ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro; ಏರ್‌ಪೋರ್ಟ್ ಮಾರ್ಗದಲ್ಲಿ ಬರಲಿದೆ 2 ಹೊಸ ನಿಲ್ದಾಣ

|
Google Oneindia Kannada News

ಬೆಂಗಳೂರು, ನವೆಂಬರ್ 25; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೆಟ್ರೋ ಮಾರ್ಗದ ಕಾಮಗಾರಿ ಕೈಗೊಂಡಿದೆ. ಆದರೆ ಈ ಯೋಜನೆಯಲ್ಲಿ ಈಗ ಕೆಲವು ಬದಲಾವಣೆಯಾಗುವ ಸಾಧ್ಯತೆ ಇದೆ.

ಒಟ್ಟು ಮೂರು ಹಂತದಲ್ಲಿ ಕೆ. ಆರ್. ಪುರ-ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದರೆ ಜಕ್ಕೂರು ಪ್ಲಾಂಟೇಶನ್, ಚಿಕ್ಕಜಾಲ ಮತ್ತು ಯಲಹಂಕ ಏರ್‌ಪೋರ್ಸ್‌ ಬೇಸ್ ಬಳಿ ಕಾಮಗಾರಿ ಸ್ಥಗಿತಗೊಂಡಿದೆ.

ಒಂದು ಮೆಟ್ರೋ ಕ್ಯೂಆರ್‌ ಕೋಡ್ ಬಳಸಿ ಆರು ಮಂದಿ ಪ್ರಯಾಣಿಸಿ ಒಂದು ಮೆಟ್ರೋ ಕ್ಯೂಆರ್‌ ಕೋಡ್ ಬಳಸಿ ಆರು ಮಂದಿ ಪ್ರಯಾಣಿಸಿ

ಬಿಎಂಆರ್‌ಸಿಎಲ್ ಈ ಕುರಿತು ವಿವರಣೆ ನೀಡಿದೆ. ಈ ಮಾರ್ಗದಲ್ಲಿ ಎರಡು ಹೊಸ ನಿಲ್ದಾಣಗಳಿಗಾಗಿ ಯೋಜನೆ ರೂಪಿಸಲಾಗುತ್ತಿದೆ. ಖಾಸಗಿ ಕಂಪನಿಗಳು ಈ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡಲಿವೆ. ಆದ್ದರಿಂದ ಸದ್ಯ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Namma Metro; ಮೆಟ್ರೋ ಫೇಸ್‌-3 ಯೋಜನೆ ವಿವರ, ನಿಲ್ದಾಣಗಳು Namma Metro; ಮೆಟ್ರೋ ಫೇಸ್‌-3 ಯೋಜನೆ ವಿವರ, ನಿಲ್ದಾಣಗಳು

BMRCL Planned Two New Stations In Airport Route

ಜಕ್ಕೂರು ಪ್ಲಾಂಟೇಶನ್ ಮತ್ತು ಚಿಕ್ಕಜಾಲ ಬಳಿ ಎರಡು ಹೊಸ ನಮ್ಮ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ. ಸೆಂಚುರಿ ಗ್ರೂಪ್ ಅಥವ ಬಾಗಮನೆ ಟೆಕ್ ಪಾರ್ಕ್ ಈ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವ ನಿರೀಕ್ಷೆ ಇದೆ. ಆದ್ದರಿಂದ ಸದ್ಯ ಭೂ ಸ್ವಾಧೀನ ಪ್ರಕ್ರಿಯೆಗಾಗಿ ಕಾಮಗಾರಿ ನಿಲ್ಲಿಸಲಾಗಿದೆ.

Namma Metro: ಶೀಘ್ರವೇ ಮೆಟ್ರೋ ನಿಲ್ದಾಣಗಳಿಗೆ ಮಿನಿ ಬಸ್ ಸೇವೆ Namma Metro: ಶೀಘ್ರವೇ ಮೆಟ್ರೋ ನಿಲ್ದಾಣಗಳಿಗೆ ಮಿನಿ ಬಸ್ ಸೇವೆ

ಹೊಸದಾದ ಚಿಕ್ಕಜಾಲ ನಿಲ್ದಾಣದ ಬಗ್ಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳಿಂದ ಮನವಿ ಬಂದಿದೆ. ದೊಡ್ಡಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳ ನಡುವೆ ಹೊಸದಾದ ನಿಲ್ದಾಣ ನಿರ್ಮಾಣವಾಗಲಿದೆ. ಹೊಸ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಪ್ರಾಥಮಿಕ ಒಪ್ಪಿಗೆ ಸಿಕ್ಕಿದೆ.

ಎರಡು ಖಾಸಗಿ ಕಂಪನಿಗಳು ಈಗಾಗಲೇ ನಿಲ್ದಾಣ ನಿರ್ಮಾಣಕ್ಕೆ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಿವೆ. ಮುಂದಿನ 15 ರಿಂದ 20 ದಿನಗಳಲ್ಲಿ ಈ ಕುರಿತು ಸ್ಪಷ್ಟವಾದ ಚಿತ್ರಣ ಲಭ್ಯವಾಗಲಿದೆ.

BMRCL Planned Two New Stations In Airport Route

ಯಲಹಂಕ ಏರ್‌ಪೋರ್ಸ್‌ ಬೇಸ್ ಬಳಿ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಭೂ ಸ್ವಾಧೀನ ಕಾರಣವಾಗಿದೆ. ಎನ್‌ಹೆಚ್‌ಎಐ ರಕ್ಷಣಾ ಇಲಾಖೆ ಹೊತೆ ಒಪ್ಪಂದ ಮಾಡಿಕೊಂಡಿದೆ. ಭೂ ಸ್ವಾಧೀನ ಕಾರ್ಯ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

ಹೆಬ್ಬಾಳ ಮತ್ತು ವಿಮಾನ ನಿಲ್ದಾಣ ಮಾರ್ಗದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿವೆ. ಬಳ್ಳಾರಿ ರಸ್ತೆಯಲ್ಲಿ ಮತ್ತಷ್ಟು ಟೆಕ್ ಪಾರ್ಕ್‌ಗಳು ಬರುತ್ತಿವೆ. ನಿಲ್ದಾಣ ನಿರ್ಮಾಣ ಕಾರ್ಯದಿಂದಲೇ ಯೋಜನೆ ತಡವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಸದ್ಯ ಇರುವ ನಿಲ್ದಾಣಗಳು; ನಮ್ಮ ಮೆಟ್ರೋ ಏರ್‌ಪೋರ್ಟ್ ಕಾರಿಡಾರ್‌ನಲ್ಲಿ ಸದ್ಯ ಇರುವ ನಿಲ್ದಾಣಗಳ ಜೊತೆ ಎರಡು ನಿಲ್ದಾಣಗಳು ಹೊಸದಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಕಸ್ತೂರಿ ನಗರ, ಹೊರಮಾವು, ಹೆಚ್‌ಆರ್‌ಬಿಆರ್ ಲೇಔಟ್ (ಬಾನುಸಾಹೇಬ್ ಪಾಳ್ಯ), ಕಲ್ಯಾಣ ನಗರ, ಹೆಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ ಕ್ರಾಸ್ (ಕೋಗಿಲು ಕ್ರಾಸ್), ಬಾಗಲೂರು ಕ್ರಾಸ್, ಬೆಟ್ಟಹಲಸೂರು, ದೊಡ್ಡಜಾಲ, ಏರ್‌ಪೋರ್ಟ್ ಸಿಟಿ ಮತ್ತು ಕೆಐಎಲ್ ಟರ್ಮಿನಲ್ ನಿಲ್ದಾಣಗಳಿವೆ.

38.44 ಕಿ. ಮೀ. ಮಾರ್ಗವಿದು; ಕೆ. ಆರ್. ಪುರ-ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟು ಉದ್ದ 38. 44 ಕಿ. ಮೀ.ಯಾಗಿದೆ. ಈ ರೈಲು ಮಾರ್ಗದ ಒಟ್ಟು ವೆಚ್ಚ ಸುಮಾರು 2,200 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಈ ಮಾರ್ಗದ ಸಿವಿಲ್ ಮಾರ್ಗದ ಕಾಮಗಾರಿ ಟೆಂಡರ್ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ಪಡೆದುಕೊಂಡಿದೆ. ಕಾಮಗಾರಿಯನ್ನು ಮೂರು ಭಾಗವಾಗಿ ವಿಂಗಡನೆ ಮಾಡಲಾಗಿದೆ. ಎಲ್ಲಾ ಪ್ಯಾಕೇಜ್‌ಗಳ ಗುತ್ತಿಗೆಯೂ ಇದೇ ಕಂಪನಿಗೆ ನೀಡಲಾಗಿದೆ.

ಪ್ಯಾಕೇಜ್ 1ರಲ್ಲಿ 11 ಕಿ. ಮೀ. ಉದ್ದದ ಮಾರ್ಗ, ಪ್ಯಾಕೇಜ್ 2ರಲ್ಲಿ 11.67 ಕಿ. ಮೀ. ಮಾರ್ಗ ಮತ್ತು ಪ್ಯಾಕೇಜ್‌ 3 15 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ.

English summary
BMRCL planned to construct Two new Namma Metro stations near Jakkur plantation & Chikkajala on Bengaluru Kempegowda international airport route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X