ಅಶೋಕ್ ಖೇಣಿ 'ನೈಸ್' ಸಂಸ್ಥೆಗೆ ಶ್ರೇಷ್ಠ ನಿರ್ಮಾಣ ಪ್ರಶಸ್ತಿ
ಬೆಂಗಳೂರು, ಮಾ.12: ಕೇಂದ್ರ ಸರ್ಕಾರದ ಯೋಜನಾ ಆಯೋಗದ ಸಿಐಡಿಸಿ ಹಾಗೂ ಕನ್ ಸ್ಟ್ರಕ್ಷನ್ ಇಂಡಸ್ಟ್ರಿ ನೀಡುವ ಬೆಸ್ಟ್ ಕನ್ ಸ್ಟ್ರಕ್ಷನ್ ಪ್ರಶಸ್ತಿಯನ್ನು ನೈಸ್ ಸಂಸ್ಥೆ (ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್) ಪಡೆದುಕೊಂಡಿದೆ. ಅತ್ಯುತ್ತಮ ಕಾಮಗಾರಿಗಾಗಿ ಈ ಪ್ರಶಸ್ತಿ ನೈಸ್ ಸಂಸ್ಥೆಗೆ ಲಭ್ಯವಾಗಿದೆ.
ನವದೆಹಲಿಯ ಲೋಧಿ ರಸ್ತೆಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನ ಸ್ಟೀನ್ ಸಭಾಂಗಣದಲ್ಲಿ ಮಾರ್ಚ್ 7ರಂದು ನಡೆದ 18ನೇ ಸಿಐಡಿಸಿ ವಾರ್ಷಿಕ ದಿನಾಚರಣೆ ಹಾಗೂ 6ನೇ ಸಿಐಡಿಸಿ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಬದಲ್ಲಿ ನೈಸ್ ಸಂಸ್ಥೆಗೆ ಪ್ರಶಸ್ತಿನೀಡಿ ಗೌರವಿಸಲಾಯಿತು. ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಪ್ರಶಸ್ತಿ ಸ್ವೀಕರಿಸಿದರು.

ಇದೇ ಯೋಜನೆಗೆ 2013ರ ಸೆಪ್ಟೆಂಬರ್ ತಿಂಗಳಲ್ಲಿ ಇಂಡಿಯನ್ ಕಾಂಕ್ರೀಟ್ ಇನ್ ಸ್ಟಿಟ್ಯೂಟ್-ಕರ್ನಾಟಕ ಬೆಂಗಳೂರು ಸೆಂಟರ್ ನೀಡುವ 'ಕರ್ನಾಟಕ ಅತ್ಯುತ್ತಮ ಕಾಂಕ್ರೀಟ್ ಯೋಜನೆ - 2013' ಪ್ರಶಸ್ತಿ ಲಭಿಸಿತ್ತು.

ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅತಿ ಕಡಿಮೆ ಕಾರ್ಬನ್ ಅಂಶವನ್ನು ಬಿಡುಗಡೆ ಮಾಡುತ್ತದೆ. ಜಾಗತಿಕ ತಾಪಮಾನ ಇಳಿಕೆಗೆ ಇದು ಸಹಕಾರಿಯಾಗಲಿದೆ. ಇಂಧನ ಉಳಿತಾಯ, ಉಷ್ಣತೆಯಲ್ಲಿ ಇಳಿಕೆ ಸೇರಿದಂತೆ ಹಲಾವರು ಧನಾತ್ಮಕ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ. (ಒನ್ಇಂಡಿಯಾ ಕನ್ನಡ)












Click it and Unblock the Notifications