ಬೈಕ್ ಟ್ಯಾಕ್ಸಿ ಬ್ಯಾನ್ ಎಫೆಕ್ಟ್: ಬೆಂಗಳೂರು ಮಂದಿಗೆ ಎದುರಾದ ಸಾಲು ಸಾಲು ಸಮಸ್ಯೆಗಳೇನು?
ರಾಜ್ಯದಲ್ಲಿ ಸದ್ಯ ರಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆಯನ್ನು ಬಂದ್ ಮಾಡಲಾಗಿದೆ. ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರ ತೀವ್ರ ವಿರೋಧ ಮಾಡಿದ್ದರು. ಕೋರ್ಟ್‌ನ ಆದೇಶದ ಮೇರೆಗೆ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಲಾಗಿತ್ತು. ಹೈಕೋರ್ಟ್ ಆದೇಶದ ನಂತರ ಜೂನ್ 16ರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲಾಗಿದೆ. ಆದರೆ ಪ್ರತಿ ನಿತ್ಯ ಬೈಕ್ ಟ್ಯಾಕ್ಸಿ ಸೇವೆ ಬಳಸುವವರ ಗೋಳಾಟ ಹೆಚ್ಚಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಬೆಂಗಳೂರಿನ ಉದ್ಯೋಗಿಯೊಬ್ಬರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬೈಕ್ ಟ್ಯಾಕ್ಸಿ ನಿಲ್ಲಿಸಿರುವುದರಿಂದ ಪ್ರತಿ ನಿತ್ಯ ಪ್ರಯಾಣದ ಖರ್ಚು ಅಧಿಕವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಆಟೋದವರು ದುಬಾರಿ ಹಣ ಕೇಳುತ್ತಾರೆ ಎಂದು ಅನೇಕರು ಪ್ರತಿನಿತ್ಯವೂ ಬೈಕ್ ಟ್ಯಾಕ್ಸಿ ಸೇವೆಯನ್ನೇ ಅವಲಂಬಿಸಿದ್ದರು. ಟ್ರಾಫಿಕ್ ಜಂಟಾಟದಲ್ಲೂ ಈ ಸೇವೆಯನ್ನು ಹಲವರು ಮೆಚ್ಚಿದ್ದರು. ಪ್ರಯಾಣದ ಖರ್ಚು ಕೂಡ ಕಡಿಮೆ ಎಂಬ ಕಾರಣಕ್ಕೆ ಕಚೇರಿಗೆ ಹೋಗುವವರು ಕೂಡ ಈ ಸೇವೆಯ ಮೊರೆ ಹೋಗಿದ್ದರು. ಈಗ ದಿಢೀರನೆ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿರುವುದು ಹಲವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಹೋಲಿಸಿದರೆ ಈಗ ಪ್ರಯಾಣದ ಖರ್ಚು ದುಪ್ಪಟ್ಟಾಗುತ್ತಿದೆ ಎಂದು ಬೇಸರ ಹೊರಹಾಕುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿರೋಧ ವ್ಯಕ್ತವಾಗಿದೆ. ಎಕ್ಸ್ ಬಳಕೆದಾರರೊಬ್ಬರು ಬೈಕ್ ಟ್ಯಾಕ್ಸಿ ನಿಷೇಧದಿಂದ ಆಗಿರುವ ಖರ್ಚಿನ ಹೊರೆ ಬಗ್ಗೆ ವಿವರಿಸಿದ್ದಾರೆ. ಇದರಿಂದ ದೈನಂದಿನ ದಿನಚರಿ ಮತ್ತು ಹಣಕಾಸಿನ ಮೇಲೆ ಬೀರಿರುವ ಒತ್ತಡವನ್ನು ಕೂಡ ಅವರು ವಿವರಿಸಿದ್ದಾರೆ. ನೀವು ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸುತ್ತೀರಿ. ಸರಿಯಾದ ರಸ್ತೆಗಳಿಲ್ಲದೆ, ಅಗೆದ ಮತ್ತು ಕಿರಿದಾದ ರಸ್ತೆಗಳು, ಕಾಣೆಯಾದ ಯು ಟರ್ನ್‌ಗಳು, ಅನೇಕ ಪ್ರದೇಶಗಳಲ್ಲಿ ಶೂನ್ಯ ಮೆಟ್ರೋ ಪ್ರವೇಶ, ಸೀಮಿತ ಸಾರ್ವಜನಿಕ ಬಸ್‌ಗಳು, ನಡೆಯಲು ಪಾದಚಾರಿ ಮಾರ್ಗಗಳಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಕಾರನ್ನು ಹೊರಗೆ ತೆಗೆದುಕೊಂಡು ಅಥವಾ ಆಟೋ ಬುಕ್ ಮಾಡಲು ಮುಂದಾಗಿದ್ದಾರೆ. ಇದರಿಂದ ಬೆಂಗಳೂರಿನ ಸಂಚಾರ ಸುಮಾರು ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ. ಎಂತಹ ಅದ್ಭುತ ನಡೆ? ಎಂದು ವ್ಯಂಗ್ಯವಾಡಿದ್ದಾರೆ. ಈಗ ಬೆಳಿಗ್ಗೆ 8 ಗಂಟೆಯೂ ಮುನ್ನವೇ ಬೆಂಗಳೂರು ಉಸಿರುಗಟ್ಟಿದೆ. ಬೈಕ್ ಟ್ಯಾಕ್ಸಿ ನಿಷೇಧದಿಂದಾಗಿ ಆಟೋ ಹಿಡಿಯಬೇಕಾಯಿತು. ದಯವಿಟ್ಟು ಬಸ್ ನಿಲ್ದಾಣಗಳು ಮತ್ತು ಬೈಕ್ ಲೇನ್‌ಗಳಿಗೆ ಹೋಗಲು ನನಗೆ ನಡೆಯಬಹುದಾದ ಕಡಿಮೆ ಮಾರ್ಗಗಳನ್ನು ನೀಡಿ. ಇದು ನಗರಗಳನ್ನು ಸೃಷ್ಟಿಸುವ ಮಾರ್ಗವಲ್ಲ ಎಂದು ಮತ್ತೊಬ್ಬರು ಬೇಸರ ಹೊರಹಾಕಿದ್ದಾರೆ.
ನಾನು ಈಗ ಪ್ರಯಾಣಕ್ಕಾಗಿ ಪ್ರತಿದಿನ 500 ರೂ. ಪಾವತಿಸುತ್ತಿದ್ದೇನೆ. ಇದು ಹುಚ್ಚುತನ ಎಂದು ಒಂದು ಕಾಮೆಂಟ್ ಮಾಡಿದ್ದಾರೆ. ನನ್ನ ಸ್ನೇಹಿತ ಸಾಮಾನ್ಯವಾಗಿ ಕೆಲಸದ ನಂತರ 70ರಿಂದ 80 ರೂಪಾಯಿಗೆ ಬೈಕ್ ಟ್ಯಾಕ್ಸಿಗಳನ್ನು ಬುಕ್ ಮಾಡುತ್ತಾನೆ. ಆದರೆ ಇತ್ತೀಚಿನ ನಿಷೇಧದಿಂದಾಗಿ ಯಾವುದೇ ಆಟೋಗಳು ರಾತ್ರಿ ಸಮಯದಲ್ಲಿ ಕರೆದಲ್ಲಿಗೆ ಬರುತ್ತಿಲ್ಲ. ಮೀಟರ್ ಹಾಕಲ್ಲ ಎಂದು ನೇರವಾಗಿ ಹೆಚ್ಚು ಹಣ ಕೇಳ್ತಾರೆ. ಒಟ್ಟಾರೆ ಸರ್ಕಾರದ ನಿಯಮಗಳು ಯಾವಾಗಲೂ ಸಾಮಾನ್ಯ ಜನರ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸುತ್ತವೆ ಎಂದು ಹಿಡಿಶಾಪ ಹಾಕಿದ್ದಾರೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications