BESCOM: ಸಾರ್ವಜನಿಕ ಗಣೇಶೋತ್ಸವಕ್ಕೆ ಬೆಸ್ಕಾಂ ಮಾರ್ಗಸೂಚಿ ಬಿಡುಗಡೆ, ಸಲಹೆಗಳು
ಬೆಂಗಳೂರು, ಸೆಪ್ಟಂಬರ್ 05: ರಾಜ್ಯದಲ್ಲಿ ಗಣೇಶೋತ್ಸವಕ್ಕೆ ಸಕಲ ತಯಾರಿಗಳು ನಡೆದಿದ್ದು, ಹಬ್ಬಕ್ಕೆ ಎರಡೇ ದಿನ ಬಾಕಿ ಉಳಿದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ಮೂರ್ತಿ ವಿಸರ್ಜನೆ ವೇಳೆ ಯಾವುದೇ ವಿದ್ಯುತ್ ಅಪಘಾತಗಳು ನಡೆಯದಂತೆ ಎಚ್ಚರಿಕೆ ಸಹಿಸಬೇಕು. ಬೆಸ್ಕಾಂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕುರಿತಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು, ಸಂಜೋಜಕರು ನಿಯಮಾನುಸಾರ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬೇಕು. ಈ ಸಂಬಂಧ ವಿದ್ಯುತ್ ವ್ಯವಸ್ಥೆ, ದೀಪಾಲಂಕಾರಕ್ಕೆ ಸಹಕಾರ ನೀಡಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ಗಣೇಶೋತ್ಸವ, ಮೆರವಣಿಗೆ, ವಿಜರ್ಸನೆ ವೇಳೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಈ ಮೂಲಕ ಸಂಭವನೀಯ ವಿದ್ಯುತ್ ಅಪಘಾತ ತಪ್ಪಿಸಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ನಿರ್ದೇಶಿಸಿದೆ.
ಬೆಸ್ಕಾಂ ನೀಡಿದ ಸಲಹೆಗಳೇನು?
* ವಿದ್ಯುತ್ ತಂತಿಗಳು, ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್ ಸ್ಟೇಷನ್‌ಗಳಿಗೆ ಕ್ಯಾನೋಪಿಗಳು ಅಥವಾ ಯಾವುದೇ ಇತರ ವಸ್ತುಗಳನ್ನು, ಶಾಮೀಯಾನ ದೃಷ್ಟಿಯಿಂದ ಕಟ್ಟಬಾರದು.
* ಮೆರವಣಿಗೆಯ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು. ರಸ್ತೆಬದಿಯಲ್ಲಿ ವಿದ್ಯುತ್ ತಂತಿಗಳನ್ನು ತಪ್ಪಿಸಿ. ಸುರಕ್ಷಿತ ಮೆರವಣಿಗೆ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಉಪ ವಿಭಾಗಾಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಬೇಕು.
* ಅಪಘಾತಗಳನ್ನು ತಡೆಗಟ್ಟಲು ವಿದ್ಯುತ್ ಪರಿಕರಗಳನ್ನು ಹೊಂದಿರುವ ಪ್ರದೇಶಗಳನ್ನು ಗುರುತಿಸಿ ಮತ್ತು ಅವುಗಳನ್ನು "ಡೇಂಜರ್ ಜೋನ್" ಎಂದು ಗುರುತಿಸಿ.
* ನೀವು ಮುರಿದ ತಂತಿಗಳು ಅಥವಾ ವಿದ್ಯುತ್ ಸ್ಪಾರ್ಕ್‌ಗಳನ್ನು ಗಮನಿಸಿದರೆ, ತಕ್ಷಣವೇ BESCOM ನ ಸಹಾಯವಾಣಿಯ ಈ ಸಂಖ್ಯೆಗೆ 1912 ಸಂಪರ್ಕಿಸಿ. ಈ ಸುರಕ್ಷತಾ ಕ್ರಮಗಳ ಬಗ್ಗೆ ಗಮನಹರಿಸುವ ಮೂಲಕ, ನಾವು ಎಲ್ಲಾ ನಾಗರಿಕರಿಗೆ ಸಂತೋಷದಾಯಕ ಮತ್ತು ಘಟನೆ-ಮುಕ್ತ ಗಣೇಶೋತ್ಸವವನ್ನು ಖಚಿತಪಡಿಸಿಕೊಳ್ಳಬೇಕಿದೆ.
* ಲೈಟ್ ದೀಪಗಳಿಗಾಗಿ ನೇರ ವಿದ್ಯುತ್ ತಂತಿಯಿಂದ ವಿದ್ಯುತ್ ಪಡೆಯುವುದು ತಪ್ಪಿಸಬೇಕು.
* ಮೆರವಣಿಗೆ ವೇಳೆ ವಿದ್ಯುತ್ ತಂತಿ ಕುರಿತು ಎಚ್ಚರಿಕೆ ವಹಿಸಬೇಕು.
ವಿದ್ಯುತ್ ಸಂಪರ್ಕ ಪಡೆಯಲು ಸೂಚನೆ
ಗಣೇಶೋತ್ಸವಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ ಪಿಡಿಓ, ಬಿಡಿಎ, ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆದ ಬಳಿಕ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅಥವಾ ಸಹಾಯಕ ಇಂಜಿನಿಯ್ ಗಳು ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಮಾಣ ಮಾಡಿದ ಪೆಂಡಾಲ್ ಅಥವಾ ಸುರಕ್ಷತೆ ಖಾತೆ ಪಡೆಸಿ ಸೂಕ್ತ ನಿಯಮಗಳನ್ವಯ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ತಿಳಿಸಿದರು.












Click it and Unblock the Notifications