ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ: ಸಿದ್ದರಾಮಯ್ಯ
ಬೆಂಗಳೂರು,ನವೆಂಬರ್ 1: ನೂರು ದಿನದ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ, ಯಡಿಯೂರಪ್ಪ ಸಿಎಂ ಆಗಿ ನಾಳೆಗೆ 100 ದಿನ, ಸರ್ಕಾರ ನೂರು ದಿನ ಪೂರೈಸಿದೆ, ಸರ್ಕಾರ ಬದುಕಿರುವುದೇ ಅನೈತಿಕವಾಗಿ, ಜನರ ಜನಾದೇಶಕ್ಕೆ ವಿರುದ್ಧವಾಗಿ ಬಂದಿದೆ.
ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ, ಎಲ್ಲ ಪಕ್ಷಗಳಲ್ಲೂ ಅತಂತ್ರ ಸ್ಥಿತಿಯೇ ಇತ್ತು, ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಅಂತ ಬಿಜೆಪಿಗೆ ಅವಕಾಶ, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದ್ದರು. ಎರಡು ದಿನ ಸಿಎಂ ಆಗಿ ಮೂರನೇ ದಿನಕ್ಕೆ ಬಿದ್ದುಹೋದ್ರು ನಂತರ ಜೆಡಿಎಸ್ ಜೊತೆ ನಾವು ಸರ್ಕಾರ ರಚಿಸಿದ್ದೆವು.
14 ತಿಂಗಳು ಮೈತ್ರಿ ಸರ್ಕಾರ ನಡೆದಿತ್ತು, 14 ತಿಂಗಳು ಬಿಜೆಪಿಯವರು ಕಿರಿಕಿರಿ ಮಾಡಿದ್ದರು, ಆಪರೇಷನ್ ಕಮಲದ ಮೂಲಕ ಶಾಸಕರನ್ನ ಸೆಳೆದಿದ್ದರು, ಈಗ ಅನೈತಿಕ ಸರ್ಕಾರ ರಚಿಸಿದ್ದಾರೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಆಪರೇಷನ್ ಕಮಲ ಮಾಡಿದ್ದನ್ನು ಒಪ್ಪಿಕೊಂಡಿದ್ದರು
ಆಪರೇಷನ್ ಕಮಲ ಮಾಡಿದ್ದು ಹೌದು ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದರು. ಆಡಿಯೋ ಸಂಭಾಷೆಯೂ ನನ್ನದೇ ಎಂದು ಹೇಳಿದ್ದರು. ಇವರು ಆಪರೇಷನ್ ಕಮಲ ಮಾಡದಿದ್ದರೆ ಅನುದಾನ ಕೊಟ್ಟಿದ್ದು ಹೇಗೆ, ಅನರ್ಹ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದೇಕೆ ಎಂದು ಆಪರೇಷನ್ ಕಮಲದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಯಡಿಯೂರಪ್ಪ ಅವರು ಮಾಧ್ಯಮ ಸಂವಾದದ ಮೂಲಕ ಸಾಧನೆ ಮುಂದಿಟ್ಟಿದ್ದಾರೆ
ಯಡಿಯೂರಪ್ಪ ಸಿಎಂ ಆಗಿ ನಾಳೆಗೆ ನೂರು ದಿನ ಪೂರೈಸಲಿದ್ದಾರೆ... ಅವರು ಸಹ ಮಾಧ್ಯಮ ಸಂವಾದದ ಮೂಲಕ ಅವರ ಸರ್ಕಾರದ ಸಾಧನೆಗಳನ್ನ ಜನರ ಮುಂದೆ ಇಟ್ಟಿದ್ದಾರೆ. ಆದರೆ, ಈ ಸರ್ಕಾರ ಬಂದಿರೋದೆ ಅನೈತಿಕವಾಗಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಸರ್ಕಾರ.. ಈ ಬಾರಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ.. ಆದರೆ , ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಅಂತಾ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕೊಟ್ಟರು. ಬಹುಮತ ಸಾಭೀತು ಮಾಡುವಲ್ಲಿ ಬಿಎಸ್ವೈ ಸೋತಿದ್ದಾರೆ. ಹಾಗಾಗಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು... ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಿದರು.

ಸತತವಾಗಿ ಹಣದ ಆಮಿಷ ಒಡ್ಡಿದ್ದರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸತತವಾಗಿ ಹಣದ ಆಮಿಷ ಒಡ್ಡುತ್ತಿದ್ದರು. ಆಪರೇಷನ್ ಕಮಲದ ಕುರಿತು ಹಲವು ಆಡಿಯೋ, ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ನಾವು ಆಪರೇಷನ್ ಕಮಲ ಮಾಡಿಲ್ಲ, ಅವರಾಗೇ ರಾಜೀನಾಮೆ ನೀಡಿದ್ದರು ಎನ್ನುವುದು ಶುದ್ಧ ಸುಳ್ಳು. ಆಪರೇಷನ್ ಕಮಲ ಮಾಡದಿದ್ದರೆ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಹೇಗೆ ಬರುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಗೆ 8 ಸ್ಥಾನ ಗೆಲ್ಲಲು ಸಾಧ್ಯವಿಲ್ಲ
ಉಪ ಚುನಾವಣೆ ಎದುರಾಗಿದೆ, ಯಡಿಯೂರಪ್ಪ ಈಗ 8 ಕ್ಷೇತ್ರ ಗೆಲ್ಲಬೇಕು, 8 ಸ್ಥಾನ ಗೆಲ್ಲಲು ಬಿಜೆಪಿಗೆ ಆಗುವುದಿಲ್ಲ, ಹೀಗಾಗಿ ಸರ್ಕಾರ ಇರುವುದಾದರೂ ಹೇಗೆ, ಇದಕ್ಕೆ ಮಧ್ಯಂತರ ಚುನಾವಣೆ ಎಂದು ನಾನು ಹೇಳಿದ್ದು, ಉಪ ಚುನಾವಣೆಯಲ್ಲಿ ಬಿಎಸ್ವೈ 8 ಸೀಟು ಗೆಲ್ಲದೆ ಹೋದ್ರೆ ಮತ್ತೆ ರಾಜಕೀಯ ಪರಿಸ್ಥಿತಿ ಏನಾಗುತ್ತೆ, ಉಪ ಚುನಾವಣೆಯಲ್ಲಿ 7 ರಿಂದ 8 ಸೀಟು ಗೆಲ್ಲದಿದ್ದೆ ಬಿಎಸ್ವೈ ರಾಜೀನಾಮೆ ಕೊಡಬೇಕಾಗುತ್ತೆ, ಆಗ ಮತ್ತೆ ಜನರಲ್ ಎಲೆಕ್ಷನ್ ಮಾಡ್ಬೇಕಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications