ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಗ ಯಾವುದಯ್ಯ ಬೆಂಗಳೂರಿನ ತ್ಯಾಜ್ಯ ಹಾಕೋಕೆ ದಾರಿ ತೋರಿಸಯ್ಯ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 6: ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕಗಳು ಸಂಪೂರ್ಣ ತುಂಬಿ ಹೋಗಿದ್ದು, ಮುಂದಿನ ದಿನಗಳಲ್ಲಿ ಕಸ ಎಲ್ಲಿ ಹಾಕುವುದು ಎಂಬ ಬೃಹದಾಕಾರದ ಪ್ರಶ್ನೆ ಕಾಡಲಾರಂಭಿಸಿದೆ.

ಈಗಾಗಲೇ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿ ಪರಣಮಿಸಿದೆ, ಇನ್ನೂ ಕೆಲವು ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತಿರುವ ಹಲವಾರು ನಿದರ್ಶನಗಳಿವೆ. ಈ ಮಧ್ಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳೇ ತುಂಬಿ ಹೋಗಿರುವಾಗ ಕಸವನ್ನು ಎಲ್ಲಿ ಹಾಕಬೇಕು ಎನ್ನುವ ಪ್ರಶ್ನೆ ಕಾಡುತ್ತಿದೆ.

ಬೆಂಗಳೂರಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಚಿಂತನೆ: ಪರಮೇಶ್ವರ್ ಬೆಂಗಳೂರಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಚಿಂತನೆ: ಪರಮೇಶ್ವರ್

ಬೆಳ್ಳಳ್ಳಿ ಕ್ವಾರಿ, ಮಿಟಗಾನಹಳ್ಳಿ ಕ್ವಾರಿ ಹಾಗೂ ಬಾಗಲೂರು ಕ್ವಾರಿ ತುಂಬಿ ಹೋಗಿದೆ, ಈಗಾಗಲೇ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಿಡಗಾನಹಳ್ಳಿ ಬಾಗಲೂರಲ್ಲಿ ಕಸ ಹಾಕುತ್ತಿಲ್ಲ, ದಿನನಿತ್ಯ ಉತ್ಪಾದನೆಯಾಗುವ ಐದರಿಂದ 6 ಟನ್‌ಗಳಷ್ಟು ತ್ಯಾಜ್ಯವನ್ನು ಹಾಕುವುದು ಎಲ್ಲಿ ಎನ್ನುವುದರ ಬಗ್ಗೆ ಯಾರಲ್ಲಿಯೂ ಸ್ಪಷ್ಟ ಮಾಹಿತಿ ಇಲ್ಲ.

Bengaluru worries about dump yard scarcity again

ದಿನನಿತ್ಯ ಐದಾರು ಟನ್‌ಗಳಷ್ಟು ತ್ಯಾಜ್ಯ ಬೆಂಗಳೂರಲ್ಲಿ ಉತ್ಪಾದನೆಯಾಗುತ್ತದೆ ಇನ್ನು ಹಬ್ಬ ಹರಿದಿನಗಳು ಬಂದರಂತೂ 10 ಟನ್‌ಗಳು ಮೀರುತ್ತದೆ. ಹೀಗಿರುವಾಗ ಬೆಂಗಳೂರಲ್ಲಿ ಇ-ತ್ಯಾಜ್ಯ ಘಟಕಗಳನ್ನು ಹೆಚ್ಚೆಚ್ಚು ನಿರ್ಮಿಸುವ ಅಗತ್ಯವಿದೆ. ತ್ಯಾಜ್ಯ ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಿದೆ.

ಮಾರುಕಟ್ಟೆ ಇನ್ನಿತರೆ ಪ್ರದೇಶಗಳಲ್ಲಿ ಕಾಲುಕಾಲಿಗೆ ಸಿಗುವಂತೆ ಈಗಾಗಲೇ ತ್ಯಾಜ್ಯ ಸುರಿಯಲಾಗುತ್ತಿದೆ, ಇನ್ನು ಖಾಲಿ ಇರುವ ಪ್ರದೇಶದಲ್ಲಿ ಬಿಬಿಎಂಪಿ ಗುತ್ತಿಗೆದಾರರೇ ಸಂಗ್ರಹಿಸಿದ ಕಸವನ್ನು ಹಾಕುತ್ತಿದ್ದಾರೆ.

ಇನ್ನು ಮನೆಯ ಪಕ್ಕದಲ್ಲೆಲ್ಲಾದರೂ ಖಾಲಿ ನಿವೇಶನ ಕಂಡರೆ ಸಾಕು ಸೋಮಾರಿತನದಿಂದ ಜನರು ಅಲ್ಲಿಯೇ ಕಸವನ್ನು ಬಿಸಾಡುತ್ತಾರೆ. ಹೀಗಿರುವಾಗ ಈ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಹೋಗುವ ಸ್ವಲ್ಪ ತ್ಯಾಜ್ಯವೂ ಬಂದ್‌ ಆದರೆ ಕಸವನ್ನು ಎಲ್ಲಿ ಹಾಕಬೇಕು ಎನ್ನುವುದೇ ದೊಡ್ಡ ಸವಾಲಾಗಿದೆ.

English summary
As dump yards were fully occupied with thousand of million tonne waste, Bangalore civic authority is worried about finding new dump yards despite opposition by the outskirts villagers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X