BLR-MYS Expressway: ಹೆದ್ದಾರಿ ಚಾಲಕರು ಗಮನಿಸಿ, ಪೊಲೀಸ್ ಸೋಗಿನಲ್ಲಿ ಬಂದ 3 ದುಷ್ಕರ್ಮಿಗಳಿಂದ ದರೋಡೆ
ಬೆಂಗಳೂರು, ಜುಲೈ 03: ನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಇದೀಗ ಅಪರಾಧ ವಿಷಯವಾಗಿ ಸುದ್ದಿಯಲ್ಲಿದೆ. ಟೋಲ್ ಶುಲ್ಕ ದಿಂದ ದುಬಾರಿ ಎನಿಸಿಕೊಂಡಿರುವ ಈ ರಸ್ತೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸದಿಂದ ಪ್ರಯಾಣಿಕರು ಅಪಾರ ಪ್ರಮಾಣದಲ್ಲಿ ಹಣ ಕಳೆದುಕೊಂಡು ಘಟನೆ ತಡವಾಗಿ ಬೆಳಕಿಗೆ ನಡೆದಿದೆ.
ಕಳೆದ ಜೂನ್ 30ರಂದು ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಕೊಡಗು ಜಿಲ್ಲೆಯ ನಿವಾಸಿಗಳಿಗೆ ತೆರಳುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಮೂವರು ತಾವು ಪೊಲೀಸ್ ಎಂದು ಸುಳ್ಳು ಹೇಳಿ ದರೋಡೆ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಚಿನ್ನಭರಣ ಮತ್ತು ಲಕ್ಷಾಂತರ ರೂಪಾಯಿ ದರೋಡಿ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ಮದ್ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

ಪೊಲೀಸ ರೀತಿ ವಾಹನ ಹತ್ತಿರ ಬಂದ ಮೂವರು ದುಷ್ಕರ್ಮಿಗಳು ಚಾಲಕನನ್ನು ಕತ್ತಿ ತೋರಿಸಿ ಬೆದರಿಸಿದ್ದಾರೆ. ಅವರಲ್ಲಿ 3.5 ಲಕ್ಷ ಮೌಲ್ಯದ ಚಿನ್ನದ ಸರ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾನಮತ್ತ 3 ದುಷ್ಕರ್ಮಿಗಳಿಂದ ದರೋಡೆ
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅರಪಟ್ಟು ನಿವಾಸಿ ಕೆಕೆ ಮುತ್ತಪ್ಪ ಎಂಬುವರು ಐಶ್ವರ್ಯ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ಬಳಿ ಕಾರಿನಲ್ಲಿ ಕುಳಿತಿದ್ದರು. ಪೊಲೀಸರ ಸೋಗಿನಲ್ಲಿ ಕಾರಿನ ಬಳಿ ಬಂದ ಮೂವರು ಪಾನಮತ್ತರಾಗಿದ್ದರು. ವಾಹನದ ಚಲಾಯಿಸುವ ಬಗ್ಗೆ ಪರಿಶೀಲಿಸಬೇಕು. ಕಾರಿನ ಬಾಗಿಲು ತೆಗೆಯಲು ಸೂಚಿಸಿದ್ದಾರೆ.
ಅವರ ಮಾತಿನಿಂತೆ ಮುತ್ತಪ್ಪ ಅವರು ಬಾಗಿಲು ತೆರೆಯುತ್ತಿದ್ದಂತೆ ಮೂವರು ಅಸಲಿ ಮುಖ ತೋರಿಸಿದ್ದಾರೆ. ದಾಳಿಕೋರರು ಅವನ ಮೇಲೆ ಕತ್ತಿ ಮಾರಕಾಸ್ತ್ರ ಹಿಡಿದು ಬೆದರಿಸಿದ್ದಾರೆ. ಬೆಲೆಬಾಳುವ ವಸ್ತುಗಳನ್ನು ಕೊಡಿ ಇಲ್ಲವಾದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ ಹಣ, ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ ಎಂದು ಪ್ರಕಟಣ ಕುರಿತು ಪೊಲೀಸರು ವಿವರಿಸಿದರು.

ಶುಕ್ರವಾರ ನಾನು ಬೆಂಗಳೂರಿನಲ್ಲಿ ವೈದ್ಯರೊಬ್ಬರನ್ನು ಸಂಪರ್ಕಿಸಿದ ನಂತರ ವಿರಾಜಪೇಟೆಗೆ ಹಿಂತಿರುಗುತ್ತಿದ್ದೆ. ಆಸ್ಪತ್ರೆಯಿಂದ ಹೊರಡುವಾಗಲೇ ತಡವಾಗಿತ್ತು. ಹಾಗಾಗಿ ನಾನು ಬೆಂಗಳೂರಿನಿಂದ ಹೊರಡುವ ಮೊದಲು ರಾತ್ರಿ ಊಟ ಮಾಡಲು ನಿರ್ಧರಿಸಿದ್ದೆ ಎಂದು ಕಾರು ಚಾಲಕ ಮುತ್ತಪ್ಪ ಹೇಳಿದರು.
ಪೊಲೀಸರ ಸೋಗಿನಲ್ಲಿ ಮಾತು ಆರಂಭಿಸಿದ್ದ ದರೋಡೆಕೋರರ
ಹೀಗೆ ಪ್ರಯಾಣ ಮಾಡುವಾಗ ಎಕ್ಸ್‌ಪ್ರೆಸ್‌ವೇ ಬಳಿ ಟೀ ಗಾಗಿ ನಿಲ್ಲಿಸಿ ಮತ್ತು ಊರಿನತ್ತ ಪ್ರಯಾಣ ಮುಂದುವರಿಸಿದ್ದೆ. ಕೆಲಸ ಹೊತ್ತಿನಲ್ಲೇ ನಿದ್ದೆ ಜಾರಿದಂತಾಯಿತು. ಹೀಗಾಗಿ ಮದ್ದೂರಿನ ಐಶ್ವರ್ಯ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸಮೀಪ ಕಾರು ನಿಲ್ಲಿಸಿದೆ. ಹಾಗೇ ನಿದ್ದೆಗೆ ಜಾರುತ್ತಿದ್ದಂತೆ ಕಿಟಕಿ ಬಡಿದ ಶಬ್ದವಾಯಿತು, ನೋಡಿದರೆ ಮೂವರು ಜನರಿದ್ದರು. ಅದರಲ್ಲಿ ಒಬ್ಬರು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡರು. ಕುಡಿದಿದ್ದೀಯಾ ಎಂದು ಕೇಳಿದರು. ಅವರ ಸೂಚನೆಯಂತೆ ಬಾಗಿಲು ತೆಗೆದೆ. ಅವರು ಚಾಕು ತೋರಿಸಿ ಬೆದರಿಸಿದರು.
ದರೋಡೆ ಬಳಿಕ ನಾನು 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದೆ, ಹೆದ್ದಾರಿ ಪೊಲೀಸರು ಸ್ಥಳಕ್ಕೆ ಬಂದರು. ಅವರಿಗೆ ಘಟನೆ ವಿವರಣೆ ನೀಡದೆ ಎಂದರು. ಇಂತಹ ಘಟನೆಗಳು ಮತ್ತ ಮರುಕಳಿಸದಂತೆ ಜನರ ಸುರಕ್ಷತೆಗಾಗಿ ಹೆದ್ದಾರಿಗಳ ಗಸ್ತು ತಿರುಗಲು ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ. ಎಕ್ಸ್‌ಪ್ರೆಸ್ ವೇ ನಲ್ಲಿ ನಿಯಮಿತವಾಗಿ ಬಿಟ್ ನಲ್ಲಿರುವಂತೆ, ನಿರ್ಜನ ಪ್ರದೇಶಗಳಲ್ಲಿ ನಿಗಾವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರ (SP) ಯತೀಶ್ ಹೇಳಿದರು.












Click it and Unblock the Notifications