ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ಯಾಂಕರ್ ನೀರಿನ ಮಾಫಿಯಾಕ್ಕೆ ಬಿಜೆಪಿ ಸರ್ಕಾರ ಬೆಂಬಲ: ಎಎಪಿ

|
Google Oneindia Kannada News

ಬೆಂಗಳೂರು, ಡಿ.1: ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು ಸೇರ್ಪಡೆಗೊಂಡು 13 ವರ್ಷಗಳು ಕಳೆಯುತ್ತಾ ಬಂದರೂ ಸರಿಯಾದ ಮೂಲ ಸೌಕರ್ಯಗಳನ್ನು ಒದಗಿಸಿದೆ ಸರ್ಕಾರಗಳು ಹಫ್ತಾ ವಸೂಲಿ ಮಾಡುವ ಪುಡಿ ರೌಡಿಗಳಂತೆ ವರ್ತಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಂಕರ್ ಮಾಫಿಯಾಗೆ ಜನರ ಹಣವನ್ನು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಡವಿಟ್ಟಿದೆ ಎಂದು ಆರೋಪ ಮಾಡಿದರು.

ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸವಲತ್ತುಗಳನ್ನು ನೀಡದೆ ಜನರಿಂದ ಮಾತ್ರ ಹಣ ವಸೂಲಿ ಮಾಡುತ್ತಿರುವ ಸರ್ಕಾರ ಈ ಹಳ್ಳಿಗಳ ಕಡೆ ತಿರುಗಿಯೂ ನೋಡಿಲ್ಲ. ಸುಮಾರು 12 ಲಕ್ಷ ಜನಸಂಖ್ಯೆ ಹೊಂದಿರುವ ಈ ಹಳ್ಳಿಗಳ ಅಭಿವೃದ್ಧಿಗೆ ಎಂದು ಈ ಮೊದಲು ಚದರ ಅಡಿಗೆ 150 ಶುಲ್ಕ ವಿಧಿಸಲಾಗುತ್ತಿತ್ತಿ ಈಗ ಅದನ್ನು 400 ರೂಗಳಿಗೆ ಹೆಚ್ಚಿಸಿ ಸರ್ಕಾರವೇ ಜನರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಇಷ್ಟೆಲ್ಲಾ ಹಫ್ತಾ ವಸೂಲಿ ಮಾಡುತ್ತಿರುವ ಸರ್ಕಾರ ಇದುವರೆಗು ಕನಿಷ್ಠ ಸೌಲಭ್ಯವಾದ ನೀರನ್ನೂ ಸಹ ಸರಿಯಾಗಿ ನೀಡಿಲ್ಲ. ಕಾವೇರಿ ನೀರು, ಉತ್ತಮ ಒಳ ಚರಂಡಿ ವ್ಯವಸ್ಥೆಗೆ ಎಂದು ಇದುವರೆಗು 5400 ಕೋಟಿ ಖರ್ಚು ಮಾಡಲಾಗಿದೆ ಈ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.

BJP govt is supporting Tanker water mafia in BBMP alleges AAP

ಈ ನೀರಿನ ಟ್ಯಾಂಕರ್ ಮಾಫಿಯಾ ವರ್ಷಕ್ಕೆ 150 ಕೋಟಿಗೂ ಹೆಚ್ಚಿನ ವ್ಯವಹಾರವಾಗಿದ್ದು ಈ ಹಣ ರಾಜಕಾರಣಿಗಳ ಸ್ಥಳೀಯ ಪುಡಾರಿಗಳ ಜೇಬು ಸೇರುತ್ತಿರುವುದರಿಂದ ಯಾರೂ ಈ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಒಂದು ಕುಟುಂಬ ಪ್ರತಿ ವರ್ಷ 20 ಸಾವಿರದಿಂದ 55 ಸಾವಿರದ ತನಕ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ದುರಸ್ಥಿಗೆ ಖರ್ಚು ಮಾಡುತ್ತಿದ್ದಾನೆ, ಈ ಹಣವೆಲ್ಲ ಸ್ಥಳೀಯ ಪುಡಾರಿಗಳ ಜೇಬು ತುಂಬಿಸುತ್ತಿದೆ. ಇವರಿಂದ ಸರ್ಕಾರ ಹಫ್ತಾ ವಸೂಲಿ ಮಾಡುತ್ತಿದೆ ಎಂದು ದೂರಿದರು.

BJP govt is supporting Tanker water mafia in BBMP alleges AAP

ಆಮ್ ಆದ್ಮಿ ಪಕ್ಷದ ಪ್ರಮುಖ ಆಗ್ರಹ:

* ಈ ಕೂಡಲೇ ಹೆಚ್ಚಳ ಮಾಡಿರುವ ಅಭಿವೃದ್ಧಿ ಶುಲ್ಕ ಹೆಚ್ಚಳ ಆದೇಶವನ್ನು ಹಿಂಪಡೆಯಬೇಕು.

* ಸರಿಯಾದ ಕುಡಿಯುವ ನೀರು ಹಾಗೂ ಒಳ ಚರಂಡಿ ವ್ಯವಸ್ಥೆ ಇರುವ ಮನೆಗಳಿಂದ ಮಾತ್ರ ಅಭಿವೃದ್ಧಿ ಶುಲ್ಕ ಪಡೆದುಕೊಳ್ಳಬೇಕು.

* ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಿ ಪ್ರತಿ ತಿಂಗಳು 200-300 ರೂಗೆ ಕಾವೇರಿ ನೀರು ಸೌಲಭ್ಯ ಸಿಗುವ ತನಕ ನೀರು ಸರಬರಾಜು ಮಾಡಬೇಕು.

ವಸಂತ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್ ಮಾತನಾಡಿ, ಇಷ್ಟೆಲ್ಲಾ ದೋಚುತ್ತಿರುವ ಬಿಬಿಎಂಪಿ ಮತ್ತು ಸರ್ಕಾರ ಅಭಿವೃದ್ಧಿ ಶುಲ್ಕವನ್ನು ಚದರ ಅಡಿಗೆ 150 ರಿಂದ 400 ಕ್ಕೆ ಹೆಚ್ಚಿಸಿದ್ದು 100 ಚದರ ಅಡಿ ಹೊಂದಿರುವ ಒಬ್ಬ ಜನಸಾಮಾನ್ಯ 25 ಸಾವಿರ ಎಲ್ಲಿ ಹೊಂದಿಸ ಬೇಕು ಎಂದು ಹೇಳಿದರು.

English summary
Aap Co-Convener Shantala Damle today alleged that Karnataka BJP govt is supporting Tanker water mafia in BBMP alleges AAP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X