ಅನಂತರಾಜು ಆತ್ಮಹತ್ಯೆ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಸೀಕ್ರೇಟ್ ಅಡಿಯೋ!

ಬೆಂಗಳೂರು, ಮೇ. 24: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ಅವರ ಪತ್ನಿ ಸುಮಾ ನಿರಪರಾಧಿಯೇ? ಅನಂತರಾಜು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದಾಗ ಅತನ ಪತ್ನಿಯೇ ಮಧ್ಯರಾತ್ರಿ ಆಸ್ಪತ್ರೆಗೆ ಸೇರಿಸಿ ಜೀವ ಕಾಪಾಡಿದ್ದರೆ? ಅನಂತರಾಜು ಆತ್ಮಹತ್ಯೆಗೆ ಅತನ ಪತ್ನಿ ಸುಮಾ ಅವರೇ ಕಾರಣ ಎಂದು ಬಿಂಬಿಸಲು ಬಂಧಿತ ರೇಖಾ ನಾಟಕ ಆಡಿದ್ದಾರೆಯೇ? ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ಈಗ 'ಒನ್ ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿರುವ ಆಡಿಯೋ ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ, ಇದರ ಸತ್ಯಾಸತ್ಯತೆಯೂ ಮತ್ತೆ ಬಯಲಾಗುವ ಅಗತ್ಯತೆ ಇದೆ.

ರೇಖಾ ಸಹವಾಸ ಮಾಡಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅನಂತರಾಜು ಜೀವ ಕಾಪಾಡಿದ್ದೇ ಆತನ ಪತ್ನಿ ಸುಮಾ. ಆದರೆ, ಪೂರ್ವ ನಿಯೋಜಿತ ಪ್ಲಾನ್ ನಂತೆ ರೇಖಾ ಬಿಡುಗಡೆ ಮಾಡಿದ ಕೆಲವು ಅಡಿಯೋಗಳಿಂದ ಅನಂತರಾಜು ಅತ್ಮಹತ್ಯೆಗೆ ಅವರ ಪತ್ನಿ ಸುಮಾ ಅವರೇ ಕಾರಣ ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಅನಂತರಾಜುನನ್ನು ಹನಿಟ್ರ್ಯಾಪ್ ಸಂಕಷ್ಟದಿಂದ ಪಾರು ಮಾಡಲು ಪತ್ನಿಯಾಗಿ ಸುಮಾ ಪ್ರಾಮಾಣಿಕ ಪ್ರಯತ್ನ ಮಾಡಿದ್ದಳು. ಈ ವಾಸ್ತವ ಅರಿಯದೇ ಸುಮಾ ಅವರ ಮೇಲೆ ಇದೀಗ ಗೂಬೆ ಕೂರಿಸಲಾಗುತ್ತಿದೆ. ಸಂಬಂಧಿಕರು ಸುಮಾ ಅವರನ್ನು ಮಾತನಾಡಿಸುವುದೇ ಬಿಟ್ಟಿದ್ದು, ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ.

"ನಾನು ನನ್ನ ಗಂಡನನ್ನು ಸರಿ ಪಡಿಸಲು ಯತ್ನಿಸಿದೆ. ಎರಡು ಸಲ ಆತ್ಮಹತ್ಯೆಗೆ ಯತ್ನಿಸಿದಾಗ ನಾನೇ ಜೀವ ಕಾಪಾಡಿದೆ. ಈಗ ನಾನೇ ಆತನನ್ನು ಕೊಂದುಬಿಟ್ಟೆ ಎಂದು ಬಿಂಬಿಸಲಾಗುತ್ತಿದೆ. ಈ ಅವಮಾನ ತಾಳಲಾರದೇ ನನ್ನ ಮಕ್ಕಳೊಂದಿಗೆ ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ,'' ಎಂದು ತನ್ನ ಅಪ್ತರ ಬಳಿ ಸುಮಾ ಕಣ್ಣೀರು ಹಾಕಿದ್ದಾರೆ. ಅನಂತರಾಜು ಆತ್ಮಹತ್ಯೆ ಹಿಂದೆ ಇರುವುದು ರೇಖಾ ಎಣೆದಿರುವ ಬಲೆ, ಸುಮಾ ಅವರ ಪಾತ್ರ ಇಲ್ಲ ಎಂಬುದಕ್ಕೆ ಒನ್ ಇಂಡಿಯಾ ಕನ್ನಡಕ್ಕೆ ಕೆಲವು ಮಹತ್ವದ ಸಂದೇಶಗಳು ಹಾಗೂ ಅಡಿಯೋ ರೆಕಾರ್ಡ್ ಲಭ್ಯವಾಗಿದೆ. ಪೊಲೀಸರಿಗೂ ಈ ದಾಖಲೆಗಳು ಕೈ ಸೇರಿವೆ ಎನ್ನಲಾಗಿದೆ.

ಅನಂತ ರಾಜು ಕಾಲಿಗೆ ಬಿದ್ದು ಕೇಳಿಕೊಂಡಿದ್ದ ಮಕ್ಕಳು

ಅನಂತ ರಾಜು ಕಾಲಿಗೆ ಬಿದ್ದು ಕೇಳಿಕೊಂಡಿದ್ದ ಮಕ್ಕಳು

ರೇಖಾ ಸಹವಾಸ ಮಾಡಿದ ಬಳಿಕ ಸುಮಾ ಅವರಿಂದ ಅನಂತರಾಜು ತುಂಬಾ ಅಂತರ ಕಾಯ್ದುಕೊಳ್ಳುತ್ತಿದ್ದ. ಆರು ವರ್ಷದಿಂದ ರಹಸ್ಯವಾಗಿ ಸಂಬಂಧ ಇಟ್ಟುಕೊಂಡಿದ್ದ ಅನಂತರಾಜು ಸಂಬಂಧ ವಿಚಾರ ಕೆಲ ತಿಂಗಳ ಹಿಂದಷ್ಟೇ ಬಯಲಿಗೆ ಬಂದಿತ್ತು. ರೇಖಾಳ ಸಹವಾಸ ಬಿಡುವಂತೆ ಪತ್ನಿ ಸುಮಾ ಅನೇಕ ಸಲ ಬುದ್ಧಿವಾದ ಹೇಳಿದ್ದಳು. ಅನಂತರಾಜು ಇಬ್ಬರು ಮಕ್ಕಳು ಕಾಲಿಗೆ ಬಿದ್ದು ಅಮ್ಮನನ್ನು ಕೈ ಬಿಡಬೇಡ ಎಂದು ಪರಿ ಪರಿ ಬೇಡಿಕೊಂಡಿದ್ದರು. ಅಂತಿಮವಾಗಿ ಪತ್ನಿಯ ಮಾತಿನಂತೆ ರೇಖಾ ಹನಿಟ್ರ್ಯಾಪ್ ಸಂಚಿನಿಂದ ಹೊರಗೆ ಬರಲು ಅನಂತರಾಜು ಪ್ರಯತ್ನ ಮಾಡಿದ್ದರು. ಅಲ್ಲಿಂದ ರೇಖಾ ಹೊಸ ನಾಟಕ ಶುರು ಮಾಡಿರುವ ಸಂಗತಿ ಇದೀಗ ಹೊರ ಬಿದ್ದಿದೆ.

ರೇಖಾಳ ಅಂತರ ಕಾಯ್ದುಕೊಂಡಿದ್ದ ಅನಂತು:

ರೇಖಾಳ ಅಂತರ ಕಾಯ್ದುಕೊಂಡಿದ್ದ ಅನಂತು:

ರೇಖಾ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಲು ಶುರುವಾದಾಗ ಅನಂತರಾಜು ಆಕೆಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದ. ರೇಖಾ ಅವಳೊಂದಿಗೆ ಮಾತನಾಡಲು ನಿರಾಕರಿಸಿದ್ದ. ಆ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಲು ಯತ್ನಿಸಿದ್ದ ರೇಖಾ, ಅನಂತರಾಜುನಿಂದ ಹಣ ಕೀಳಲು ಪ್ಲಾನ್ ರೂಪಿಸಿದ್ದಳು. ಅಲ್ಲದೇ ಅನಂತರಾಜು ನನ್ನ ಬಳಿ ಮಾತನಾಡದೇ ಹೋದರೆ, ನನಗೆ ಸೆಟ್ಲ್ ಮೆಂಟ್ ಮಾಡದಿದ್ದರೆ ಅನಂತರಾಜು ಮರ್ಯಾದೆ ತೆಗೆಯುತ್ತೇನೆ ನನ್ನ ಮಕ್ಕಳ ಭವಿಷ್ಯಕ್ಕಾಗಿ ಏನು ಬೇಕಾದರೂ ಮಾಡೋಕೆ ಸಿದ್ಧನಿದ್ದೇನೆ ಎಂದು ರೇಖಾ ಕಳುಹಿಸಿರುವ ಸಂದೇಶಗಳು ಒನ್ ಇಂಡಿಯಾಗೆ ಲಭ್ಯವಾಗಿವೆ.

ರೇಖಾ ಹಣ ಕೊಡಿಸುವಂತೆ ಪೀಡಿಸಿ ಕಳಿಸಿದ ಸಂದೇಶ:

ರೇಖಾ ಹಣ ಕೊಡಿಸುವಂತೆ ಪೀಡಿಸಿ ಕಳಿಸಿದ ಸಂದೇಶ:

ನೀವು ಯಾವುದೇ ಕಾರಣಕ್ಕೂ ಬಿಡೋ ಹಾಗೇ ಇಲ್ಲ. ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನಗೆ ಸೆಟ್ಲ್ ಮೆಂಟ್ ಮಾಡಿಸಿ ( ಹಣ ಕೊಡಿಸಿ) ನೆಮ್ಮದಿಯಾಗಿ ಇರಲಿ. ಇಲ್ಲದೇ ಹೋದ್ರೆ ಅವನ ಮರ್ಯಾದೆ ಸಮಾಜದ ಮುಂದೆ ಹಾಳಾಗುತ್ತದೆ. ಮೇ. 15 ವರೆಗೆ ಕಾಯ್ತೇನೆ. ನಾನು ನನ್ನ ಮಕ್ಕಳಿಗೋಸ್ಕರ ನಾನು ಯಾರ ಮರ್ಯಾದೆ ಬೇಕಾದರೂ ತೆಗೆಯುತ್ತೇನೆ. ಇವನ ವೈಫ್ ಇವನ ವಿಡಿಯೋ ನೋಡಿದ್ರೆ ಅಷ್ಟೇ, ಅಷ್ಟು ವಲ್ಗರ್ ಆಗಿ ನನ್ನ ಬಳಿ ನಡೆದುಕೊಂಡಿದ್ದಾನೆ. ಅದನ್ನು ನೋಡಿದರೆ ಅವನ ಹೆಂಡತಿಯೇ ಹೊಡೆದು ಅತನನ್ನು ಸಾಯಿಸ್ತಾಳೆ. ಅದಕ್ಕೆ ಅವಕಾಶ ಕೊಡಬೇಡಿ. ನನ್ನನ್ನು ಪರ್ಸನಲ್ ಅಗಿ ಅನಂತರಾಜು ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದು ರೇಖಾ ವ್ಯಕ್ತಿಯೊಬ್ಬರಿಗೆ ಮಾಡಿದ್ದಾರೆ ಎನ್ನಲಾದ ಸಂದೇಶಗಳು ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿವೆ.

ಅನಂತು ಜೀವ ಕಾಪಾಡಿದ್ದ ಪತ್ನಿ ಸುಮಾ:

ಅನಂತು ಜೀವ ಕಾಪಾಡಿದ್ದ ಪತ್ನಿ ಸುಮಾ:

ರೇಖಾ ಹಣಕ್ಕಾಗಿ ಹೀಗೆ ಬೇಡಿಕೆ ಇಟ್ಟು ಸಂದೇಶ ರವಾನಿಸಿದರೂ ಅನಂತರಾಜು ರೇಖಾಳನ್ನು ಒಂಟಿಯಾಗಿ ಭೇಟಿ ಮಾಡಲು ಹೋಗಿರಲಿಲ್ಲ. ನಾನು ಬಂದರೆ, ನನ್ನ ಪತ್ನಿ ಜತೆ ಬರುವುದಾಗಿ ಅನಂತರಾಜು ಸ್ಪಷ್ಟ ಸಂದೇಶವನ್ನು ರೇಖಾಗೆ ರವಾನಿಸಿದ್ದ. ಇದರ ಮಧ್ಯೆ ಅನಂತರಾಜು ಅವರ ಪತ್ನಿಯನ್ನು ಸಂಪರ್ಕಿಸಿ ರೇಖಾ ಸಂಭಾಷಣೆ ಮಾಡಿದ್ದಾಳೆ. ರೇಖಾಳ ಬೆದರಿಕೆ ಸಂದೇಶಗಳಿಗೆ ಹೆದರಿಸಿದ್ದ ಅನಂತರಾಜು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಮಧ್ಯರಾತ್ರಿ ಅವರ ಪತ್ನಿ ಸುಮಾ ಅವರೇ ಆಸ್ಪತ್ರೆಗೆ ದಾಖಲಿಸ ಜೀವ ಕಾಪಾಡಿದ್ದರು. ಆಸ್ಪತ್ರೆಯವರು ನೀಡಿದ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಪೊಲೀಸರಿಗೆ ಅತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿಸಿದ್ದರು.

ಸುಮಾ ಕುಟುಂಬ ಕಾಪಾಡಲು ಪೊಲಿಸರು ಪ್ರಯತ್ನ:

ಸುಮಾ ಕುಟುಂಬ ಕಾಪಾಡಲು ಪೊಲಿಸರು ಪ್ರಯತ್ನ:

ಅನಂತರಾಜು ಜತೆ ಸಂಬಂದ ಇಟ್ಟುಕೊಂಡವಳಂತೆ ಬಿಂಬಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ನಾಟಕಾಡಿದ್ದ ರೇಖಾ ಅಸಲಿ ವಿಚಾರ ಬ್ಯಾಡರಹಳ್ಳಿ ಠಾಣೆ ಪೊಲೀಸರ ಗಮನಕ್ಕೆ ಬಂದಿತ್ತು. ಈ ವೇಳೆ ಅನಂತರಾಜುಗೆ ಧೈರ್ಯ ತುಂಬಿದ್ದ ಪೊಲೀಸರು, ಯಾವುದೇ ಮಾನಹಾನಿಕರ ವಿಡಿಯೋ ಬಿಡುಗಡೆ ಮಾಡದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಅನಂತರಾಜು ತನ್ನ ವಿರುದ್ಧ ಯಾವುದೇ ವಿಡಿಯೋ ಬಾರದಂತೆ ತಡೆಯಾಜ್ಞೆ ತಂದಿದ್ದರು. ಅನಂತರಾಜು ಪತ್ನಿ ಸುಮಾ ಅವರನ್ನು ಠಾಣೆಗೆ ಕರೆಸಿ ರೇಖಾಳಿಂದ ಅಂತರ ಕಾಯ್ದುಕೊಂಡು ಕುಟುಂಬ ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿ ಕಳುಹಿಸಿದ್ದರು. ಟ್ರ್ಯಾಪ್ ಅಗಿದ್ದ ಅನಂತರಾಜು ಕುಟುಂಬವನ್ನು ಸರಿಪಡಿಸಲು ಪೊಲೀಸರು ಪ್ರಯತ್ನಿಸಿದ್ದರು. ಈ ಕುರಿತು ಅನಂತರಾಜು, ಸುಮಾ ಹಾಗೂ ಪೊಲೀಸ್ ಅಧಿಕಾರಿ ನಡುವೆ ನಡೆದಿರುವ ಮಾತುಕತೆ ವಿವರ ಲಭ್ಯವಾಗಿದೆ.

ಆಪ್ತಳಿಗಾಗಿ ಪತ್ನಿಯಿಂದ ಅಂತರ :

ಆಪ್ತಳಿಗಾಗಿ ಪತ್ನಿಯಿಂದ ಅಂತರ :

ಅನಂತರಾಜು ಆತ್ಮಹತ್ಯೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾನೆ. ರೇಖಾ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಹ ಉಲ್ಲೇಖಿಸಿದ್ದಾರೆ. ಆದರೆ ರೇಖಾಳ ಸಹವಾಸದ ನಂತರ ಪತ್ನಿಯಿಂದ ಅನಂತರಾಜು ಅಂತರ ಕಾಪಾಡಿಕೊಂಡಿದ್ದ. ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಸುಮಾಳನ್ನು ಅಂತರಾಜು ಉದ್ದೇಶಪೂರ್ವಕವಾಗಿ ದೂರ ತಳ್ಳುತ್ತಿದ್ದ. ತನ್ನ ಗಂಡನನ್ನು ಸರಿಪಡಿಸಲು ಪತ್ನಿ ಸುಮಾ ಸಾಕಷ್ಟು ಭಾರಿ ಪ್ರಯತ್ನ ಮಾಡಿದ್ದಳು. ಪತಿ ಮಾಡಿದ ತಪ್ಪನ್ನು ಮಣ್ಣಿಸಿ ತನ್ನ ಮಕ್ಕಳಿಗಾಗಿ ಹೊಸ ಬದುಕು ಅರಂಭಿಸಲು ಗಂಡನಿಗೆ ಬುದ್ಧಿವಾದ ಹೇಳಿದ್ದಳು. ಕೊನೆಗೂ ರೇಖಾಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ ಅನಂತರಾಜು ರೇಖಾಳ ಸಂದೇಶಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದು ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿರುವ ಅಡಿಯೋ ಹಾಗೂ ಸಂದೇಶಗಳು ದೃಢಪಡಿಸುತ್ತವೆ.

ರೇಖಾ ಪಬ್ ಡ್ಯಾನ್ಸ್ ವಿಡಿಯೋ ಕೂಡ ವೈರಲ್ :

ರೇಖಾ ಪಬ್ ಡ್ಯಾನ್ಸ್ ವಿಡಿಯೋ ಕೂಡ ವೈರಲ್ :

ಭವಿಷ್ಯದಲ್ಲಿ ಏನಾದರೂ ಅನಾಹುತ ಆದರೆ ರಕ್ಷಣೆ ಪಡೆಯುವ ಉದ್ದೇಶ ಇಟ್ಟುಕೊಂಡೇ ರೇಖಾ ಅಳುವ ನಾಟಕವಾಡಿ ಅಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು. ಯಾವಾಗ ಅನಂತರಾಜು ಡೆತ್ ನೋಟ್ ಪೊಲೀಸರ ಕೈಗೆ ಸೇರಿ ಬಂಧನ ಉರುಳು ಶುರುವಾಯಿತೋ "ತಾನೇ ಅನ್ಯಾಯಕ್ಕೆ ಒಳಗಾದವಳು" ಎಂದು ಬಿಂಬಿಸಿಕೊಳ್ಳಲು ಈ ಅಡಿಯೋ ಬಿಡುಗಡೆ ಮಾಡಿದ್ದಾಳೆ. ಏನೂ ಅರಿಯದೇ ಗಂಡನ ವಿಚಾರದಲ್ಲಿ ತುಸು ಕೋಪಗೊಂಡಿರುವ ಸುಮಾ ತನ್ನ ಸಂಸಾರ ಸರಿ ಪಡಿಸಿಕೊಳ್ಳುವ ಪ್ರಯತ್ನ ಮಾಡುವ ಭರದಲ್ಲಿ ಮಾತನಾಡಿದ್ದಾರೆ. ಆದರೆ, ರೇಖಾಳ ಅಸಲಿ ಕಥೆ ಆಕೆ ಕಳುಹಿಸಿರುವ ಸಂದೇಶಗಳಿಂದ ಬಹಿರಂಗವಾಗಿದ್ದು, ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ರೇಖಾ ಒಳ್ಳೆಯವಳು ಎಂದು ಬಿಂಬಿಸಿಕೊಳ್ಳಲು ಅಡಿಯೋ ಬಿಡುಗಡೆ ಮಾಡಿದ್ದಳು. ಇದೀಗ ರೇಖಾ ಪಬ್ ವೊಂದರಲ್ಲಿ ಕುಡಿದು ಡಾನ್ಸ್ ಮಾಡುತ್ತಿರುವ ವಿಡಿಯೋ ತುಣುಕು ವೈರಲ್ ಆಗಿದೆ.

Recommended Video

      ಬಿಎಸ್ ವೈ ಪುತ್ರನಿಗೆ ಟಿಕೆಟ್ ಮಿಸ್ | #PoliticalWrap | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+