ವಿಧಾನಸಭಾ ಕಲಾಪವನ್ನು ಮುಂದೂಡಲು ಬಿಜೆಪಿ ತಂತ್ರ

ಬೆಂಗಳೂರು, ಅಕ್ಟೋಬರ್ 10: ವಿಧಾನಸಭೆ ಕಲಾಪವನ್ನು ಮುಂದೂಡಲು ಬಿಜೆಪಿ ತಂತ್ರ ರೂಪಿಸಿದೆ. ಎಲ್ಲರಿಗೂ ತಿಳಿದಿರುವಂತೆ ಕಲಾಪ ಆರಂಭವಾಗುತ್ತಿದ್ದಂತೆ ಮೊದಲು ನೆರೆ ಪರಿಹಾರ ಚರ್ಚೆ ಆರಂಭವಾಗಲಿದೆ.

ನೆರೆ ಪರಿಹಾರ ವಿಚಾರವನ್ನು ಎತ್ತಲು ವಿರೋಧಪಕ್ಷಗಳು ಉಪಾಯ ಮಾಡಿವೆ. ಆದರೆ ನೆರೆ ಪರಿಹಾರ ಚರ್ಚೆಯಿಂದ ಪಾರಾಗಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಸಂತಾಪ ಸೂಚನೆಯ ಬಳಿಕ ಬಜೆಟ್ ಲೇಖಾನುದಾನದ ಚರ್ಚೆ, ಈ ಮೂಲಕ ನೆರೆ ಪರಿಹಾರದ ವಿಚಾರ ಚರ್ಚೆಗೆ ಬಂದರೆ ಸದನದಲ್ಲಿ ಗದ್ದಲ ಸೃಷ್ಟಿಯಾಗುತ್ತದೆ. ಗದ್ದಲ ಸೃಷ್ಟಿಯಾದರೆ ಕಲಾಪವನ್ನು ಮುಂದೂಡಲು ಬಿಜೆಪಿ ಉಪಾಯ ರೂಪಿಸಿದೆ.

ಈ ಚಳಿಗಾಲದ ಅಧಿವೇಶನದಲ್ಲಿ ಬೊಕ್ಕಸ ಖಾಲಿ, ನೆರೆ ಪರಿಹಾರ ಕಾರ್ಯ, ಕೇಂದ್ರದ ಅಲ್ಪ ಪರಿಹಾರ ವಿಚಾರಗಳೇ ಹೈಲೈಟ್ ಮಾಡಲಾಗುತ್ತದೆ.

BJP Strategy To Postpone Assembly Session

ಬೊಕ್ಕಸ ಖಾಲಿ, ನೆರೆ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸನ್ನದ್ಧವಾಗಿವೆ. ಪ್ರತಿಪಕ್ಷಗಳ ಠಕ್ಕರ್ ಗೆ ಪ್ರತಿಯಾಗಿ ಠಕ್ಕರ್ ಕೊಡಲು ಬಿಜೆಪಿಯೂ ತಕ್ಕ ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಅಂಕಿ-ಅಂಶಗಳ ಮೂಲಕ ಉತ್ತರ ಕೊಡಲು ಬಿಜೆಪಿ ಮುಂದಾಗಿದೆ.

ಕಾಂಗ್ರೆಸ್ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ನೇಮಕರಾಗಿದ್ದಾರೆ. ಇದು ಸದನದಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಬಲ ತುಂಬಲಿದ್ದು, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವಿನ ವಾಕ್ಸಮರ ಸಾಕಷ್ಟು ಕುತೂಹಲ ಹುಟ್ಟಿಸಲಿದೆ.

ಇನ್ನುಳಿದಂತೆ ಮೊದಲ ದಿನವೇ ಲೇಖಾನುದಾನಕ್ಕೆ ಸರ್ಕಾರ ಸದನದಲ್ಲಿ ಅನುಮೋದನೆ ಪಡೆದುಕೊಳ್ಳಲಿದೆ. ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಮೈತ್ರಿ ಅವಧಿಯ ಬಜೆಟ್ ಅನ್ನೇ ಉಳಿದ ಅವಧಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ನೆರೆಪೀಡಿತ ಜಿಲ್ಲೆಗಳಿಗೆ ಕೆಲವೊಂದು ಹೊಸ ಪರಿಹಾರ ಕಾರ್ಯಕ್ರಮಗಳನ್ನೂ ಸೇರಿಸಿ ಲೇಖಾನುದಾನಕ್ಕೆ ಒಪ್ಪಿಗೆ ತೆಗೆದುಕೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+