Get Updates
Get notified of breaking news, exclusive insights, and must-see stories!

ಜನಾರ್ಧನ ರೆಡ್ಡಿ ಉಚ್ಚಾಟಿಸಿ, ಶ್ರೀರಾಮುಲುಗೆ ಕೇಂದ್ರ ಮಂತ್ರಿ ಸ್ಥಾನ ನೀಡಿ: ಬಿಜೆಪಿಗೆ ಬಹಿಷ್ಕಾರದ ಎಚ್ಚರಿಕೆ

ಬೆಂಗಳೂರು, ಜನವರಿ 26: ಶಾಸಕ ಗಾಲಿ ಜನಾರ್ಧನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಮಧ್ಯದ ಜಗಳ ಮತ್ತೊಂದು ಹಂತಕ್ಕೆ ಹೋಗುವ ಸೂಚನೆಗಳು ಲಭಿಸಿವೆ. ಈ ಬಗ್ಗೆ ಬಿಜೆಪಿ ನಾಯಕರು ಎಲ್ಲವು ಸರಿ ಹೋಗಲಿದೆ ಎಂದು ಹೇಳಿದ್ದಾರೆ. ಸ್ನೇಹಿತರ ಬದ್ಧ ವೈರಿಗಳಂತಾಗಿದ್ದಾರೆ. ಈ ಮಧ್ಯೆ ಶ್ರೀರಾಮುಲು ಅವರನ್ನು ಕೇಂದ್ರದ ಮಂತ್ರಿ ಮಾಡದಿದ್ದರೆ ಬಿಜೆಪಿ ಬಹಿಷ್ಕರಿಸುವುದಾಗಿ ಎಚ್ಚರಿಕೆಗಳು ಕೇಳಿ ಬಂದಿವೆ.

ಹೌದು, ವಾಲ್ಮಿಕಿ ಸಮುದಾಯದ ನಾಯಕರಾದ ಶ್ರೀರಾಮುಲು ಅವರಿಗೆ ಬಿಜೆಪಿಯು ರಾಜ್ಯಸಭಾ ಸದಸ್ಯತ್ವ ನೀಡಿ, ಕೇಂದ್ರ ಮಂತ್ರಿ ಮಾಡದೇ ಹೋದಲ್ಲಿ ವಾಲ್ಮಿಕಿ ಸಮಯದಾಯವು ಬಿಜೆಪಿಯನ್ನು ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬೈಕಾಟ್ ಮಾಡಬೇಕಾಗುತ್ತದೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಎಚ್ಚರಿಕೆ ನೀಡಿದರು.

BJP Should Make B Sriramulu as Union Minister Otherwise Will Boycott BJP Valmiki Community

ಬೆಂಗಳೂರಿನಲ್ಲಿ ಭಾನುವಾರ ವಾಲ್ಮಿಕಿ ಸ್ವಾಭಿಮಾನಿ ಸಂಘ, ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ, ಶ್ರೀರಾಮುಲು ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದಲ್ಲಿ ನಡೆದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಅವರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು.

ಜನಾರ್ಧನ ರೆಡ್ಡಿ ಉಚ್ಚಾಟಿಸಿ, ರಾಮಲು ಮಂತ್ರಿ ಮಾಡಿ

ಬಿಜೆಪಿ ಪಕ್ಷವು ಒಂದು ವಾರದೊಳಗೆ ಜನಾರ್ಧನ ರೆಡ್ಡಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡದೇ ಹೋದಲ್ಲಿ ಉಗ್ರ ಹೋರಾಟದ ಬಿಸಿ ಮುಟ್ಟಿಸಲಿದ್ದೇವೆ ಎಂದರು. ಬಿಜೆಪಿಯು ಶ್ರೀರಾಮುಲು ಅವರಿಗೆ ಮಾಡಿದ ಅನ್ಯಾಯಕ್ಕೆ ಪರಿಹಾರವಾಗಿ ಅವರನ್ನು ಕೇಂದ್ರದ ಮಂತ್ರಿ ಮಾಡಲಿ, ಬಿಜೆಪಿಯ ಇತಿಹಾಸದಲ್ಲೇ ವಾಲ್ಮಿಕಿ ಸಮುದಾಯದ ನಾಯಕರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ಉದಾಹರಣೆ ಇಲ್ಲ. ಈಗಲಾದರೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.

ಅಸಲಿಗೆ ಸಂಡೂರು ಉಪಚುನಾವಣೆ ಸೋಲಿನ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜನಾರ್ಧನ ರೆಡ್ಡಿ ಹೊರಬೇಕಿತ್ತು. ತಮ್ಮ ತಪ್ಪನ್ನ ಮರೆ ಮಾಚಲು ಶ್ರೀರಾಮುಲು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಒಂದು ವೇಳೆ ರಾಮುಲು ಅವರು ಸಂಡೂರಿನಲ್ಲಿ ಪ್ರಚಾರ ಮಾಡದೇ ಹೋಗಿದ್ದರೆ, ಬಿಜೆಪಿ ಬರೀ ಸೋಲಲ್ಲ, ಹೀನಾಯ ಸೋಲು ಅನುಭವಿಸಬೇಕಿತ್ತು.

ಇಡೀ ದೇಶದಲ್ಲಿ 15 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮಿಕಿ ಸಮುದಾಯವನ್ನೇ ಬಿಜೆಪಿ ಕಡೆಗಣಿಸುತ್ತಿರುವುದು ತಮ್ಮ ವಿನಾಶಕ್ಕೆ ತಾವೇ ದಾರಿ ಮಾಡಿಕೊಳ್ಳುತ್ತಿದೆ. ಜನಾರ್ಧನ ರೆಡ್ಡಿ ನಿರಾಧಾರವಾಗಿ ಆರೋಪ ಮಾಡುತ್ತಿದ್ದರೂ ಬಿಜೆಪಿ ಕೈಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ವಿಷಯ. ಈ ಧೋರಣೆ ಹೀಗೆ ಮುಂದುವರೆದರೆ, ವಾಲ್ಮಿಕಿ ಸಮಯದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುಡುಗಿದರು.

ಶ್ರೀರಾಮುಲು ಅವರು ವಾಲ್ಮಿಕಿ ಸಮುದಾಯದ ರಾಷ್ಟ್ರೀಯ ನಾಯಕ, ಈ ಸಮುದಾಯದ ಋಣ ಸಂದಾಯ ಮಾಡಬೇಕೆಂಬ ಆಶಯವಿದ್ದರೆ, ರಾಮುಲು ಅವರಿಗೆ ಅಧಿಕಾರ ನೀಡಿ ಎಂದು ಮನವಿ ಮಾಡಿದರು.

ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಎಂ. ರಾಜು ಮಾತನಾಡಿ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯವು ಸದಾ ಸಹೋದರರಂತೆ ಇರುತ್ತಾರೆ. ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೆ ಅದನ್ನು ಎಸ್‌ಸಿ ಸಮುದಾಯ ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ.

ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ಜೈಲಿಗೆ ಹೋದ ವ್ಯಕ್ತಿ ಜನಾರ್ಧನ ರೆಡ್ಡಿ ಮಾತನ್ನು ಕೇಳಿ ಕೆಲ ನಾಯಕರು ಪಕ್ಷದ ಕಟ್ಟಾಳಾದ ರಾಮುಲು ಅವರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ, ಈ ಕೂಡಲೇ ಶ್ರೀರಾಮುಲು ಅವರ ಬಳಿ, ಜನಾರ್ಧನ ರೆಡ್ಡಿ ಹಾಗೂ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದರು.

ವಾಲ್ಮಿಕಿ ಹಾಗೂ ದಲಿತ ಸಮುದಾಯಗಳನ್ನು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಕಡೆಗಣಿಸುತ್ತಲೇ ಬಂದಿದ್ದಾರೆ. ಈ ಸಮುದಾಯದ ನಾಯಕರು ಬೆಳೆಯುವುದು ಆ ಪಕ್ಷದ ನಾಯಕರೇ ಇಷ್ಟವಿದ್ದಂತಿಲ್ಲ. ಬಿಜೆಪಿ ಶ್ರೀರಾಮುಲು ಅವರಿಗೆ ಮಾಡುತ್ತಿರುವ ಅನ್ಯಾಯ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಶ್ರೀ ರಾಮುಲು ಅವರ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ ಎಂದು ಮಾಜಿ ಸಚಿವರ ಪರ ವಾಲ್ಮಿಕಿ ಯುವಬ್ರಿಗೇಡ್‌ ಸದಸ್ಯ ಶಿವನಾಯಕ ಬ್ಯಾಟ್ ಬೀಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+