• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಕಳ್ಳರು ತುಂಬಾ ಚೂಸಿ: ಬರೀ ಚಾಕೊಲೇಟ್‌, ಡ್ರೈ ಫ್ರೂಟ್ಸ್‌ ಕದೀತಾರೆ

By Nayana
|
Google Oneindia Kannada News

ಬೆಂಗಳೂರು, ಜು.7: ಕಳ್ಳರು ತುಂಬಾ ಚೂಸಿಯಾಗಿದ್ದಾರೆ, ಕೇವಲ ಚಾಕಲೇಟ್‌, ಡ್ರೈಫ್ರೂಟ್ಸ್‌ ಮಾತ್ರ ಕದ್ದಿದ್ದಾರೆ, ವಾಚ್‌, ಮೊಬೈಲ್‌, ಟಿವಿ, ಹಣ, ಆಭರಣಗಳನ್ನು ಕಳ್ಳರು ಕದಿಯುವುದನ್ನು ನೋಡಿದ್ದೇವೆ ಆದರೆ ಚಾಕೊಲೇಟ್‌, ಡ್ರೈಫ್ರೂಟ್ಸ್‌ಗಳನ್ನು ಮಾತ್ರ ಕದಿಯುವ ಗ್ಯಾಂಗ್‌ವೊಂದು ಬೆಂಗಳೂರಿಗೆ ಕಾಲಿಟ್ಟಿದೆ.

ಗಿರಿನಗರದ ನಾಮಧಾರಿ ಸೂಪರ್‌ ಮಾರ್ಕೆಟ್‌ಗೆ ಮಧ್ಯರಾತ್ರಿ ಕನ್ನ ಹಾಕಿರುವ ಖದೀಮರು ಚಾಕೊಲೇಟ್‌ ಮತ್ತು ಡ್ರೈಫ್ರೂಟ್ಸ್‌ ಬಾಕ್ಸ್‌ಗಳ ಜತೆಗೆ ಪರಾರಿಯಾಗಿದ್ದಾರೆ. ಹಿಂದಿರುಗುವಾಗ ಸಿಸಿಟಿವಿ ಕ್ಯಾಮರಾಗಳು ಮತ್ತು ಡಿವಿಆರ್‌ ನ್ನು ತೆಗೆದುಕೊಂಡು ಹೋಗಿದ್ದಾರೆ.

ಯೂಟ್ಯುಬ್ ನೋಡಿ ಕಳ್ಳತನ ಕಲಿತ ಬೈಕ್ ಚೋರರ ಬಂಧನ ಯೂಟ್ಯುಬ್ ನೋಡಿ ಕಳ್ಳತನ ಕಲಿತ ಬೈಕ್ ಚೋರರ ಬಂಧನ

ಎಂದಿನಂತೆ ವ್ಯಾಪಾರ ಮುಗಿಸಿದ ಸೂಪರ್‌ ಮಾರ್ಕೆಟ್‌ ಸಿಬ್ಬಂದಿ ರಾತ್ರಿ 10 ಗಂಟೆಗೆ ಅಂಗಡಿ ಬಂದ್‌ ಮಾಡಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಮಾರ್ಕೆಟ್‌ ಮ್ಯಾನೇಜರ್‌ ಅಮರೀಶ್‌ ಬಂದು ತೆರೆದಾಗ ಲಾಕರ್‌ ತುಂಡಾಗಿತ್ತು. ಕೆಲವು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳತನ ನಡೆದಿರುವುದು ತಿಳಿಯುತ್ತಿದ್ದಂತೆ ಸಿಸಿಟಿವಿ ಡಿವಿಆರ್‌ ಕೊಠಡಿಗೆ ಧಾವಿಸಿದರೆ ಅದೂ ಕಳ್ಳತನವಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ತನಿಖಾ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಸಂಪೂರ್ಣ ಭದ್ರತೆ ಇರುವ ಸೂಪರ್‌ ಮಾರ್ಕೆಟ್‌ಗೆ ಕಳ್ಳರು ಪ್ರವೇಶ ಮಾಡಿದ್ದಾದರೂಹೇಗೆ ಎನ್ನುವುದು ಪೊಲೀಸರಿಗೆ ಆಶ್ಚರ್ಯ ಉಂಟು ಮಾಡಿತ್ತು. ಮಾರ್ಕೆಟ್‌ ಇರುವ ಬಹುಮಹಡಿ ಕಟ್ಟಡದ ಹಿಂಭಾಗದಲ್ಲಿ ಖಾಲಿ ಸೈಟಿದೆ. ಈ ಸೈಟಿನ ಮೂಲಕ ಮೇಲೆ ಹತ್ತಿದ ಖದೀಮರು ಕಿಟಕಿ ಗಾಜು ಒಡೆದು ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದೆ.

English summary
In an interesting revealtion, police have traced a gang which involved in looting costly chocolates and dry fruits in super markets and malls in Bengaluru . Miscreants have looted CCTV cameras along with DVR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X