110 ವಯಸ್ಸಿನ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಕಷ್ಟದ ಕಾರ್ಯ: ಡಾ.ರವೀಂದ್ರ
ಬೆಂಗಳೂರು, ಜನವರಿ 26: ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಕೃತಕ ಆಮ್ಲಜನಕ ಮತ್ತು ಡ್ರಿಪ್ ಹಾಕಲಾಗಿದೆ ಎಂದು ಅವರನ್ನು ಪರೀಕ್ಷಿಸಿದ ಡಾ.ರವೀಂದ್ರ ಅವರು ಹೇಳಿದ್ದಾರೆ.
ಶ್ರೀಗಳ ದೇಹದಲ್ಲಿ ಆಮ್ಲಜನಕ ಕೊರತೆ ಇದೆ ಜೊತೆಗೆ ಬಿಪಿ ಸಹ ಕಡಿಮೆ ಇದೆ ಎಂದು ಡಾ.ರವೀಂದ್ರ ಹೇಳಿದ್ದು, ಶ್ರೀಗಳ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.
ಶ್ರೀಗಳಿಗೆ ಲಿವರ್ ಸಮಸ್ಯೆ ಇದ್ದು, ಅವರ ದೇಹದಲ್ಲಿ ಈಗಾಗಲೇ 5 ಸ್ಟಂಟ್‌ಗಳಿವೆ ಹಾಗಾಗಿ ಹೊಸ ಸ್ಟಂಟ್ ಹಾಕುವುದು ಅಪಾಯಕಾರಿ, 110 ವರ್ಷ ವಯಸ್ಸಿನ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಅಷ್ಟು ಸುಲಭದ ಕಾರ್ಯವಲ್ಲ ಎಂದು ಅವರು ಹೇಳಿದ್ದಾರೆ.

ರಕ್ತ ಪರೀಕ್ಷೆಯ ವರದಿ ಬಂದ ನಂತರ ಶ್ರೀಗಳು ಆಸ್ಪತ್ರೆಯಲ್ಲಿ ಎಷ್ಟು ದಿವಸ ಇರಬೇಕೆಂದು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.












Click it and Unblock the Notifications