ಬೆಂಗಳೂರು ಬೈಕ್ ಸವಾರರೇ ಎಚ್ಚರ: ಅವೈಜ್ಞಾನಿಕ ಹಂಪ್‌ನಿಂದಾದ ಅಪಘಾತದಲ್ಲಿ ಸ್ಕೂಟರ್, ಮೊಬೈಲ್,ಹಣ ಮಾಯ

ಉದ್ಯಾನ ನಗರಿ ಬೆಂಗಳೂರು ಇತ್ತೀಚೆಗಂತೂ ರಸ್ತೆ ಗುಂಡಿಗಳ ಸಾಮಾಜ್ಯವಾಗಿ ಇಲ್ಲವೇ ಅವೈಜ್ಞಾನಿಕ ರಸ್ತೆ ಹಂಪ್‌ಗಳನ್ನು ಹೊಂದಿರುವ ನಗರವಾಗಿ ಬದಲಾಗುತ್ತಿದೆ ಎಂದು ಅನ್ನಿಸುತ್ತಿದೆ.

ಬೆಂಗಳೂರು, ಮಾರ್ಚ್ 08: ಉದ್ಯಾನ ನಗರಿ ಬೆಂಗಳೂರು ಇತ್ತೀಚೆಗಂತೂ ರಸ್ತೆ ಗುಂಡಿಗಳ ಸಾಮಾಜ್ಯವಾಗಿ ಇಲ್ಲವೇ ಅವೈಜ್ಞಾನಿಕ ರಸ್ತೆ ಹಂಪ್‌ಗಳನ್ನು ಹೊಂದಿರುವ ನಗರವಾಗಿ ಬದಲಾಗುತ್ತಿದೆ ಎಂದು ಅನ್ನಿಸುತ್ತಿದೆ.

ಬೆಂಗಳೂರಲ್ಲಿ ರಸ್ತೆಗುಂಡಿಗಳಿಂದಾಗಿ ಸಾಕಷ್ಟು ಅಫಘಾತಗಳು, ಅವೈಜ್ಞಾನಿಕ ಹಂಪ್‌ನಿಂದ ಸಾವು ಎಂಬಿತ್ಯಾದಿ ಘಟನೆಗಳು ಹೊತೇನಲ್ಲ. ಇದೀಗ ಅಂತದ್ದೊಂದೆ ಘಟನೆಯಿಂದ ಬೆಂಗಳೂರು ರಸ್ತೆಗಳು ಸುದ್ದಿಯಲ್ಲಿವೆ. ಕೆಲ ದಿನಗಳ ಹಿಂದಷ್ಟೇ ದ್ವಿಚಕ್ರ ವಾಹನ ಸವಾರರೊಬ್ಬರು ಅವೈಜ್ಞಾನಿಕ ಹಂಪ್‌ನಿಂದಾಗಿ ಬಿದ್ದು, ಪ್ರಜ್ಞೆ ತಪ್ಪಿದ್ದಾರೆ. ಬಳಿಕ ನಡೆದ ಘಟನೆ ಆ ಸವಾರನಿಗೆ ಶಾಕ್‌ ನೀಡಿದೆ.

Bengaluru: Bike accident due to road hump, theft of bike money mobile rider lost consciousness

ನಗರದ ಕಲಾಸಿ ಪಾಳ್ಯದ ದ್ರೌಪದಮ್ಮ ದೇಗುಲದ ಸಮೀಪ ಅರುಣ್ ವಿ ಎಂಬುವರು ಮಾರ್ಚ್ 3 ರಂದು ದ್ವಿಚಕ್ರ ವಾಹನ (ಸ್ಕೂಟರ್) ರಸ್ತೆ ದಾಟುವಾಗ ಅವೈಜ್ಞಾನಿಕ ಹಂಪ್‌ನಿಂದಾಗಿ ಅಪಘಾತಕ್ಕೀಡಾದರು. ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಇಷ್ಟೇ ಅಲ್ಲದೇ ಸ್ಕೂಟರ್ ಬೀಳುತ್ತಿದ್ದಂತೆ ಸವಾರ ಪ್ರಜ್ಞೆ ತಪ್ಪಿದ್ದಾರೆ. ಸ್ವಲ್ಪ ಹೊತ್ತಾದ ಬಳಿಕ ಸುಧಾರಿಸಿಕೊಂಡು ನೋಡಿದಾಗ ಅವರ ಸ್ಕೂಟರ್ ಕಳ್ಳತನವಾಗಿರುವುದು ಗೊತ್ತಾಗಿದೆ. ಇಷ್ಟೂ ಸಾಲದೆಂಬಂತೆ ಖದೀಮರು ಸವಾರನ ಬಳಿ ಇದ್ದ ಮೊಬೈಲ್ ಮಾತ್ರವಲ್ಲ, ಬೆಳ್ಳಿಯ ಚೈನ್, ಜೇಬಿನಲ್ಲಿದ್ದ 5,500 ರೂ. ನಗದು ಹಣ ಕೂಡಾ ಕಳ್ಳತನ ಮಾಡಿದ್ದಾರೆ.

ಈ ಸಂಬಂಧ ಸ್ಕೂಟರ್ ಮಾಲೀಕ/ಸವಾರ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸ್ಕೂಟರ್, ಕೊರಳಲ್ಲಿದ್ದ ಬೆಳ್ಳಿ ಚೈನ್, ಹಣ ಮೊಬೈಲ್ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪೊಲಿಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Bengaluru: Bike accident due to road hump, theft of bike money mobile rider lost consciousness

ತರಕಾರಿ ವ್ಯಾಪಾರಿಯಾದ ವರುಣ (25) ಅಪಘಾತಕ್ಕೀಡಾಗಿ ಕಳ್ಳರ ಕರಾಮತ್ತಿಗೆ ಒಳಗಾದ ಸಂತ್ರಸ್ತ ಎಂದು ತಿಳಿದು ಬಂದಿದೆ. ಅವರು ಮಾರ್ಚ್ 03 ರಂದು ಲಾಲ್‌ಬಾಗ್ ಬಳಿಯ ಸಿದ್ದಾಪುರದಿಂದ ಕಲಾಸಿಪಾಳ್ಯದ ಕಡೆಗೆ ಹೊರಟಿದ್ದರು. ಅವರ ಮನೆಯಲ್ಲಿ ಭಜನಾ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದವರಿಗೆ ಊಟ ತರಲು ಮಧ್ಯರಾತ್ರಿ ಅರುಣ್ ಅವರು ಹೊರಟಿದ್ದರು ಎನ್ನಲಾಗಿದೆ.

ಮಧ್ಯರಾತ್ರಿ ವೇಳೆ ವಾಹನಗಳ ಓಡಾಟ ಕಡಿಮೆ, ಕಲಾಸಿಪಾಳ್ಯದ ದ್ರೌಪದಮ್ಮ ದೇವಾಲಯದ ಬಳಿ ರಸ್ತೆ ಕಿರಿದಾಗಿದ್ದು, ಅವೈಜ್ಞಾನಿಕ ಹಂಪ್ ಹಾಕಲಾಗಿದೆ. ಕತ್ತಲಲ್ಲಿ ಹಂಪ ಕಂಡಿಲ್ಲ. ಕೂಡಲೇ ಸ್ಕೂಟರ್ ಸ್ಕಿಡ್ ಉರುಳಿ ಬಿದ್ದಿದೆ. ಈ ವೇಳೆ ಸವಾರರು ಅರೆಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಘಟನೆ ಬಳಿಕ ಅರುಣ್ ಅವರು ತಮ್ಮ ಕುಟುಂಬಸ್ಥರಿಗೆ ಕರೆ ಮಾಡಲು ಮೊಬೈಲ್ ಇಲ್ಲ, ಮನೆಗೆ ತೆರಳಲು ಸ್ಕೂಟರ್ ಸಹ ಇಲ್ಲ, ಹೀಗಾಗಿ ಸಾಕಷ್ಟು ಪರದಾಡಿದ್ದಾರೆ. ಹೊರ ಹೋದ ಅರುಣ್ ಬಂದಿಲ್ಲವೆಂದು ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+