ಮೆಟ್ರೋ 2ನೇ ಹಂತ: 216 ಬೋಗಿಗಳ ಖರೀದಿಗೆ ಮುಂದಾದ ಬಿಎಂಆರ್‌ಸಿಎಲ್

ಬೆಂಗಳೂರು, ಫೆಬ್ರವರಿ 26: ನಮ್ಮ ಮೆಟ್ರೋದ ಎರಡನೇ ಹಂತದ ಯೋಜನೆಗಳಿಗಾಗಿ ಒಟ್ಟು 216 ಬೋಗಿಗಳನ್ನು ಕೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಬೋಗಿಗಳ ಖರೀದಿಗೆ ಟೆಂಡರ್ ಆಹ್ವಾನಿಸಿದ್ದು, ಮೂರು ವರ್ಷ 11 ತಿಂಗಳಲ್ಲಿ ಪ್ರಕ್ರಿಯೆ ಮುಗಿಯಲಿದೆ. 72 ಕಿ.ಮೀ ಉದ್ದದ ಎರಡನೇ ಹಂತದ ಯೋಜನೆಯಲ್ಲಿ ಕಾರ್ಯಾಚರಿಸಲು 216 ಬೋಗಿಗಳನ್ನು ಖರೀದಿಸಲಾಗುತ್ತಿದೆ.

ಒಂದನೇ ಹಂತದಲ್ಲಿ ಮೂರು ಬೋಗಿಯ ರೈಲುಗಳನ್ನು ಆರು ಬೋಗಿಯ ರೈಲುಗಳನ್ನಾಗಿ ಪರಿವರ್ತಿಸಲು ಬಿಇಎಂಎಲ್‌ನಿಂದ 10 ಕೋಟಿ ರೂ ಅಂದಾಜು ವೆಚ್ಚವೆಂದು ಲೆಕ್ಕ ಹಾಕಲಾಗಿದೆ. ಎರಡನೇ ಹಂತದಲ್ಲೂ ಇದೇ ವೆಚ್ಚವನ್ನು ಪರಿಗಣಿಸಿ ಬೋಗಿ ಖರೀದಿ ನಡೆಯಲಿದೆ.

BMRCL invited tender for 216 metro coaches

ಎರಡನೇ ಹಂತದಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿ-ಕೆಂಗೇರಿ ಹಾಗೂ ಕನಕಪುರ ರಸ್ತೆಯ ಯಲಚೇನಹಳ್ಳಿ-ಅಂಜನಾಪುರ ಟೌನ್‌ ಶಿಪ್ ಮಾರ್ಗಗಳು ಮೊದಲು ಸಂಚಾರಕ್ಕೆ ಮುಕ್ತವಾಗಲಿದೆ. ಮೈಸೂರು ರಸ್ತೆಯ ಮೆಟ್ರೋ ಕಾಮಗಾರಿ ಶೇ.81ರಷ್ಟು ಮುಗಿದಿದೆ. ಕನಕಪುರ ರಸ್ತೆಯ ಮೆಟ್ರೋ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದೆ. 2020-2021ರಲ್ಲಿ ಈ ಮಾರ್ಗಗಳಲ್ಲಿ ರೈಲು ಸೇವೆ ಆರಂಭವಾಗಲಿದೆ.

ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಬೋಗಿಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ.ಟೆಂಡರ್ ಪ್ರಕ್ರಿಯೆ ಮೇ ತಿಂಗಳಿನಲ್ಲಿ ಆರಂಭವಾಗಲಿವೆ, ನಂತರ ಅರ್ಜಿಗಳನ್ನು ಪರಿಶೀಲಿಸಿ ಕಡಿಮೆ ದರದಲ್ಲಿ ಬೋಗಿ ಪೂರೈಸುವ ಕಂಪನಿಗಳನ್ನು ಆಯ್ಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+