150ರ ಸಂಭ್ರಮದಲ್ಲಿ ಬಿಷಪ್‌ ಕಾಟನ್‌ ಶಾಲೆ

ಬೆಂಗಳೂರು, ಜೂ.28: ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಬಿಷಪ್‌ ಕಾಟನ್‌ ಶಾಲೆ 150ರ ಸಂಭ್ರಮದ ಆಚರಣೆಯಲ್ಲಿದೆ. ಶಾಲೆಯ 150ನೇ ವರ್ಷದ ಸಂಭ್ರಮಾಚರಣೆ ಸಮಾರಂಭ ಶನಿವಾರದ ಸಂಜೆಯ ಪ್ರಾರ್ಥನೆಯಿಂದ ಆರಂಭಗೊಳ್ಳಲಿದೆ.

ಸಂಜೆ ಆರು ಗಂಟೆಯಿಂದ ಬಾಲಕಿಯರ ಶಾಲೆಯ ಸಭಾಂಗಣದಲ್ಲಿ ನಡೆಯುವ ಪ್ರಾರ್ಥನೆಯ ಮೂಲಕ ಕಾರ್ಯ‌ಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಚರ್ಚ್‌ ಆಫ್‌ ಸೌತ್‌ ಇಂಡಿಯಾದ ಸಂಚಾಲಕ ಡಾ.ಜಿ.ದಿವ್ಯಾಶೀರ್ವಾದಮ್‌ ಅವರು ಶಾಲೆಯ ಇತಿಹಾಸ ಕುರಿತು ಮಾತನಾಡಲಿದ್ದಾರೆ.

ಕರ್ನಾಟಕ ಸೆಂಟ್ರಲ್‌ ಡಯೋಸಿಸ್‌ನ ಸದಸ್ಯರು, ಶಾಲೆಯ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜೂನ್‌ 29ರ ಸಂಜೆ ಐದು ಗಂಟೆಗೆ ಬಿಷಪ್‌ ಕಾಟನ್‌ ಬಾಲಕರ ಶಾಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ಭಾಗವಹಿಸಲಿದ್ದಾರೆ. ಜೂನ್‌ 30ರಂದು ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಯಲ್ಲಿ 150ರ ಸಂಭ್ರಮೋತ್ಸವ ಸಮಾರಂಭ ನಡೆಯಲಿದೆ.

Bishop Cotton

ಯುರೋಪಿನಿಂದ ಬಂದ ಬ್ರಿಟೀಷರು ತಮ್ಮ ಮಕ್ಕಳಿಗಾಗಿ 1865ರ ಏಪ್ರಿಲ್‌ 19ರಂದು ಆರಂಭಿಸಲಾದ ವಿದ್ಯಾಸಂಸ್ಥೆಯೇ ಬಿಷಪ್‌ ಕಾಟನ್‌ ಬಾಲಕರ ಶಾಲೆ. ಭಾರತದ ಸೇನಾಪಡೆ ಮುಖ್ಯಸ್ಥರಾಗಿದ್ದ ಕೆ.ಎಸ್‌. ತಿಮ್ಮಯ್ಯ, ನೌಕಾಪಡೆಯ ಮುಖ್ಯಸ್ಥರಾಗಿದ್ದ ಅಡ್ಮಿರಲ್‌ ಶೆಖಾವತ್‌, ಎಂಸಿಸಿ ಕ್ಯಾಪ್ಟನ್‌ ಆಗಿದ್ದ ಕಾಲಿನ್‌ ಕೌಡ್ರೆ, ನಗರದ ಮೊದಲ ಕಮಿಷನರ್‌ ಸಿ.ಚಾಂಡಿ, ಹಿರಿಯ ವಿಜ್ಞಾನಿ ಡಾ.ರಾಜಾರಾಮಣ್ಣ, ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ ನಿಲೇಕಣಿ, ಮಾಜಿ ಟೆಸ್ಟ್‌ ಆಟಗಾರ ಬ್ರಿಜೇಶ್‌ ಪಟೇಲ್‌, ಉದ್ಯಮಿ ಜಿ.ಕೆ. ಗೋಯಂಕಾ, ಐಟಿಸಿ ಮುಖ್ಯಸ್ಥರಾಗಿದ್ದ ಜೆ. ಮಥನ್‌ ಸೇರಿದಂತೆ ಹಲವಾರು ದಿಗ್ಗಜರು ಈ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ.

ನಗರದ ಪ್ರತಿಷ್ಠಿತ ಶಾಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ಶಾಲೆಗೆ ಮಾಜಿ ರಾಷ್ಟ್ರಪತಿಗಳಾದ ಡಾ.ಎಸ್‌.ರಾಧಾಕೃಷ್ಣನ್‌, ಡಾ.ವಿ.ವಿ. ಗಿರಿ, ಡಾ.ಆರ್‌.ವೆಂಕಟರಾಮನ್‌, ಡಾ.ಶಂಕರ್‌ ದಯಾಳ್‌ ಶರ್ಮಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಕೆನಡಾ ಪ್ರಧಾನಿ ಸ್ಟೀಫನ್‌ ಹಾರ್ಪರ್‌, ಟಿಬೆಟ್‌ನ ಧರ್ಮಗುರು ದಲೈ ಲಾಮಾ ಭೇಟಿ ನೀಡಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+