Bengaluru Kambala: 155 ಮೀಟರ್ ಉದ್ದದ ರೇಸ್‌ಟ್ರಾಕ್: ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕೆಎಲ್ ರಾಹುಲ್‌ಗೆ ಆಹ್ವಾನ
ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಕರಾವಳಿ ಭಾಗದಿಂದ ಹೊರಗಡೆ ಕಂಬಳ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಬೆಂಗಳೂರಿನಲ್ಲಿ ಮೊಲದ ಬಾರಿ ಕಂಬಳ ಆಯೋಜನೆ ಮಾಡಲಾಗುತ್ತಿದ್ದು, ಪ್ರಮುಖ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಸಾಂಪ್ರದಾಯಿಕ ಕೋಣಗಳ ಓಟದ ಸ್ಪರ್ಧೆಯಾದ ಮೊದಲ ಕಂಬಳ ಕಾರ್ಯಕ್ರಮಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಬೆಂಗಳೂರು ಕಂಬಳ ಕಾರ್ಯಕ್ರಮದಲ್ಲಿ 155 ಮೀಟರ್ ಉದ್ದದ ಉದ್ದದ ರೇಸ್‌ಟ್ರಾಕ್ ಇರಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪುತ್ತೂರು ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಪ್ರಥಮ ಬಾರಿಗೆ ನಡೆಯುವ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 116 ಕಂಬಳ ಕೋಣಗಳ ಮಾಲೀಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಎಂದು ಹೇಳಿದರು.
8 ಲಕ್ಷ ಜನ ಸೇರುವ ನಿರೀಕ್ಷೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸ್ಪರ್ಧೆಗೆ ಟ್ರಾಕ್ ಸಿದ್ಧಪಡಿಸುವ ಕೆಲಸ ಆರಂಭವಾಗಿದೆ. ಕಂಬದಲ್ಲಿ 125 ಜೋಡಿ ಎಮ್ಮೆಗಳು ಭಾಗವಹಿಸುವ ಗುರಿಯನ್ನು ಕಾರ್ಯಕ್ರಮ ಆಯೋಜಕರು ಇಟ್ಟುಕೊಂಡಿದ್ದಾರೆ.
ಕರಾವಳಿ ಭಾಗದಿಂದ ಬೆಂಗಳೂರಿಗೆ ಕಂಬಳದಲ್ಲಿ ಭಾಗವಹಿಸುವ ಕೋಣಗಳನ್ನು ಬೆಂಗಳೂರಿಗೆ ಸಾಗಿಸಲು ಪ್ರತಿ ಮಾಲೀಕರಿಗೆ ₹ 50,000 ನೀಡಲಾಗುತ್ತದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಮೇವು ಮತ್ತು ನೀರನ್ನು ಕೂಡ ಅಲ್ಲಿಂದಲೇ ತರುತ್ತಿರುವುದು ವಿಶೇಷವಾಗಿದೆ.
ಕಾರ್ಯಕ್ರಮದ ವೇಳೆ ದಕ್ಷಿಣ ಕನ್ನಡದ ವಿಶೇಷ ಖಾದ್ಯಗಳನ್ನು ಸಹ ಮಾರಾಟ ಮಾಡಲು ಮಳಿಗೆಗಳ ಸ್ಥಾಪನೆಗೆ ಯೋಜಿಸಲಾಗಿದೆ. ಕಂಬಳ ಕಾರ್ಯಕ್ರಮವನ್ನು ವೀಕ್ಷಿಸಲು ಎಂಟು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಕಂಬಳ ಕಾರ್ಯಕ್ರಮಕ್ಕೆ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಗಣ್ಯರು ಬರುವ ನಿರೀಕ್ಷೆ ಇದೆ. ರಜನಿಕಾಂತ್, ಐಶ್ವರ್ಯಾ ಅವರನ್ನೂ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ.
ಕಂಬಳ ಎಂದರೇನು?
ಕಂಬಳ ಎಂಬುದು ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಚಳಿಗಾಲದ ತಿಂಗಳುಗಳಲ್ಲಿ ರೈತರು ನಡೆಸುವ ಎಮ್ಮೆ ಓಟವಾಗಿದೆ. ಕೆಸರು ಮತ್ತು ನೀರಿನಿಂದ ತುಂಬಿದ ಎರಡು ಸಮಾನಾಂತರ ಟ್ರ್ಯಾಕ್‌ಗಳಲ್ಲಿ ಓಟವನ್ನು ನಡೆಸಲಾಗುತ್ತದೆ. ಪ್ರತಿಯೊಂದು ಜೋಡಿ ಎಮ್ಮೆಗಳು ಟ್ರ್ಯಾಕ್‌ನಲ್ಲಿ ಪ್ರಾಣಿಗಳನ್ನು ನಿಯಂತ್ರಿಸಲು 'ಕಂಬಳ ರನ್ನರ್' ಅನ್ನು ಸಹ ಹೊಂದಿರುತ್ತಾರೆ.
ಕನ್ನಡ ಚಲನಚಿತ್ರ 'ಕಾಂತಾರ' ಈ ಕ್ರೀಡೆಯನ್ನು ಕರ್ನಾಟಕದ ಹೊರಗಿನ ಇತರ ಪ್ರದೇಶಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಸಹಾಯ ಮಾಡಿದೆ.












Click it and Unblock the Notifications