ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಬಜೆಟ್‌ನಲ್ಲಿ ನಮ್ಮ ಮೆಟ್ರೋಗೂ ದೊರೆಯಲಿದೆ ಅನುದಾನ

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ಕೇಂದ್ರದ ಮಧ್ಯಂತರ ಬಜೆಟ್ ಶುಕ್ರವಾರ ಮಂಡನೆಯಾಗಿದೆ. ದೇಶದಲ್ಲಿರುವ ಎಲ್ಲಾ ಮೆಟ್ರೋ ಯೋಜನೆಗಳಿಗೆ 17,713.93 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.

ಹಾಗಾಗಿ ಬೆಂಗಳೂರು ನಮ್ಮ ಮೆಟ್ರೋಗೂ ಅನುದಾನ ಲಭ್ಯವಾಗಲಿದೆ. ಏರ್‌ಪೋರ್ಟ್ ಮೆಟ್ರೋಗೆ 500 ಕೋಟಿ ರೂ ನೀಡುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಅನುದಾನದಲ್ಲಿ ಸ್ವಲ್ಪ ಮೊತ್ತ ನಮ್ಮ ಮೆಟ್ರೋಗೆ ದೊರೆತರೆ ಏರ್‌ಪೋರ್ಟ್ ಮೆಟ್ರೋ ಯೋಜನೆಗೆ ಅನುಕೂಲ ದೊರೆಯಲಿದೆ.

5ಲಕ್ಷ ತೆರಿಗೆ ಮಿತಿ ಏರಿಕೆ: ವಿಧಿಯಿಲ್ಲದೆ 1ನಿಮಿಷ ಬಜೆಟ್ ಭಾಷಣ ನಿಲ್ಲಿಸಿದ ಪಿಯೂಶ್ 5ಲಕ್ಷ ತೆರಿಗೆ ಮಿತಿ ಏರಿಕೆ: ವಿಧಿಯಿಲ್ಲದೆ 1ನಿಮಿಷ ಬಜೆಟ್ ಭಾಷಣ ನಿಲ್ಲಿಸಿದ ಪಿಯೂಶ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ನಿರ್ಮಿಸುವ ಮೆಟ್ರೋ ಯೋಜನೆಗೆ ಬಿಐಎಎಲ್ ಹೂಡಿಕೆ ಮಾಡುವುದು ಸಾಧ್ಯವಾಗಿಲ್ಲ. ಹೀಗಾಗಿ 500 ಕೋಟಿ ರೂ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದೆ.

BMRCL expecting central fund for Airport Namma metro

ಏರ್‌ಪೋರ್ಟ್‌ಗೆ 29 ಕಿ.ಮೀ ಮೆಟ್ರೋ ಯೋಜನೆ ರೂಪಿಸಲಾಗಿದೆ. ಅದಕ್ಕೆ 5,950 ಕೋಟಿ ರೂ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ 500 ಕೋಟಿ ರೂ, ರಾಜ್ಯ ಸರ್ಕಾರ 500 ಕೋಟಿ ರೂ, 3,200 ಕೋಟಿ ರೂ ದೀರ್ಘಾವಧಿ ಸಾಲ, 1 ಸಾವಿರ ಕೋಟಿ ರೂ ಬಿಐಎಎಲ್ ವಿಮಾನ ಪ್ರಯಾಣಿಕರ ಮೇಲೆ ಬಳಕೆದಾರರ ಶುಲ್ಕ ಹೇರಿ ಅನುದಾನ ಸಂಗ್ರಹಿಸುವ ಕ್ರಮಕ್ಕೆ ಮುಂದಾಗಿತ್ತು.

ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ

ಆದರೆ ಇದಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿಲ್ಲವಾದ್ದರಿಂದ 1 ಸಾವಿರ ಕೋಟಿ ರೂ ಕೊರತೆ ಉಂಟಾಗಿದೆ.

English summary
Central interim budget alloted 17,713 crore for Metro development, BMRCL asking 500 crores fund for Kempegowda international airport Namma metro lane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X