ದುಬಾರಿ ಬೈಕ್‌ನೊಂದಿಗೆ ಸೆಲ್ಫಿ ತೆಗೆಯಲು ಅವಕಾಶ ನೀಡದ್ದಕ್ಕೆ ಥಳಿತ

ಬೆಂಗಳೂರು, ಏ.26: ಸೆಲ್ಫಿ ತೆಗೆಯಲು ದುಬಾರಿ ಬೈಕ್ ನೀಡದ ಬೈಕ್ ಮಾಲಿಕನನ್ನು ಥಳಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಅದು 30 ಲಕ್ಷದ ದುಬಾರಿ ಬೈಕ್ ಆಗಿದ್ದು, ಬೈಕ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ನಿರಾಕರಿಸಿದ್ದರು.

ಕೋಪಗೊಂಡ ಅಪರಿಚಿತರು ದಾಳಿ ನಡೆಸಿದ ಘಟನೆ ಬೆಂಗಳೂರು ಕೋರಮಂಗಲದ ಬೆಥನಿ ಶಾಲೆ ಸಮೀಪ ನಡೆದಿದೆ. ಮಧ್ಯರಾತ್ರಿ 1.30 ಸುಮಾರಿಗೆ ಗಣೇಶ್ ತನ್ನ ಸ್ನೇಹಿತರೊಡನೆ ಕೋರಮಂಗಲ ನಾಲ್ಕನೇ ಬ್ಲಾಕ್ ನಲ್ಲಿರುವ ಕಾಫಿ ಶಾಪ್ ಗೆ ತೆರಳಿದ್ದನು. ಅಲ್ಲಿಂದ ಹಿಂದಿರುಗುವಾಗ ಗಣೇಶ್ ಸ್ನೇಹಿತ ವಿನಯ್ ತನ್ನ ಹೋಂಡಾ ಗೋಲ್ಡ್ವಿಂಗ್ ಬೈಕಿನಲ್ಲಿ ಹೋಗುತ್ತಿದ್ದರು.

Biker attacked over refusal to let men take selfies with his bike

ಆಗ ಹಿಂದಿನಿಂದ ಬಂದ ದ್ವಿಚಕ್ರ ಸವಾರರಿಬ್ಬರು ಇವರ ಬೈಕ್ ಅಡ್ಡಗಟ್ಟಿದ್ದಾರೆ. ಅಲ್ಲದೆ ತಾವು ಈ ಬೈಕ್ ನೊಡನೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು, ನಮಗೆ ಈ ಬೈಕ್ ನೀಡಬೇಕೆಂದು ಅಪರಿಚಿತರು ಗಣೇಶ್ ಹಾಗೂ ವಿನಯ್ ಗೆ ಬೇಡಿಕೆ ಇಟ್ಟಿದ್ದಾರೆ. ಅದೇ ವೇಳೆ ಅವರಲ್ಲೊಬ್ಬ ಗಣೇಶ್ ನನ್ನು ದೂರ ತಳ್ಳಿ ಅವನಲ್ಲಿದ್ದ ಬೈಕ್ ಕೀಯನ್ನು ಕಿತ್ತುಕೊಂಡಿದ್ದಾನೆ. ಬಳಿಕ ಥಳಿಸಿ ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+