ಅಪಘಾತಕ್ಕೆ ಅವಸರವೇ ಕಾರಣ: ಟೆಕ್ಕಿ ಸಾವು

ಬೆಂಗಳೂರು, ನ.6: ಅವಸರವೇ ಅಪಘಾತಕ್ಕೆ ಕಾರಣ. ಬೆಂಗಲೂರಿನ ಧಾವಂತದ ಬದುಕಿನಲ್ಲಿ ಕಚೇರಿಗೆ ತಡವಾಗುತ್ತದೆ ಎಂದು ವೇಗವಾಗಿ ಬೈಕ್‌ ಚಲಾಯಿಸುತ್ತಿದ್ದ ಒಬ್ಬ ಟೆಕ್ಕಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಜಯನಗರ ಸೌತ್ ಎಂಡ್ ವೃತ್ತದಲ್ಲಿ ನಡೆದಿದೆ.

ಬಿಹಾರ ಮೂಲದ ಸೌರವ್ ಮೃತ ಯುವಕ. 25 ವರ್ಷದ ಸೌರವ್, ಜೆಪಿ ನಗರ 5ನೇ ಬ್ಲಾಕ್‌ ನಲ್ಲಿ ತಮ್ಮನೊಂದಿಗೆ ಕಳೆದ 5 ವರ್ಷದಿಂದ ವಾಸವಾಗಿದ್ದರು. ತಮ್ಮ ಗೌರವ್ ಸಹ ಸಾಫ್ಟ್ ವೇರ್ ಇಂಜಿನಿಯರ್. ಸೌರವ್, ಮಲ್ಲೇಶ್ವರದಲ್ಲಿರುವ ಎಸ್‌ ಎಲ್‌ ಕೆ ಸಾಫ್ಟ್‌ ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು.

bihar-techie-saurav-dead-road-accident-at-south-end-circle-bangalore
ಸೋಮವಾರ ಸಂಜೆ 5.30ಕ್ಕೆ ಕಚೇರಿಗೆ ಲಾಗ್‌ ಇನ್ ಆಗಬೇಕಿತ್ತು. ಆದರೆ ಸಂಜೆ 5.15ಕ್ಕೆ ಮನೆ ಬಿಟ್ಟಿದ್ದ ಕಾರಣ ಬರೀ 15 ನಿಮಿಷದಲ್ಲಿ ಕಚೇರಿ ತಲುಪಬೇಕು ಎನ್ನುವ ಭರದಲ್ಲಿ ಮನೆಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಕಚೇರಿಗೆ ಹೋಗುತ್ತಿದ್ದರು.

ಆದರೆ ಜಯನಗರ ಸೌತ್ ಎಂಡ್ ವೃತ್ತದ ಬಳಿ ವೇಗವಾಗಿ ಹೋಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಫುಟ್‌ ಪಾತ್‌ ಗೆ ಡಿಕ್ಕಿ ಹೊಡೆದು, ಹೆಲ್ಮೆಟ್ ಧರಿಸಿದ್ದರೂ ಸೌರವ್ ತಲೆಗೆ ತೀವ್ರ ಪೆಟ್ಟಾಗಿತ್ತು. ಆತನನ್ನು ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7.30ರ ಸುಮಾರಿಗೆ ಸೌರವ್ ಮೃತಪಟ್ಟಿದ್ದಾರೆ. ಈ ಸಂಬಂಧ ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+