗಳ ಆಧಾರ ಅವಲಂಬಿಸಿ ಟಿಕೆಟ್ ಫ್ಲಾಟ್ ದರ ರೂ.30 ರಿಂದ ರೂ.35 ವರೆಗೆ ನಿಗದಿಪಡಿಸಲಾಗಿದೆ. ಈ ಗುಂಪುಗಳ ಟಿಕೆಟ್‌ಗಳು ಕಾಗದದ ಟಿಕೆಟ್‌ಗಳ ರೂಪದಲ್ಲಿ ನೀಡಲಾಗುತ್ತದೆ.

BMRCL Provided Exemption For Group Travellers At Discount Rate From January 1, Know More

1000ಕ್ಕಿಂತ ಹೆಚ್ಚು ಪ್ರಯಾಣಿಕರ ದೊಡ್ಡ ಗುಂಪುಗಳು ಒಂದೇ ನಿಲ್ದಾಣಗಳಲ್ಲಿ ಪ್ರವೇಶಿಸುವ ಮತ್ತು ನಿರ್ಗಮಿಸುವವರಿಗೆ ಖರೀದಿಯ ಟೋಕನ್ ದರದಲ್ಲಿ ಶೇ.20ರಷ್ಟು ರಿಯಾಯಿತಿ ಪಡೆಯಲಾಗುವುದು. ಟಿಕೆಟ್‌ಗಳನ್ನು ಬುಕ್ ಮಾಡಲು ಬಿಎಂಆರ್‌ಸಿಎಲ್‌ ಸೂಚಿಸುವ ನಿಯಮಗಳನ್ನು ಅನುಸರಿಸಬೇಕು.

ಮುಖ್ಯವಾಗಿ ಗುಂಪು ಗಂಪಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ವಾರಕ್ಕೂ ಮೊದಲೇ ಲಿಖಿತ ರೂಪದಲ್ಲಿ ಸಂಸ್ಥೆಗೆ ತಿಳಿಸಿರಬೇಕು ಎಂದು ಬಿಎಂಆರ್‌ಸಿಎಲ್ ಹೇಳಿದೆ. ಏಳು ದಿನಕ್ಕೂ ಮೊದಲೇ ತಾವು ಪ್ರಯಾಣದ ಸಮಯ, ಪ್ರಯಾಣಿಕರ ಸಂಖ್ಯೆ, ಪ್ರವೇಶ ಮತ್ತು ನಿರ್ಗಮನ ನಿಲ್ದಾಣಗಳು ಮತ್ತು ಪ್ರಯಾಣದ ಉದ್ದೇಶವನ್ನು ತಿಳಿಸಬೇಕು.

ಪ್ರಯಾಣಿಕರಿ ಮನವಿ ಸ್ವೀಕರಿಸಿದ ನಂತರ ಬಿಎಂಆರ್‌ಸಿಎಲ್ ಪ್ರಯಾಣದ ವಿವರ ಸೂಚಿಸುವ ಅಧಿಕಾರ ಪತ್ರ ಅಥವಾ ಗುಂಪು ಟಿಕೆಟ್‌ಗಳನ್ನು ನೀಡುತ್ತದೆ. ನಂತರ ಆಯಾ ಗುಂಪಿನಗ ಸದಸ್ಯರು ನಿಲ್ದಾಣಗಳನ್ನು ಪ್ರವೇಶಿಸಿ ನಿರ್ಗಮಿಸಬಹುದು. ಈ ವೇಳೆ ಬಿಎಂಆರ್‌ಸಿಎಲ್‌ನ ಅಧಿಕೃತ ಸಿಬ್ಬಂಧಿ ಪ್ರಯಾಣಿಕರ ಸಂಖ್ಯೆ ಎಣಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Bengaluru Metro Rail Corporation Limited (BMRCL) provided exemption for Group Travellers at discount rate from January 1, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X