ಗಣೇಶ ಹಬ್ಬದ ಕೊಡುಗೆ : ಲೋಡ್ ಶೆಡ್ಡಿಂಗ್ ವಾಪಸ್ ಪಡೆದ ಬೆಸ್ಕಾಂ
ಬೆಂಗಳೂರು, ಸೆ.16 : ಬೆಂಗಳೂರಿನ ಜನರಿಗೆ ಬೆಸ್ಕಾಂ ಗಣೇಶ ಹಬ್ಬದ ಉಡುಗೊರೆ ನೀಡಿದ್ದು ಬುಧವಾರದಿಂದಲೇ ನಗರದಲ್ಲಿ ಲೋಡ್ ಶೆಡ್ಡಿಂಗ್ ರದ್ದುಗೊಳಿಸಲಾಗಿದೆ. ಪ್ರತಿದಿನ ನಗರದಲ್ಲಿ ಮೂರು ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿತ್ತು.
ವಿದ್ಯುತ್ ಕೊರತೆಯ ಕಾರಣ ನಗರದಲ್ಲಿ ಮೊದಲು 4 ಗಂಟೆ ಲೋಡ್ ಶೆಡ್ಡಿಂಗ್ ಜಾರಿಗೆ ತರಲಾಗಿತ್ತು. ಕೆಲವು ದಿನಗಳಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣ ಸುಧಾರಿಸಿದ ಕಾರಣ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಲೋಡ್ ಶೆಡ್ಡಿಂಗ್ ರದ್ದುಪಡಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಬೆಂಗಳೂರು ನಗರ, ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರದಿಂದ ಯಾವುದೇ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ಈ ಆದೇಶ ಇತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅನ್ವಯವಾಗುವುದಿಲ್ಲ. [ವಿದ್ಯುತ್ ಸಮಸ್ಯೆ ಬಗೆಹರಿಸುವುದು ಹೇಗೆ?]
1 ಗಂಟೆ ಕಡಿತಗೊಂಡಿತ್ತು : ಕಳೆದ ವಾರ ನಗರದಲ್ಲಿ ವಸತಿ ಪ್ರದೇಶದಲ್ಲಿ 4 ತಾಸು, ವಾಣಿಜ್ಯ ಪ್ರದೇಶಗಳಲ್ಲಿ 3 ತಾಸು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ 2 ತಾಸು ಲೋಡ್ ಶೆಡ್ಡಿಂಗ್ ಜಾರಿಯಲ್ಲಿತ್ತು. ಮಂಗಳವಾರ ಇದನ್ನು 1 ಗಂಟೆ ಕಡಿತಗೊಳಿಲಾಗಿತ್ತು. ಮಂಗಳವಾರ ರಾತ್ರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಎಲ್ಲಿ ವಿದ್ಯುತ್ ಉತ್ಪಾದನೆ? : ಉಡುಪಿ ಉಷ್ಣ ವಿದ್ಯುತ್ ಸ್ಥಾವರ 1,100 ಮೆಗಾವಾಟ್ ಹಾಗೂ ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರದಿಂದ 430 ಮೆಗಾವಾಟ್ ವಿದ್ಯುತ್ ಪೂರೈಕೆ ಆರಂಭಗೊಂಡಿದೆ. ಪವನ ವಿದ್ಯುತ್ ಪೂರೈಕೆಯೂ ಸುಧಾರಿಸಿದೆ. ಆದ್ದರಿಂದ, ಲೋಡ್ ಶೆಡ್ಡಿಂಗ್ ಕಡಿತಗೊಂಡಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದಿಲ್ಲ. ಆದರೆ, ನಿರ್ವಹಣಾ ಕಾಮಗಾರಿ ಮುಂತಾದ ತುರ್ತು ಕಾರಣಗಳಿಗೆ ಅನಿಯಮಿತ ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
-
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ









Click it and Unblock the Notifications