ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿಢೀರನೆ ಬದಲಾದ ಬೆಂಗಳೂರು-ವಾರಣಾಸಿ ಭಾರತ್ ಗೌರವ್‌ ರೈಲು ನಿಲ್ದಾಣ

|
Google Oneindia Kannada News

ಬೆಂಗಳೂರು, ನವೆಂಬರ್ 11: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಸಂಚರಿಸಬೇಕಿದ್ದ ಬೆಂಗಳೂರು-ವಾರಣಾಸಿ ಭಾರತ್ ಗೌರವ್‌ ರೈಲಿನ ನಿಲ್ದಾಣವನ್ನು ಅಧಿಕಾರಿಗಳು ದಿಢೀರನೇ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪ್ರೋಟೋಕಾಲ್‌ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ್ ಜಂಕ್ಷಣ ರೈಲ್ವೆ ನಿಲ್ದಾಣದಿಂದ ಈ ರೈಲು ಹೊರಡಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಕಾಸಿ ದರ್ಶನಕ್ಕಾಗಿ ಈ ರೈಲು ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದ ಮೂಲಕ ಹೊರಡುತ್ತಿತ್ತು. ಆದರೆ, ದಿಡೀರನೇ ರೈಲ್ವೆ ಇಲಾಖೆಯು ಈ ರೈಲಿನ ನಿಲ್ದಾಣವನ್ನು ದಿಢೀರನೇ ಬದಲಾಯಿಸಿದ ಬಳಿಕ ಕಾಸಿ ಯಾತ್ರೆಗೆ ಬೆಂಗಳೂರಿನಿಂದ ಹೊರಡುತ್ತಿದ್ದ ಒಟ್ಟು 431 ಪ್ರಯಾಣಿಕರಿಗೆ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲು ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಸಿ ಪ್ರವಾಸಕ್ಕಾಗಿ ಈ ರೈಲು ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ ಇಂದು 1.45ಕ್ಕೆ ಹೊರಡಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಲು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೊನೆಯಲ್ಲಿ ಯೋಜನೆ ಬದಲಾಯಿಸಿದ್ದಾರೆ. ಈ ವೇಳೆ ಅಧಿಕಾರಿಗಳು ರೈಲು ಸಂಚರಿಸುವ ಮೊದಲೇ ಎಲ್ಲ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಇಂದು ಪ್ರಧಾನಿ ಮೋದಿ ಈ ರೈಲಿಗೆ ಬೆಳಿಗ್ಗೆ 10:33ಕ್ಕೆ ವಿಶೇಷ ಚಾಲನೆ ನೀಡಿದ್ದಾರೆ. ಇನ್ನು ಈ ರೈಲಿಗೆ ಚಾಲನೆ ದೊರೆತ ಬಳಿಕ ಈ ರೈಲಿನಲ್ಲಿ 22 ಪ್ರಯಾಣಿಕರು ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ರೈಲು ಹತ್ತಿಕೊಳ್ಳಲಿದ್ದಾರೆ. ಉಳಿದ ಪ್ರಯಾಣಿಕರು ಯಶವಂತಪುರದಿಂದ ಕಾಶಿಗೆ ಪ್ರಯಾಣಿಸಲಿದ್ದಾರೆ. ರೈಲು ಸಂಚರಿಸುವ ಮೊದಲೇ ಎಲ್ಲ ಪ್ರಯಾಣಿಕರಿಗೆ ವೈಯಕ್ತಿಕವಾಗಿ ಫೋನ್‌ ಕರೆ ಮಾಡಿ ಎಚ್ಚರಿಸಿ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Bharat Gaurav station changed, 431 passengers alerted in Bengaluru

ಈ ಗೊಂದಲದ ಬಗ್ಗೆ ಐಆರ್‌ಸಿಟಿಸಿ ಮಾಹಿತಿ
ಈ ಗೊಂದಲದ ಬಗ್ಗೆ ಐಆರ್‌ಸಿಟಿಸಿಯ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, "ನಾವು ಪ್ರತಿಯೊಬ್ಬ ಪ್ರಯಾಣಿಕರಿಗೆ ಕರೆ ಮಾಡಿ ಕಳೆದ 24 ಗಂಟೆಗಳಲ್ಲಿ ಬದಲಾವಣೆಯ ಬಗ್ಗೆ ಎಚ್ಚರಿಸಿದ್ದೇವೆ" ಎಂದು ಹೇಳಿದರು. ಪ್ರಧಾನಿಯವರ ಭದ್ರತಾ ಪ್ರೋಟೋಕಾಲ್‌ನಿಂದಾಗಿ ರೈಲಿನ ಸ್ಥಳಾಂತರಿಸಬೇಕಾಯಿತು ಎಂದು ಐಆರ್‌ಸಿಟಿಸಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 1:45ಕ್ಕೆ ಯಸವಂತಪುರ್ ಮೂಲ ಕಾಶಿಗೆ ಸಂಚರಿಸಲಿರುವ ಈ ರೈಲಿನಲ್ಲಿ ಒಟ್ಟು 600 ಕಾಸಿ ದರ್ಶನಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bharat Gaurav station changed, 431 passengers alerted in Bengaluru

ಮದ್ದೂರಿನ ಖಾಸಗಿ ಸಂಸ್ಥೆಯೊಂದರ ಸಹಾಯಕ ವ್ಯವಸ್ಥಾಪಕ ಬಿ.ಎಂ.ಲೋಕೇಶ್ ಮಾತನಾಡಿ, ಈ ರೈಲಿನಲ್ಲಿ ಸಂಚರಿಸಲಿರುವ ವೃದ್ಧ ತಂದೆ-ತಾಯಿಯೊಂದಿಗೆ ತೆರಳಲಿರುವ ಅವರಿಗೆ ಬುಧವಾರ ಸಂಜೆ ರೈಲ್ವೆ ಇಲಾಖೆಯಿಂದ ನಮಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ವಿಜಯನಗರದಿಂದ ಕಾರಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಲಿರುವ ಅಂಶುಮನ್ ರಮೇಶ್ ರಾವ್, "ಕೆಎಸ್‌ಆರ್‌ಗೆ ಬಿಡುವ ಬದಲು, ಈಗ ಯಶವಂತಪುರದಿಂದ ಸಂಚರಿಸಲಿದೆ ಕೇವಲ 7 ಕಿ.ಮೀ. ಮಾತ್ರ ವ್ಯತ್ಯಾಸ ಅದೃಷ್ಟವಶಾತ್ ರೈಲ್ವೆ ಇಲಾಖೆ ನಮಗೆ ಮುಂಚಿತವಾಗಿ ತಿಳಿಸಿದ್ದರು ಎಂದು ಹೇಳಿಕೊಂಡರು.

English summary
The train will be shifted to Yesvantpur after that to start its journey,” said an official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X