ವ್ಹೀಲಿಂಗ್, ವಿಡಿಯೋ ಮಾಡುತ್ತಿದ್ದ ಮೂವರ ವಿರುದ್ಧ ಕೇಸು ಜಡಿದ ಪೊಲೀಸರು

ಫೇಸ್ ಬುಕ್ ನಲ್ಲಿ ವ್ಹೀಲಿಂಗ್, ಬೈಕ್ ಸ್ಟಂಟ್ ನ ಫೋಟೋಗಳು ಹಾಕಬೇಕು ಎಂಬ ಕಾರಣಕ್ಕೆ ಮೂವರು ಬೆಂಗಳೂರಿನಲ್ಲಿ ನಡೆಸಿದ ದುಸ್ಸಾಹಸ ಇದೀಗ ಪೊಲೀಸ್ ಕೇಸಿನವರೆಗೆ ತಂದಿದೆ. ಅದೇನು ಮಾಡಿದರು, ಹೇಗೆ ಸಿಕ್ಕಿಬಿದ್ದರು ಎಂದು ತಿಳಿಯಲು ಈ ವರದಿ ಓದಿ

ಬೆಂಗಳೂರು, ಫೆಬ್ರವರಿ 21: ರಸ್ತೆಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ ಮೂವರನ್ನು ಸಾರ್ವಜನಿಕರು ನೀಡಿದ ದೂರಿನ ಅನ್ವಯ ಬಂಧಿಸಲಾಗಿದೆ. ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರಿಗೆ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು. ಕ್ವೀನ್ಸ್ ವೃತ್ತದಲ್ಲಿ ಬೈಕ್ ಸ್ಟಂಟ್ಸ್ ಮತ್ತು ವ್ಹೀಲಿಂಗ್ ಮಾಡುತ್ತಿದ್ದವರ ಫೋಟೋಗಳನ್ನು ತೆಗೆದು, ಪೊಲೀಸರಿಗೆ ಕೊಟ್ಟಿದ್ದರು.

ಕೆಎ-01H-5418 ಸಂಖ್ಯೆಯ ಯಮಹಾ ಬೈಕ್ ಅನ್ನು ಆರೋಪಿ ಸಂಖ್ಯೆ 1 ಎಂದು ಗುರುತಿಸಿರುವ 25 ವರ್ಷದ ನವೀನ್ ಎಂಬಾತ ಚಲಾಯಿಸುತ್ತಿದ್ದ. ಆತ ಐಟಿಐ ವಿದ್ಯಾರ್ಥಿಯಾಗಿದ್ದು, ರಾಜಾಜಿನಗರ ಬಡಾವಣೆಯ ಶಿವ್ ನಗರ್ ನಿವಾಸಿಯಾಗಿದ್ದಾನೆ. ಮತ್ತೊಂದು ಕಾರು ಕೆಎ-03AC-9257 ಸಂಖ್ಯೆಯದ್ದನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ, ಹಲಸೂರು ಜೋಗಿ ಪಾಳ್ಯದ ನಿವಾಸಿ 26 ವರ್ಷದ ಅಭಿಷೇಕ್ ಓಡಿಸುತ್ತಿದ್ದ.[ಹುಬ್ಬಳ್ಳಿಯಲ್ಲಿ ಬೆಳ್ ಬೆಳಗ್ಗೆ ಬೈಕ್ ವ್ಹೀಲಿಂಗ್ ಗೆ ಸಹೋದರರ ಬಲಿ]

Wheeling

ಇವರಿಬ್ಬರು ಮಾಡುತ್ತಿದ್ದ ಸ್ಟಂಟ್ಸ್ ಹಾಗೂ ವ್ಹೀಲಿಂಗ್ ಅನ್ನು ವಿಡಿಯೋ ಮಾಡುತ್ತಿದ್ದ ಬೆಂಗಳೂರಿನ ಮಂಜುನಾಥ ನಗರದ ನಿವಾಸಿ, 32 ವರ್ಷದ ನವೀನ್ ಎಂಬಾತನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೇಸ್ ಬುಕ್ ಗೆ ಹಾಕುವ ಸಲುವಾಗಿ ಈ ವಿಡಿಯೋಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.[ಬೈಕ್ ವ್ಹೀಲಿಂಗ್ ವಿರುದ್ಧ ಪೊಲೀಸರ ಜಾಗೃತಿ ಅಭಿಯಾನ]

ಫೆಬ್ರವರಿ 11ರಂದು ರಾತ್ರಿ 10.45ರಿಂದ 11ರ ಸುಮಾರಿಗೆ ವ್ಹೀಲಿಂಗ್ ಸ್ಟಂಟ್ಸ್ ಮಾಡುತ್ತಿದ್ದರು. ಅದರಲ್ಲಿ ನವೀನ್ ಬಳಿ ಚಾಲನಾ ಪರವಾನಗಿ ಕೂಡ ಇರಲಿಲ್ಲ. ಸೈಲೆನ್ಸರ್, ಬೈಕ್ ನ ಹ್ಯಾಂಡಲ್ ಅನ್ನು ವ್ಹೀಲಿಂಗ್ ಗೆ ಅನುಕೂಲವಾಗುವಂತೆ ಬದಲಾಯಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+