Hebbal Flyover: ಹೆಬ್ಬಾಳ ಫ್ಲೈಓವರ್ ಉದ್ಘಾಟನೆ ಯಾವಾಗ? ಇಲ್ಲಿದೆ ಮಹತ್ವದ ಅಪ್ಡೇಟ್
Hebbal Flyover: ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಕ್ರಾಂತಿ ಆಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಹೆಬ್ಬಾಳ ಫ್ಲೈಓವರ್ ಉದ್ಘಾಟನೆ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದ್ರೆ ಉದ್ಘಾಟನೆ ಯಾವಾಗ ಹಾಗೂ ವಿಳಂಬ ಆಗಿದ್ದೇಕೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆ.ಆರ್.ಪುರ ರಸ್ತೆ ಮಾರ್ಗದಿಂದ ಮೇಖ್ರಿ ವೃತ್ತದ ಕಡೆಗಿನ ಹೆಬ್ಬಾಳ ಫ್ಲೈ ಓವರ್ ವಿಸ್ತರಣೆ ಕಾಮಗಾರಿಯನ್ನ ಸುಮಾರು ಎರಡು ವರ್ಷಗಳಿಂದ ನಡೆಸುತ್ತಿದೆ. ಇದೀಗ ಇದು ಪೂರ್ಣಗೊಂಡಿದ್ದು, ಉದ್ಘಾಟನೆ ಹಂತದಲ್ಲಿದೆ. ಕೊಟ್ಟ ಗಡುವಿನ ಪ್ರಕಾರ ಇದೇ ಆಗಸ್ಟ್ 15ರಂದು ಲೋಕಾರ್ಪಣೆಯಾಗಬೇಕಿತ್ತು. ಆದರೆ ಆ ಕಾರಣದಿಂದ ತುಸು ಮುಂದೂಡಿಕೆಯಾಗಿದೆ. ಇದಕ್ಕೆ ಕಾರಣ ಏನೆಂದು ಕೂಡ ಬಿಡಿಎ ಆಯುಕ್ತರು ರಿವೀಲ್ ಮಾಡಿದ್ದಾರೆ.

ಈಗಾಗಲೇ ಈ ಮಾರ್ಗದಲ್ಲಿ ಸೀಮಿತ ವಾಹನಗಳ ಪ್ರಾಯೋಗಿಕ ಸಂಚಾರ ಕೂಡ ಆರಂಭ ಆಗಿದೆ. 700 ಮೀಟರ್ ಉದ್ದದ ಈ ಫ್ಲೈಓವರ್ ವಿಸ್ತರಣೆ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಮಾರು 80,00,00,000 ರೂಪಾಯಿ ವೆಚ್ಚ ಆಗಿದೆ ಎಂದು ವರದಿಯಾಗಿದೆ. ಇದರ ವಿಸ್ತರಣೆಗೆ 2023ರಲ್ಲಿ ಅಡಿಗಲ್ಲು ಹಾಕಿ ಕಾಮಗಾರಿಯನ್ನು ಆರಂಭ ಮಾಡಲಾಗಿದ್ದು, ಇದೀಗ ಇದು ಪೂರ್ಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.
ಕೆಂಪೇಂಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಮಾರ್ಗವಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆ ಕಡೆಗೆ ಬರುವ ಮಾರ್ಗದಲ್ಲಿ ಎರಡು ಪಥದ ರಸ್ತೆ ಇತ್ತು. ಇದನ್ನು ಇದೀಗ 4 ಪಥದ ರಸ್ತೆಯನ್ನಾಗಿ ವಿಸ್ತರಣೆ ಮಾಡಲಾಗಿದೆ. ಇದರಿಂದ ಕೆಂಪೇಗೌಡ ನಿಲ್ದಾಣದ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಪ್ರಯಾಣ ಮಾಡುವವರಿಗೆ ಟ್ರಾಫಿಕ್ ಜಾಮ್ ತೊಂದರೆಯಿಂದ ಮುಕ್ತಿ ಸಿಕ್ಕಂತಾಗಲಿದೆ.
ಇದೀಗ ಈ ಭಾಗದಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ದಟ್ಟಣೆಯಿಂದ ಪರದಾಡುತ್ತಲಿದ್ದಾರೆ. ಒಮ್ಮೆ ಟ್ರಾಫಿಕ್ ಜಾಮ್ ಆಯಿತೆಂದರೆ ಮುಗಿತು ಕಥೆ.. ಅದು ಕ್ಲಿಯರ್ ಆಗಬೇಕೆಂದರೆ ಏನಿಲ್ಲ ಅಂದರೂ ಒಂದೊಂದು ವೇಳೆ ಗಂಟೆಗಟ್ಟಲೇ ಬೇಕಾಗುತ್ತದೆ. ಇನ್ನೂ ಈ ಮೇಲ್ಸೇತುವೆ ಉದ್ಘಾಟನೆಯಾದ್ರೆ, ಈ ಭಾಗದಲ್ಲಿ ಸಂಚಾರ ಮಾಡುವ ವಾಹನ ಸವಾರರು ತುಸು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ.
ಬ್ಯಾಪ್ಟಿಸ್ಟ್ ಆಸ್ಪತ್ರೆ ಕಡೆಯಿಂದ ರಾಂಪ್ ಕಾಮಗಾರಿಯನ್ನ ಪೂರ್ಣಗೊಳಿಸಿ ಕೆ.ಆರ್.ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವ ವಾಹನಗಳಿಗೆ ಅನುಕೂಲ ಮಾಡಿಕೊಡಲು ಈ ಕಾಮಗಾರಿ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದೆ. ಕೆ.ಆರ್.ಪುರ ಕಡೆಯಿಂದ ಬರುವ ರಸ್ತೆ ಇದನ್ನು ಸೇರಿಕೊಳ್ಳುತ್ತದೆ.
ಕೆಂಪೇಗೌಡ ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಂಚಾರ ದಟ್ಟಣೆ ಸಂಭವಿಸುತ್ತಲಿದೆ. ಇದನ್ನು ನಿವಾರಣೆ ಮಾಡಲು ರಸ್ತೆಯನ್ನ ವಿಸ್ತರಣೆ ಮಾಡಲಾಗುತ್ತಿದೆ. ಹೆಬ್ಬಾಳ ಫ್ಲೈಓವರ್ ಬಳ್ಳಾರಿ ರಸ್ತೆ, ವಿಮಾನ ನಿಲ್ದಾಣ ಮತ್ತು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದ್ದರಿಂದ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಈ ಫ್ಲೈಓವರ್ ಉದ್ಘಾನೆಯಾದ್ರೆ ಇವೆಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಕ್ಕಂತಾಗಲಿದೆ. ಹೆಬ್ಬಾಳ ಫ್ಲೈ ಓವರ್ ಕಾಮಗಾರಿ ಪೂರ್ಣ ಆಗಿದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಉದ್ಘಾಟನೆ ಮಾಡುವ ಪ್ಲಾನ್ ಇತ್ತು. ಆದರೆ, ಇದೀಹ ಅಧಿವೇಶನ ನಡೆಯುತ್ತಿರುವ ಕಾರಣ ಉದ್ಘಾಟನೆ ವಿಳಂಬವಾಗಿದೆ. ಶೀಘ್ರದಲ್ಲೇ ಲೋಕಾರ್ಪಣೆ ಆಗಲಿದೆ ಎಂದು ಬಿಡಿಎ ಆಯುಕ್ತರಾದ ಪಿ.ಮಣಿವಣ್ಣನ್ ತಿಳಿಸಿದ್ಧಾರೆ. ಒಟ್ಟಿನಲ್ಲಿ ಈ ಫ್ಲೈಓವರ್ ಉದ್ಘಾಟನೆ ಆದ್ರೆ, ಸಂಚಾರ ದಟ್ಟಣೆ ತಗ್ಗಲಿದ್ದು, ಇದರಿಂದ ವಾಹನ ಸವಾರರಿಗೆ ಕಿರಿಕಿರಿ ತಪ್ಪಿದಂತಾಗಲಿದೆ.












Click it and Unblock the Notifications