Makar Sankranti: ಮಕರ ಸಂಕ್ರಾಂತಿಯ ಹಬ್ಬದೂಟ ನೀಡುವ ಬೆಂಗಳೂರಿನ ಬೆಸ್ಟ್ ಹೋಟೆಲ್‌ಗಳ ಪಟ್ಟಿ ಇಲ್ಲಿದೆ
ಎಲ್ಲೆಡೆ ಸಂಕ್ರಾಂತಿ ಹಬ್ಬ ಸಂಭ್ರಮ. ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸುಗ್ಗಿಯ ಕಾಲವನ್ನು ಭಾರತದಲ್ಲಿ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಮುಂತಾದ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ.
ಹಬ್ಬದ ಆಚರಣೆ ಜೊತೆಗೆ ಹಬ್ಬದೂಟ ಕೂಡ ಮುಖ್ಯವಾಗಿರುತ್ತದೆ. ಎಲ್ಲರೂ ರುಚಿ ರುಚಿಯಾದ ಮನೆಯ ಹಬ್ಬದೂಟ ಸವಿಯಲು ಇಷ್ಟಪಡುತ್ತಾರೆ. ಆದರೆ ಕೆಲಸ ನಿಮಿತ್ತ ಹಾಗೂ ಅನ್ಯ ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿ ಉಳಿದುಕೊಂಡವು ಹಬ್ಬದೂಟವನ್ನು ಮಿಸ್ ಮಾಡುಕೊಳ್ಳುತ್ತಿದ್ದೀರಾ..? ನೀವು ವಿಶೇಷವಾಗಿ ಹಬ್ಬದೂಟ ಸವಿಯಲು ಭೇಟಿ ನೀಡಬಹುದಾದ ಬೆಮಗಳೂರಿನ ಕೆಲವು ಹೋಟೆಲ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಮ್ಯಾರಿಯಟ್ ಹೋಟೆಲ್ ಬೆಂಗಳೂರು
ಬೆಂಗಳೂರಿನ ರಿಂಗ್ ರೋಡ್‌ನ ಹೊರವಲಯದಲ್ಲಿರುವ ಮ್ಯಾರಿಯಟ್ ಹೋಟೆಲ್ ಸಂಕ್ರಾತಿಯ ಭಕ್ಷ್ಯ ಭೋಜನ ಸವಿಯಲು ಸೂಕ್ತವಾದ ಸ್ಥಳ. ಇಲ್ಲಿನ ಬಾಣಸಿಗ ವಿಜಯ್ ಭಂಡಾರಿ ಮತ್ತು ಅವರ ತಂಡವು ಶುಚಿ- ರುಚಿಯಾದ ಆಹಾರವನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ. ಇಲ್ಲಿನ ಮೆನುವು ಸಂಕ್ರಾಂತಿ ಅಥವಾ ಪೊಂಗಲ್ ಸಮಯದಲ್ಲಿ ತಿನ್ನುವ ಖಾದ್ಯಗಳನ್ನು ಒಳಗೊಂಡಿದೆ .ಲೆಮನ್ ರೈಸ್, ಶುಂಠಿ ಮತ್ತು ಪೆಪ್ಪರ್ ರಸಂ, ಮೂಲಂಗಿ ಸಾಂಬಾರ್, ಮಿಶ್ರ-ತರಕಾರಿ ಪೊರಿಯಾಲ್, ಶಾವಿಗೆ ಪಾಯಸ, ಪೆಸರಟ್ಟು, ಹೋಳಿಗೆಯಂತಹ ಹಬ್ಬದ ಖಾದ್ಯ ಇಲ್ಲಿ ಸಿಗುತ್ತದೆ. ಜೊತೆಗೆ ರಾಗಿ ಮುದ್ದೆ ಮತ್ತು ಚಿಕನ್ ಕರಿ ಕೂಡ ಇಲ್ಲಿನ ವಿಶೇಷ ರುಚಿಯ ಖಾದ್ಯಗಳಲ್ಲಿ ಒಂದಾಗಿದೆ.
ಹಿಲ್ಟನ್ ಬೆಂಗಳೂರು ರಾಯಭಾರ ಕಚೇರಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್
ಸಂಕ್ರಾತಿಯ ವಿಶೇಷ ಭೋಜನಕ್ಕೆ ಹಿಲ್ಟನ್ ಬೆಂಗಳೂರು ರಾಯಭಾರ ಕಚೇರಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್‌ಗೆ ತೆರಳಬಹುದು. ಈ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅತ್ಯಾಧುನಿಕ ಖಾದ್ಯಗಳು ಸೇರಿದಂತೆ ಸಂಕ್ರಾಂತಿ ಹಬ್ಬದ ಸಾಂಪ್ರದಾಯಿಕ ಆಹಾರವನ್ನು ಕೂಡ ನೀವು ಸೇವಿಸಬಹುದು. ಇಲ್ಲಿನ ವಾತಾವರಣ ಆಹ್ಲಾದಕರವಾಗಿದ್ದು, ಆಹಾರವೂ ರುಚಿಯಾಗಿರುತ್ತದೆ. ಕಠಾರಿ ಕಾಯಿ ಗೊಜ್ಜು, ಅಕ್ಕಿ ರೊಟ್ಟಿ, ಪೊಂಗಲ್ ಮತ್ತು ಹಾಲು ಪಾಯಸ ಇಲ್ಲಿನ ಹಬ್ಬದ ವಿಶೇಷ ಮೆನುವಿನಲ್ಲಿ ಬರುತ್ತದೆ.
ಹೋಟೆಲ್ ರಾಯಲ್ ಆರ್ಕಿಡ್, ಬೆಂಗಳೂರು
ದಕ್ಷಿಣ ಭಾರತ ಶೈಲಿಯ ಹಬ್ಬದ ಊಟ ಸವಿಯಲು ಹೋಟೆಲ್ ರಾಯಲ್ ಆರ್ಕಿಡ್ ಸೂಕ್ತವಾದ ಸ್ಥಳ. ಗ್ರಾಹಕರನ್ನು ಆಕರ್ಷಿಸುವ ವಾತಾರಣವದ ಜೊತೆಗೆ ರುಚಿಕರವಾದ ಆಹಾರವೇ ಇಲ್ಲಿನ ಹೈಲೆಟ್. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬೆಂಗಳೂರು ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ ಸಿಹಿ ಪೊಂಗಲ್ ಹಾಗೂ ಖಾರ ಪೊಂಗಲ್ ಸಿಗುತ್ತದೆ. ಜೊತೆಗೆ ಮಸಾಲಾ ದಾಲ್ ವಡೆ. ಇನ್ನು ನಾನ್ ವೆಜ್ ಪ್ರಿಯರಿಗೆ ಇಲ್ಲಿನ ಮಟನ್ ಹಾಗೂ ಮೀನು ಸಾರು ಉತ್ತಮ ಆಯ್ಕೆಯಾಗುತ್ತದೆ. ಜೊತೆಗೆ ಇಲ್ಲಿ ಜನಪ್ರಿಯ ತಲಪ್ಪಕಟ್ಟಿ ಬಿರಿಯಾನಿಯಂತಹ ವಿವಿಧ ರೀತಿಯ ಬಿರಿಯಾನಿ ಕೂಡ ಸಿಗುತ್ತದೆ. ಇಂದಿರಾ ನಗರದಲ್ಲಿರುವ ಈ ಹೋಟೆಲ್ ಆಹಾರ ಪ್ರಿಯರ ಮೆಚ್ಚಿನ ಆಯ್ಕೆಯಾಗಿದೆ.

ಖಂಡನಿ ರಾಜಧಾನಿ, ಬೆಂಗಳೂರು
ತನ್ನ ಅಮೋಘವಾದ ರುಚಿಯಿಂದ ಖಂಡನಿ ರಾಜಧಾನಿ ಬೆಂಗಳೂರಿನ ಹಲವು ಕಡೆಗಳಲ್ಲಿರುವ ಜನಪ್ರಿಯ ಹೋಟೆಲ್ ಆಗಿದೆ. ಇಲ್ಲಿ ಹಬ್ಬದ ಸಮಯದಲ್ಲಿ ಆಹಾರ ಉತ್ಸವವನ್ನು ಆಯೋಜಿಸುತ್ತಾರೆ. ಈ ಆಹಾರ ಉತ್ಸವದಲ್ಲಿ ಋತುವಿಗೆ ತಕ್ಕಂತಹ ತರಕಾರಿಗಳನ್ನು ಬಳಸಿಕೊಂಡು ವಿವಿಧ ಖಾದ್ಯಗಳನ್ನು ಮಾಡಲಾಗುತ್ತದೆ. ಇಲ್ಲಿ ಥಾಲಿ ಹತ್ತಕ್ಕೂ ಹೆಚ್ಚಿನ ಬಗೆಯನ್ನು ಹೊಂದಿರುತ್ತದೆ. ನಿಮಗೆ ಸಿಹಿ ತಿಂಡಿಗಳು ಇಷ್ಟವಾದರೆ ಇಲ್ಲಿನ ಜಲೇಬಿ ಫಫ್ಡಾ ಕಾಂಬೊ ಮತ್ತು ಟಿಲ್ ಲಡ್ಡೂ ಹಾಗೂ ವಿವಿಧ ಬಗೆಯ ಹಲ್ವಾಗಳನ್ನು ಮಿಸ್ ಮಾಡದೇ ಟ್ರೈ ಮಾಡಿ. ಆಹಾರ ಉತ್ಸವವು ಖಂಡನಿ ರಾಜಧಾನಿಯ ಎಲ್ಲಾ ಓಟ್‌ಲೆಟ್‌ಗಳಲ್ಲೂ ಲಭ್ಯವಿದೆ.
ಊಟ ಬೆಂಗಳೂರು
ವೈಟ್‌ಫೀಲ್ಡ್‌ನಲ್ಲಿರುವ ಊಟ ಬೆಂಗಳೂರು ಎಂಬ ಹೆಸರಿನ ಈ ಹೋಟೆಲ್‌ಲ್ ಕರ್ನಾಟಕದ ಸಾಂಪ್ರದಾಯಿಕ ಶೈಲಿಯ ಆಹಾರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಬಾಣಸಿಗ ದಿನೇಶ್ ಪೂಜಾರಿ ಅವರು ಸಂಕ್ರಾಂತಿ ಊಟ ಎಂಬ ಎರಡು ವಾರಗಳ ಅವಧಿಯ ವಿಶೇಷ ಊಟದ ಮೆನುವನ್ನು ರಚಿಸಿದ್ದಾರೆ. ಈ ಮೆನುವು ಸಂಕ್ರಾಂತಿ ಹಬ್ಬದ ದಿನ ನೀಡುವ ಎಳ್ಳು ಬೆಲ್ಲದಿಂದ ಆರಂಭವಾಗುತ್ತದೆ.
ಎಳ್ಳು ನೀರು, ಕಾಳು ಕೋಸಂಬರಿ, ದಾಲ್ ವಡಾ, ಕ್ಯಾಪ್ಸಿಕಂ ಬಜ್ಜಿಯನ್ನು ಸ್ಟಾಟರ್ಸ್ ಆಗಿ ನೀಡಿದರೆ. ಮೈನ್ ಕೋರ್ಸ್‌ನಲ್ಲಿ ರೊಟ್ಟಿ, ಬದನೆಕಾಯಿ ಪಲ್ಯ, ಹೆಸರುಕಾಳಿನ ಪುಂಡಿ ಪಲ್ಯ, ರಸಂ, ಅನ್ನ, ಅವರೆಕಾಳು ಪುಲಾವ್ ಜೊತೆಗೆ ರೈತ, ಗೋಧಿ ಪಾಯಸ, ಅಕ್ಕಿ ಮತ್ತು ಮೂಂಗ್ ದಾಲ್ ಪಾಯಸ, ಬೆಲ್ಲ, ಎಳ್ಳು ಮತ್ತು ಗಸಗಸೆಗಳೊಂದಿಗೆ ಪುಡಿಮಾಡಿದ ರೊಟ್ಟಿ ಲಭ್ಯವಿರುತ್ತದೆ. ಈ ಸಂಕ್ರಾಂತಿ ಊಟ ಜನವರಿ 15 ರಿಂದ 31ರ ವರೆಗೆ ಇರುತ್ತದೆ.

ಹೋಟೆಲ್ ನವೋದಯ, ಬೆಂಗಳೂರು ರೇಸ್ ಕೋರ್ಸ್
ಬೆಂಗಳೂರು ರೇಸ್ ಕೋರ್ಸ್ ಸಮೀಪವಿರುವ ಹೋಟೆಲ್ ನವೋದಯವು ಎಲ್ಲಾ ರೀತಿಯ ಖಾದ್ಯಗಳಿಗೆ ಸರ್ವ ಕಾಲಕ್ಕೂ ಜನಪ್ರಿಯವಾಗಿದೆ. ಇಲ್ಲಿನ ಬಾಣಸಿಗ ಜಿ ಸೋಮಸುಂದರಂ ಅವರು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಪೊಂಗಲ್ ಬ್ರಂಚ್‌ಅನ್ನು ರಚಿಸಿದ್ದಾರೆ. ಈ ವಿಶೇಷ ಮೆನುವಿನಲ್ಲಿ ತೆಂಗೈ (ತೆಂಗಿನಕಾಯಿ) ಪೊಂಗಲ್, ಸಕ್ಕರೆ (ಬೆಲ್ಲ) ಪೊಂಗಲ್ ಮತ್ತು ಕಬ್ಬರಿ ಪಾಲಾ (ತೆಂಗಿನಕಾಯಿ ಹಾಲು) ಪಾಯಸ ಮುಂತಾದ ಖಾದ್ಯಗಳಿದ್ದು, ಮಿಸ್ ಮಾಡದೇ ನೀವು ಇವುಗಳನ್ನು ಸವಿಯಬೇಕು.












Click it and Unblock the Notifications