• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಖಾಲಿ ರಸ್ತೆ: ಬೌನ್ಸ್‌ಬೈಕ್ ಡಿವೈಡರ್‌ಗೆ ಡಿಕ್ಕಿ, ಓರ್ವ ಸ್ಥಳದಲ್ಲೇ ಸಾವು

|

ಬೆಂಗಳೂರು, ಮಾರ್ಚ್ 22: ಬೆಂಗಳೂರಲ್ಲಿ ರಸ್ತೆ ಖಾಲಿ ಇದೆ ಎಂದು ಬೌನ್ಸರ್ ಬೈಕ್ ಚಲಾಯಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಫ್ಲೈಓವರ್ ಬಳಿ ನಡೆದಿದೆ.

ಇಂದು ಜನತಾ ಕರ್ಫ್ಯೂ ಇರುವ ಕಾರಣ ಮನೆಯಿಂದ ಯಾರೂ ಹೊರಬರದಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿದ್ದರು.

ಹೀಗಾಗಿ ಒಬ್ಬರೂ ಕೂಡ ಮನೆಯಿಂದ ಹೊರಗೆ ಬಂದಿರಲಿಲ್ಲ ರಸ್ತೆಯೆಲ್ಲಾ ಖಾಲಿಯಿತ್ತು. ಹೀಗಾಗಿ ಸ್ನೇಹಿತನನ್ನು ಕೂರಿಸಿಕೊಂಡು ವ್ಯಕ್ತಿಯೊಬ್ಬ ಬೌನ್ಸ್ ಬೈಕ್‌ನಲ್ಲಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಳೆಗುಡ್ಡದಹಳ್ಳಿ ನಿವಾಸಿ 19 ವರ್ಷದ ಗಜೇಂದ್ರ ಮೃತ ಸವಾರ. ಗಂಭೀರವಾಗಿ ಗಾಯಗೊಂಡ 20 ವರ್ಷದ ಯುವಕ ಶಿವಕುಮಾರ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

English summary
Bounce Biker Collided with Divider and spot death , another seriously injured and taken into a Hospital In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X