ಬೆಂಗಳೂರು ಪೊಲೀಸರು ಲಾಠಿ ಹಿಡಿಯುವಂತಿಲ್ಲ: ಆಯುಕ್ತರ ಸೂಚನೆ
ಬೆಂಗಳೂರು, ಮಾರ್ಚ್ 27: ಬೆಂಗಳೂರು ಪೊಲೀಸರು ಲಾಠಿ ಹಿಡಿಯುವಂತಿಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ತರಕಾರಿ ಮಾರುವವರು, ರಸ್ತೆಯಲ್ಲಿ ಅಗತ್ಯ ವಸ್ತುಗಳನ್ನು ತರಲು ಓಡಾಡುವವರಿಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು, ಈ ಹಿನ್ನೆಲೆಯಲ್ಲಿ ಆಯುಕ್ತರು ಈ ಸೂಚನೆ ನೀಡಿದ್ದಾರೆ.
ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಗಂಭೀರ ಆರೋಪ: ಸಿಎಂ ಎದುರು ಕಣ್ಣೀರಿಟ್ಟರಾ ಕಮಿಷನರ್?
ಕೇವಲ ಕೆಎಸ್‌ಆರ್‌ಪಿ ಮಾತ್ರ ಲಾಠಿ ಹಿಡಿಯಬಹುದು, ಪೊಲೀಸರು ಹಾಗೂ ಸಂಚಾರ ಪೊಲೀಸರು ಕೂಡ ಲಾಠಿ ಹಿಡಿಯುವಂತಿಲ್ಲ, ಪೇಪರ್ ಹಂಚುವವರಿಗೆ ತೊಂದರೆ ಕೊಡುವಂತಿಲ್ಲ, ಎಲ್ಲಾ ಪೊಲೀಸರು, ಸಾರ್ವಜನಿಕರು ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ತರಕಾರಿ ಮಾರುವವರು ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಮೈಸೂರಿನಲ್ಲಿ ಮೂರನೇ ಪ್ರಕರಣ ದಾಖಲಾಗಿದೆ. ಪ್ರಧಾನಿ, ಮುಖ್ಯಮಂತ್ರಿ ಎಷ್ಟೇ ಹೇಳಿದರೂ ಜನರು ಮಾತ್ರ ರಸ್ತೆಯಲ್ಲಿ ಓಡಾಡುವುದನ್ನು ನಿಲ್ಲಿಸಿಲ್ಲ. ಮಾರುಕಟ್ಟೆಯನ್ನು ಮೈದಾನಕ್ಕೆ ಶಿಫ್ಟ್ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಒಟ್ಟು 199 ದೇಶಗಳಲ್ಲಿ ಕೊರೊನಾ ಸೋಂಕು ಹರಡಿದೆ ಭಾರತದಲ್ಲಿ 700 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕಿದೆ.