ಅನಂತರಾಜು ಆತ್ಮಹತ್ಯೆ ಪ್ರಕರಣ: ಪತ್ನಿ ಸುಮಾ ವಿರುದ್ಧ ಪ್ರಿಯತಮೆ ದೂರು
ಬೆಂಗಳೂರು,ಜೂನ್1: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ ಆಡಿಯೋಗಳು ರಿಲೀಸ್ ಆಗ್ತಿದ್ದಾವೆ. ಅನಂತರಾಜು ಪತ್ನಿ ಸುಮಾ ಮತ್ತು ಅನಂತರಾಜುವಿನ ಪ್ರಿಯತಮೆ ರೇಖಾ ನಡುವಿನ ಸಂಭಾಷಣೆಗಳು ರಿಲೀಸ್ ಆಗ್ತಿವೆ. ಅನಂತರಾಜು ಮೊದಲ ಸಲ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿಯೂ ಮಾತನಾಡಿದ್ದ ಆಡಿಯೋ ರೀವಿಲ್ ಆಿದೆ. ಇದರ ನಡುವೆ ರೇಖಾಳನ್ನು ಬ್ಯಾಡರಹಳ್ಳಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಈ ವೇಳೆ ಅನಂತ್ ಸಾವಿಗೆ ಪತ್ನಿ ಸುಮಾ ಕಾರಣ ಎಂದು ರೇಖಾ ದೂರು ನೀಡಿದ್ದಾಳೆ.
ಅನಂತರಾಜುವಿನ ಪ್ರಿಯತಮೆ ರೇಖಾ, ""ನನಗೆ ಮತ್ತು ಮಕ್ಕಳಿಗೆ ಜೀವಬೆದರಿಕೆ ಇದೆ. ನನಗೆ ಅನಂತ ರಾಜು ಆತ್ಮಹತ್ಯೆ ತುಂಬಾ ನೋವು ತಂದಿದೆ. ನಾನು ಹನಿಟ್ರಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ನಾವು ಆರು ವರ್ಷದಿಂದ ಅನಂತರಾಜು ಜೊತೆಗೆ ಲೀವಿಂಗ್ ರಿಲೇಷನ್ಶೀಪ್‌ನಲ್ಲಿದ್ವಿ. ಸುಮಾಳ ಕಿರುಕುಳ ದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋದು. ಅನಂತರಾಜು ಈ ಹಿಂದೆ ಒಂದು ಸಾರಿ ಆತ್ಮಹತ್ಯೆ ಗೆ ಯತ್ನಿಸಿದ್ದರು. ಆ ವೇಳೆ ಬಲವಂತವಾಗಿ ಡೆತ್ ನೋಟ್ ಬರೆಸಿಕೊಂಡಿದ್ದಾರೆ. ನಾನು ಸಾಮಾನ್ಯ ಮಹಿಳೆ ನಂಗೆ ದಿನೇ ದಿನೇ ಕಿರುಕುಳ ಹೆಚ್ಚಾಗ್ತಿದೆ. ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ದ ಎಂದಿದ್ದಾರೆ.

ಸಿಎಂ ಗೃಹ ಸಚಿವರು ನ್ಯಾಯ ಕೊಡಿಸಲಿ
ಸಿಎಂ ಬಸವರಾಜು ಬೊಮ್ಮಯಿ, ಗೃಹಸಚಿವರು ನನಗೆ ನ್ಯಾಯ ಕೊಡಿಸಬೇಕು. ನಾನು ಯಾವುದೇ ಆಡಿಯೋವನ್ನು ತಿರುಚಿಲ್ಲ ಎಡಿಟ್ ಮಾಡಿಲ್ಲ. ಪೊಲೀಸರು ಬೇಕಾದರೇ ಎಫ್ಎಸ್ಎಲ್‌ಗೆ ಆಡಿಯೋವನ್ನು ಕಳುಹಿಸಲಿ'' ಎಂದು ಹೇಳಿದ್ದಾಳೆ.

ರೇಖಾ ಮತ್ತು ಸುಮಾರ ಮತ್ತೊಂದು ಆಡಿಯೋ ರಿವಿಲ್
ಬಿಜೆಪಿ ಮುಖಂಡ ಅನಂತರಾಜು ಮೇ12 ರಂದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಅನಂತರಾಜು ಮೇ 12ಕ್ಕೆ ಮುನ್ನವೂ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗುತ್ತಿದೆ. ಈ ವೇಳೆ ಮಾತನಾಡಿದ್ದ ಸುಮಾ ಮತ್ತು ರೇಖಾರ ಆಡಿಯೋ ರಿವಿಲ್ ಆಗಿದೆ. ಈ ಆಡಿಯೋದಲ್ಲಿ ಸುಮಾ ರೇಖಾಗೆ ಅನಂತರಾಜು ಡೆತ್ ನೋಟ್‌ನಲ್ಲಿ ನಿನ್ನ ಹೆಸರನ್ನು ಬರೆದಿದ್ದಾನೆ. ನಾನು ಪೊಲೀಸರಿಗೆ ದೂರುಕೊಟ್ಟಿಲ್ಲ. ನಾನು ಯಾವಾಗ ಬೇಕಾದ್ರು ಕೊಡಬಹುದು. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ದೂರು ಕೊಟ್ಟಿಲ್ಲ. ನೀನು ಬಂದು ಬರೆದುಕೊಡು ನೀನು ಯಾವಾಗ್ಲೋ ಬಂದರೆ ಕಾಯೋಕಾಗುತ್ತಾ. ಇದಕ್ಕೆಲ್ಲಾ ಕೊನೆ ಯಾವಾಗ ಎಂದು ರೇಖಾ ಕೇಳಿದಾಗ ಅನಂತರಾಜು ಸತ್ತಗಲೇ ಇದಕ್ಕೇಲ್ಲಾ ಕೊನೆ ಎಂದು ಹೇಳುವ ಆಡಿಯೋ ರಿವಿಲ್ ಆಗಿದೆ. ಆದರೆ ಆಡಿಯೋವನ್ನು ಎಡಿಟ್ ಮಾಡಿರುವ ಅನುಮಾನಗಳು ಆಡಿಯೋದಲ್ಲಿ ಕೇಳಿಸುತ್ತಿದೆ.

ಸುಮಾ ವಿರುದ್ದ ದೂರು ಕೊಟ್ಟ ರೇಖಾ
ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಪ್ರಕರಣದಲ್ಲಿ ರೇಖಾ ಸಹ ದೂರನ್ನು ನೀಡಿದ್ದಾಳೆ. ಅನಂತರಾಜು ಆತ್ಮಹತ್ಯೆ ಕೇಸ್ ಆರೋಪಿ ರೇಖಾ ಅನಂತರಾಜು ಪತ್ನಿ ವಿರುದ್ಧ ದೂರು ದಾಖಲಿಸಿದ್ದಾಳೆ. ಬ್ಯಾಡರಹಳ್ಳಿ ಠಾಣೆಗೆ ಆಗಮಿಸಿ ದೂರು ನೀಡಿದ ರೇಖಾ, ಅನಂತರಾಜು ಸಾವಿಗೆ ಪತ್ನಿ ಸುಮಾ ಕಾರಣ ಮತ್ತು ನನಗೆ ಜೀವಭಯ ಇದ್ದು ಈ ಕುರಿತು ತನಿಖೆ ನಡೆಸಿ ರಕ್ಷಣೆ ನೀಡುವಂತೆ ದೂರು ದಾಖಲಿಸಿದ್ದಾಲೆ. ರೇಖಾ ನೀಡಿರುವ ದೂರಿನ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಎನ್‌ಸಿಆರ್ ದಾಖಲಿಸಿ ಹಳೇ ಪ್ರಕರಣದಲ್ಲಿ ಈ ದೂರನ್ನ ತನಿಖೆ ನಡೆಸುವುದಾಗಿ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ಸವತಿ ಮತ್ಸರ
ಹನಿಟ್ರ್ಯಾಪ್, ಹಣಕ್ಕಾಗಿ ಡಿಮ್ಯಾಂಡ್ ಅನ್ನೋ ವಿಚಾರದಲ್ಲಿ ಸುಮಾ ಮತ್ತು ರೇಖಾರ ಸವತಿ ಮತ್ಸರ ಅನಂತನ ಸಾವಿನ ಕಾರಣವಾಗಿದೆ. ಇವರಲ್ಲಿ ಯಾರು ಸರಿ ಯಾರದು ತಪ್ಪು ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ. ಆದರೆ ರೇಖಾ ಮತ್ತು ಸುಮಾ ಆತ್ಮಹತ್ಯೆ ಪ್ರಕರಣಕ್ಕೆ ಆರೋಪ ಮತ್ತು ಪ್ರತ್ಯಾರೋಪಗಳಿಂದ ತಮ್ಮ ಘನತೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications