ಬೆಂಗಳೂರಿನಲ್ಲಿ 'ದಿ ಕೇರಳ ಸ್ಟೋರಿ' ವಿಶೇಷ ಪ್ರದರ್ಶನ ಏರ್ಪಡಿಸಿದ ಬಿಜೆಪಿ!: ಜೆಪಿ ನಡ್ಡಾ ಮುಖ್ಯ ಅತಿಥಿ

ಬೆಂಗಳೂರು, ಮೇ. 07: 'ದಿ ಕೇರಳ ಸ್ಟೋರಿ' ಚಿತ್ರದ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ನಡುವೆಯೇ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬೆಂಗಳೂರಿನಲ್ಲಿ ಭಾನುವಾರ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಅವರು ಸಿನಿಮಾ ನೋಡಲಿದ್ದಾರೆ.

ಕರ್ನಾಟಕದ ಬಿಜೆಪಿ ಘಟಕವು ಬೆಂಗಳೂರಿನಲ್ಲಿ ಯುವತಿಯರಿಗಾಗಿ ವಿವಾದಾತ್ಮಕ ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ' ವಿಶೇಷ ಪ್ರದರ್ಶನವನ್ನು ಏರ್ಪಡಿಸಿದೆ. ಭಾನುವಾರ ಸಂಜೆ ಗರುಡಾ ಮಾಲ್‌ನಲ್ಲಿ ನಡೆಯುವ ಈ ಸ್ಕ್ರೀನಿಂಗ್‌ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ಯುವತಿಯರು ಚಿತ್ರದ ಪ್ರದರ್ಶನಕ್ಕೆ ಹಾಜರಾಗುವಂತೆ ಒತ್ತಾಯಿಸಿದ್ದಾರೆ.

BJP unit arranges a special screening of The Kerala Story JP Nadda will attend

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ದಿ ಕೇರಳ ಸ್ಟೋರಿ' ಎಂಬುದು ಕೇರಳ ಮತ್ತು ದೇಶದ ಇತರ ಭಾಗಗಳಲ್ಲಿನ ನಮ್ಮ ಕಾಲದ ಸಾಮಾಜಿಕ ಸಮಸ್ಯೆಗಳನ್ನು ದಾಖಲಿಸುವ ಮತ್ತು ಪ್ರತಿಬಿಂಬಿಸುವ ಪ್ರಮುಖ ಚಲನಚಿತ್ರವಾಗಿದೆ. ಇದು ನಮ್ಮ ಯುವತಿಯರಿಗೆ ಮಹತ್ವದ ಸಂದೇಶವನ್ನು ನೀಡಲಿದೆ. ಇಂದು ಸಂಜೆ 8:45 ಗಂಟೆಗೆ ಎಂಜಿ ರೋಡ್‌ನ ಗರುಡಾ ಮಾಲ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೀ ಅವರ ಜೊತೆಗೆ ಸಿನಿಮಾ ನೋಡಲು ಬೆಂಗಳೂರಿನ ಯುವ ವಿದ್ಯಾರ್ಥಿನಿಯರನ್ನು ಆಹ್ವಾನಿಸುತ್ತಿದ್ದೇವೆ. 100 ಸೀಟುಗಳು ಮಾತ್ರ ಲಭ್ಯವಿವೆ. ದಯವಿಟ್ಟು ಕೆಳಗಿನ ಫಾರ್ಮ್‌ನಲ್ಲಿ ತಕ್ಷಣ ನೋಂದಾಯಿಸಿ" ಎಂದಿದ್ದಾರೆ.

ಸುದೀಪ್ತೋ ಸೇನ್ ನಿರ್ದೇಶನದ ಚಿತ್ರದ ಟೀಸರ್‌ನಲ್ಲಿ ಕೇರಳದಿಂದ ಕಾಣೆಯಾದ 32,000 ಕ್ಕೂ ಹೆಚ್ಚು ಮಹಿಳೆಯರು ಐಎಸ್‌ಗೆ ನೇಮಿಸಿಕೊಲ್ಳಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿತ್ತು. ಭಾರಿ ಟ್ರೋಲ್ ಮತ್ತು ಟೀಕೆಗೆ ಒಳಗಾದ ನಂತರ ಸಾಮಾಜಿಕ ಮಾಧ್ಯಮದಿಂದ ಟೀಸರ್ ಅನ್ನು ತೆಗೆದುಹಾಕಲು ಒಪ್ಪಿಕೊಂಡಿದ್ದಾರೆ. ಜೊತೆಗೆ ಇದರಲ್ಲಿ 2,000 ಕ್ಕೂ ಹೆಚ್ಚು ಮಹಿಳಖೆಯರು ಎಂಬುದನ್ನೂ ಮೂವರು ಮಹಿಳೆಯರು ಎಂದು ಬದಲಾಯಿಸಿದೆ.

BJP unit arranges a special screening of The Kerala Story JP Nadda will attend

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಕರ್ನಾಟಕದಲ್ಲಿ ಮಾಡಿದ ಭಾಷಣದಲ್ಲಿ ಚಲನಚಿತ್ರವನ್ನು ಉಲ್ಲೇಖಿಸಿ, 'ದಿ ಕೇರಳ ಸ್ಟೋರಿ' ಚಲನಚಿತ್ರವು ಸಮಾಜದಲ್ಲಿ ಭಯೋತ್ಪಾದನೆಯ ಪರಿಣಾಮಗಳನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ ಕೇರಳದಂತಹ ಪರಿಶ್ರಮಿ, ಪ್ರತಿಭಾವಂತರ ಸುಂದರ ನಾಡು ಮತ್ತು ಬೌದ್ಧಿಕ ಜನರ ಮೇಲಿನ ಭಯೋತ್ಪಾದನೆಯ ಪರಿಣಾಮಗಳನ್ನು ತಿಳಿಸುತ್ತಿದೆ ಎಂದಿದ್ದರು.

"ಕಾಂಗ್ರೆಸ್ ಪಕ್ಷವು ಈಗ ಚಲನಚಿತ್ರವನ್ನು ನಿಷೇಧಿಸಲು ಮತ್ತು ಭಯೋತ್ಪಾದಕ ಅಂಶಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ಗೆ ಹಲವು ವಿಷಯಗಳನ್ನು ನಿಷೇಧಿಸಲು ಮತ್ತು ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಮಾತ್ರ ತಿಳಿದಿದೆ" ಎಂದು ಟೀಕಿಸಿದ್ದರು. ದಿ ಕೇರಳ ಸ್ಟೋರಿ ಚಿತ್ರವು ಮೇ 5 ರಂದು ಬಿಡುಗಡೆಯಾಗಿದ್ದು, ಕೇರಳದಲ್ಲಿ ಬ್ಯಾನ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+