• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ.9 ರ ತನಕ ವಿದ್ಯುತ್ ಕಡಿತ, ನಿಮ್ಮ ಏರಿಯಾದಲ್ಲಿ ಪವರ್ ಇದ್ಯಾ?

|

ಬೆಂಗಳೂರು, ಜನವರಿ 7: ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಜನವರಿ 9ರ ತನಕ ವಿದ್ಯುತ್ ಕಡಿತ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರಲಿದೆ ಎಂದು ಬೆಂಗಳೂರು ವಿದ್ಯುತ್ ಪ್ರಸರಣ ಸಂಸ್ಥೆ ನಿಯಮಿತ(ಬೆಸ್ಕಾಂ) ಪ್ರಕಟಣೆ ಹೊರಡಿಸಿದೆ.

   ಜನವರಿ 9ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ , BESCOM ಎಚ್ಚರಿಕೆ | Oneindia Kannada

   ಜಯದೇವ ಮತ್ತು ಸಾರಕ್ಕಿ ಉಪ ವಿಭಾಗದಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಜನವರಿ 9ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಜನವರಿ 9ರ ತನಕ ಬೆಳಗ್ಗೆ 10 ರಿಂದ ಸಂಜೆ 6.30 ರ ತನಕ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.

   ತಾತ್ಕಾಲಿಕ ವಿದ್ಯುತ್ ಪೂರೈಕೆ ವ್ಯತ್ಯಯ

   ಎನ್.ಎಸ್. ಪಾಳ್ಯ, ಇಂಡಸ್ಟ್ರಿಯಲ್ ಏರಿಯಾ, ಬಿಟಿಎಂ ಲೇಔಟ್ 2 ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶ, ಇಟ್ಟಮಡು, ಹೊಸಕೆರೆಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ಎಸ್ ಟಿ ಬೆಡ್ ಲೇಔಟ್, ಕೋರಮಂಗಲ 4 ನೇ ಬ್ಲಾಕ್, ಎಚ್ ಎಸ್ ಆರ್ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

   ಜೆಪಿ ನಗರ 3, 4 ಮತ್ತು 5 ನೇ ಹಂತ, ಜೋಗಿ ಕಾಲೋನಿ, ಮಾರುತಿನಗರ, ಎಸ್ ಜೆ ಎಂ ಸಿ ಕ್ವಾಟರ್ಸ್, ಈಸ್ಟ್ ಲ್ಯಾಂಡ್ ಹೋಲ್ಡಿಂಗ್ಸ್, ಸಾರಕ್ಕಿ ಮಾರ್ಕೆಟ್, ವೀವರ್ಸ್ ಕಾಲೋನಿ,ವಿನಾಯಕ ನಗರ, ಶಾಂತಿ ನಗರ,ಕಟ್ಟಿಗೇನಹಳ್ಳಿ, ವಿನಾಯಕ ನಗರ, ಬಾಗಲೂರು ಕ್ರಾಸ್, ಯಲಹಂಕ ಓಲ್ಡ್ ಟೌನ್, ಜಡಿಗೇನಹಳ್ಳಿ, ಕಟ್ಟಿಗೇನಹಳ್ಳಿ, ಅಕ್ಕಿ ಪೇಟೆ, ಕಾಟನ್ ಪೇಟೆ, ಜಾಲಿ ಮೊಹಲ್ಲ, ಬಾಲಾಜಿ ಕಾಂಪ್ಲೆಕ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

   ಇಂದಿರಾನಗರ, ಜಯನಗರ, ಶಿವಾಜಿನಗರ, ಕೋರಮಂಗಲ, ವೈಟ್ ಫೀಲ್ಡ್ ಹಾಗೂ ಹೊಸೂರು ರಸ್ತೆ-ಸರ್ಜಾಪುರ ರಸ್ತೆ ವಿಭಾಗದಲ್ಲಿ 11ಕೆವಿ ಹೆವಿ ಎಲೆಕ್ಟ್ರಿಸಿಟಿ ಲೇನ್ ಅಂಡರ್ ಗ್ರೌಡ್ ವ್ಯವಸ್ಥೆ ಕಾಮಗಾರಿ ಜಾರಿಯಲ್ಲಿರುವುದರಿಂದ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಬಹುದು.

   English summary
   Bengaluru Electricity Supply Company Limited (BESCOM) in its public notice said many areas Power Cut outage affected areas are due to regular maintenance works.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X