'ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ
ಬೆಂಗಳೂರು, ನ.6: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜಂಟ್ರಿ ಯೋಜನೆಯಾದ ಮೆಟ್ರೋ ರೈಲು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಸಂಸ್ತೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲವೂ ಗುತ್ತಿಗೆ ಆಧಾರಿತ ಉದ್ಯೋಗವಕಾಶಗಳಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಬಿಎಂಆರ್ ಸಿಎಲ್ ನಲ್ಲಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಉದ್ಯೋಗಗಳಿವೆ. ಮೂರು ವರ್ಷಗಳ ಕಾಲ ಗುತ್ತಿಗೆ ಅವಧಿಯಲ್ಲಿ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30,2014.
ಸಂಬಳ ವಿವರ:
* ಡೆಪ್ಯುಟಿ ಮುಖ್ಯ ಇಂಜಿನಿಯರ್/ ಡೆಪ್ಯುಟಿ ಪ್ರಧಾನ ವ್ಯವಸ್ಥಾಪಕ: 80,000 ರು /ತಿಂಗಳು
* ಕಾರ್ಯಕಾರಿ ಇಂಜಿನಿಯರ್/ ವ್ಯವಸ್ಥಾಪಕ: 50,000 ರು/ ತಿಂಗಳು
* ಸಹಾಯಕ ಕಾರ್ಯಕಾರಿ ಇಂಜಿನಿಯರ್ : 35,000 ರು/ ತಿಂಗಳು
* ಸಹಾಯಕ ಇಂಜಿನಿಯರ್/ ಸಹಾಯಕ ಮ್ಯಾನೇಜರ್ : 30,000 ರು/ ತಿಂಗಳು

ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಸ್ವವಿವರದೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಕೆಳಕಂಡ ವಿಳಾಸಕ್ಕೆ ಕಳಿಸತಕ್ಕದ್ದು.
"The Director (Projects & Planning),
Bangalore Metro Rail Corporation Limited,
III Floor, BMTC Complex, K.H.Road,
Shanthinagar, Bengaluru - 560 027
* ಲಕೋಟೆಯ ಮೇಲೆ APPLICATION FOR THE POST OF_ ಎಂದು ದಪ್ಪ ಅಕ್ಷರಗಳಲ್ಲಿ ಬರೆದು ನೀವು ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು ಹಾಕಿ
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30/11/2014, ಸಂಜೆ 4.00 ಗಂಟೆ.
ಸಂಪೂರ್ಣ ಅರ್ಜಿ ವಿವರಗಳಿಗೆ ಬಿಎಂಆರ್ ಸಿಎಲ್ ಪ್ರಕಟಣೆಯನ್ನು ಇಲ್ಲಿ ಓದಿರಿ...ಈ ಸುದ್ದಿಯ ವಿವರಗಳನ್ನು ಇಂಗ್ಲೀಷಿನಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ
| ಹುದ್ದೆ ಹೆಸರು | ಎಷ್ಟು ಹುದ್ದೆ ಖಾಲಿ | ವಿದ್ಯಾರ್ಹತೆ | ಅಗತ್ಯ ಅನುಭವ ವಿವರ |
| ಡೆಪ್ಯುಟಿ ಮುಖ್ಯ ಇಂಜಿನಿಯರ್ (Structures) | 2 | B.E. Civil, ME (Structures) | ಕನಿಷ್ಠ 12 ವರ್ಷಗಳ ಅನುಭವ |
| ಕಾರ್ಯಕಾರಿ ಇಂಜಿನಿಯರ್(Structures) | 2 | B.E. Civil, ME (Structures) | ಕನಿಷ್ಠ 10 ವರ್ಷಗಳ ಅನುಭವ |
| ಸಹಾಯಕ ಕಾರ್ಯಕಾರಿ ಇಂಜಿನಿಯರ್ (Structures) | 2 | B.E. Civil, ME (Structures) | ಕನಿಷ್ಠ 8 ವರ್ಷಗಳ ಅನುಭವ |
| ಸಹಾಯಕ ಇಂಜಿನಿಯರ್(Structures) | 3 | B.E. Civil, ME (Structures) | ಕನಿಷ್ಠ 5 ವರ್ಷಗಳ ಅನುಭವ |
| ಡೆಪ್ಯುಟಿ ಪ್ರಧಾನ ವ್ಯವಸ್ಥಾಪಕ (Architecture) | 2 | B. Arch., M.Arch | ಕನಿಷ್ಠ 5 ವರ್ಷಗಳ ಅನುಭವ architectural design |
| ವ್ಯವಸ್ಥಾಪಕ (Architecture) | 2 | B. Arch., M.Arch | ಕನಿಷ್ಠ 10 ವರ್ಷಗಳ ಅನುಭವ architectural design |
| ಸಹಾಯಕ ಮ್ಯಾನೇಜರ್(Architecture) | 4 | B. Arch., M.Arch | ಕನಿಷ್ಠ 8 ವರ್ಷಗಳ ಅನುಭವ architectural design |
| ಡೆಪ್ಯುಟಿ ಪ್ರಧಾನ ವ್ಯವಸ್ಥಾಪಕ(Contracts) | 3 | Graduate in any discipline | ಕನಿಷ್ಠ 12 ವರ್ಷಗಳ ಅನುಭವ |
| ವ್ಯವಸ್ಥಾಪಕ (Contracts) | 3 | Graduate in any discipline | ಕನಿಷ್ಠ 10 ವರ್ಷಗಳ ಅನುಭವ Overall experience of 10 years. |
| ಡೆಪ್ಯುಟಿ ಮುಖ್ಯ ಇಂಜಿನಿಯರ್ | 3 | BE / B. Tech (Civil ) or equivalent ME (Structures) preferred | ಕನಿಷ್ಠ 12 ವರ್ಷಗಳ ಅನುಭವ |
| ಕಾರ್ಯಕಾರಿ ಇಂಜಿನಿಯರ್ | 6 | BE (Civil), ME (Structures) | ಕನಿಷ್ಠ 10 ವರ್ಷಗಳ ಅನುಭವ |
| ಸಹಾಯಕ ಕಾರ್ಯಕಾರಿ ಇಂಜಿನಿಯರ್(Viaduct / Station) | 7 | BE (Civil), ME (Structures) | ಕನಿಷ್ಠ 7 ವರ್ಷಗಳ ಅನುಭವ |
| ಸಹಾಯಕ ಕಾರ್ಯಕಾರಿ ಇಂಜಿನಿಯರ್(Casting) | 9 | BE (Civil), ME (Structures) preferred | ಕನಿಷ್ಠ 7 ವರ್ಷಗಳ ಅನುಭವ |












Click it and Unblock the Notifications