ಎಂಎಂ ಕಲಬುರ್ಗಿ ಅವರಿಗೆ ತಲೆ ಕೆಟ್ಟಿದೆ : ಮುತಾಲಿಕ್
ಬೆಂಗಳೂರು, ಜೂ. 10 : "ದೇವತೆಗಳು ಮೂರ್ತ ಸ್ವರೂಪವಾದ್ದರಿಂದ ದೇವತೆಗಳ ವಿಗ್ರಹ, ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ತಪ್ಪೇನು ಇಲ್ಲ ವಿಗ್ರಹಗಳಿಗೆ ಕಾಡುವ ಕಾಪಾಡುವ ಶಕ್ತಿ ಇಲ್ಲ" ಎಂದು ಪ್ರೊ. ಎಂ.ಎಂ. ಕಲಬುರ್ಗಿ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ಯುವ ಮೋರ್ಚಾ ಖಂಡಿಸಿದೆ. ಕಲಬುರ್ಗಿ ಅವರನ್ನು ಬಂಧಿಸಬೇಕೆಂದು ಮೋರ್ಚಾ ಆಗ್ರಹಿಸಿದೆ.
ಮಂಗಳವಾರ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಎಂ.ಎಂ.ಕಲಬುರ್ಗಿ ಅವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಕಲಬುರ್ಗಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದಲ್ಲಿ ಸಂಘರ್ಷ ಉಂಟು ಮಾಡಲು ಯತ್ನಿಸುತ್ತಿರುವ ಕಲಬುರ್ಗಿ ಅವರನ್ನು ಬಂಧಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಕಲಬುರ್ಗಿ ಅವರಿಗೆ ತಲೆಕೆಟ್ಟಿದೆ : ದೇವತೆಗಳ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಕಲಬುರ್ಗಿ ಅವರಿಗೆ ತಲೆ ಕೆಟ್ಟಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. [ಎಂ.ಎಂ.ಕಲಬುರ್ಗಿ ಹೇಳಿದ್ದೇನು?]
ಕಲುಬುರ್ಗಿ ಅವರು ಎಂತಹ ಸಂಶೋಧನೆ ಮಾಡಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ತಿಳಿದಿಲ್ಲ. ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಇಂತಹವರನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಮುತಾಲಿಕ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications