ಯಾಕೋ ಗುರಾಯಿಸ್ತೀಯಾ? ಎಂದಿದ್ದಕ್ಕೆ ಗಂಡನ ಎದುರೇ ಹೆಂಡತಿಗೆ ಲೈಂಗಿಕ ದೌರ್ಜನ್ಯ

ಬೆಂಗಳೂರು, ಮಾರ್ಚ್ 5: ಯಾಕೋ ಗುರಾಯಿಸ್ತೀಯಾ? ಎಂದಿದ್ದಕ್ಕೆ ಗಂಡನ ಎದುರೇ ಹೆಂಡತಿ ಮೇಲೆ ದ್ವಿಚಕ್ರ ವಾಹನ ಸವಾರನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ದಂಪತಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಸಿಗ್ನಲ್ ಬಳಿ ನಿಂತಾಗ ಮತ್ತೊಂದು ಬೈಕಿನಲ್ಲಿ ಇದ್ದವನು ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ಮಹಿಳೆ ಎಷ್ಟು ಅವಾಯ್ಡ್ ಮಾಡಲು ನೋಡಿದರೂ ಅವನು ಇನ್ನೂ ಕೆಟ್ಟದಾಗಿ ನೋಡುತ್ತಿದ್ದ.

ಬಳಿಕ ಆಕೆ ಪತಿಗೆ ತಿಳಿಸಿದಾಗ ಆತ ಅವನನ್ನು ಕರೆದು ಯಾಕೆ ಈ ರೀತಿ ಮಾಡ್ತಿದೀಯ ಎಂದು ಕೇಳಿದ್ದಾನೆ ಅಷ್ಟಕ್ಕೇ ಕೋಪಗೊಂಡ ಬೈಕ್ ಸವಾರ ಅವರಿಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ ಆಕೆಯ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

Biker arrested for assaulting, harassing couple in Bengaluru

ಬಳಿಕ ಜೆಪಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆತ ತನ್ನ ಬೈಕ್ ಆಫ್ ಮಾಡಿಕೊಂಡು ದಂಪತಿ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದ. ಬಳಿಕ ಸಿಗ್ನಲ್ ಗ್ರೀನ್ ಆದಾಗ ಆತ ಹೆಲ್ಮೆಟ್ ಧರಿಸಿ ಪರಾರಿಯಾದ ಆತನನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಹೆಚ್ಚು ಮಂದಿ ಸೇರಿ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಬಿಎಂಟಿಸಿ ಕಂಡೆಕ್ಟರ್‌ ಒಬ್ಬರು ಜನರನ್ನು ಚದುರಿಸಿ ಅವರಿಗೆ ಹೋಗಲು ಅವಕಾಶ ಮಾಡಿಕೊಟ್ಟರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಟಿವಿ ನೋಟಿಕೊಂಡು ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ ಎನ್ನುವುದು ತಿಳಿದುಬಂದಿದೆ. ಆರೋಪಿ ಕಿರಣ್ ಎನ್ನುವವನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+