Watch Viral Video: ಸ್ನೇಹಿತೆ ದುಬೈ ತಲುಪಿದರೂ ನಾನು ಮನೆ ತಲುಪಲಿಲ್ಲ: ಬೆಂಗಳೂರು ಮಹಿಳೆ

ಬೆಂಗಳೂರು, ಜುಲೈ 20: ಸಿಲಿಕಾನ್ ಸಿಟಿ ಬೆಂಗಳೂರು ಗಾರ್ಡನ್ ಸಿಟಿ, ಐಟಿ ಹಬ್ ಎಂದೆಲ್ಲ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಲೂ ಆಗಾಗ ಬೆಂಗಳೂರು ಸುದ್ದಿಯಾಗುತ್ತದೆ. ಸಂಚಾರ ದಟ್ಟಣೆ ಸಮಸ್ಯೆಗೆ ಜನರು ನಿತ್ಯವು ಹೈರಾಣಾಗುವಂತಾಗಿದೆ. ಅಂಥದ್ದೆ ಘಟನೆಯನ್ನು ಎದುರಿಸಿರುವ ಬೆಂಗಳೂರು ಮಹಿಳೆಯೊಬ್ಬರ ಪೋಸ್ಟ್ ವೈರಲ್ ಆಗಿದೆ. 'ಸ್ನೇಹಿತೆ ದುಬೈ ತಲುಪಿದರೂ ಸಹಿತ ನಾನು ಇನ್ನೂ ಟ್ರಾಫಿಕ್ ಸಿಗ್ನಲ್ ನಲ್ಲಿದ್ದೇನೆ' ಎಂಬ ವಿಡಿಯೋ ಪೋಸ್ಟ್ ವೈರಲ್ ಆಗುತ್ತಿದ್ದು, ನೆಟ್ಟಿಗೆ ಟ್ರಾಫಿಕ್ ಬಗೆಗಿನ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ಹಾಕಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳ ಸಿಲುಕಿದ್ದ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿದ್ದು, ನನ್ನ ಸ್ನೇಹಿತೆ ದುಬೈ ತಲುಪಿದ್ದಾಳೆ ಎಂದು ಅವರು ತಮಾಷೆ ಬರೆದುಕೊಂಡಿದ್ದಾರೆ. ವಿಡಿಯೋ ತಮಾಷೆಯಾಗಿದ್ದರು ಅದು ಬೆಂಗಳೂರಿನ ನೈಜ, ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ. ಹೀಗಾಗಿ ಅವರ ವಿಡಿಯೋ 19 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

Bengaluru Woman s Viral Video Friend Reached Dubai I m Still in Traffic Showed City s Jam Woes

ನಗರದಲ್ಲಿ ಉಸಿರುಗಟ್ಟಿದ ರಸ್ತೆಗಳಲ್ಲಿ ಸಿಲುಕಿಕೊಂಡಿದ್ದ ಮಹಿಳೆ ತನ್ನ ಗೆಳೆತಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುತ್ತಾರೆ. ಈ ವೇಳೆ ಏರ್‌ಪೋರ್ಟ್‌ನಿಂದ ಸ್ನೇಹಿತೆ ದುಬೈ ತಲುಪಿದರೂ ಸಹಿತ ನಾನು ಏರ್‌ಪೋರ್ಟ್‌ನಿಂದ ಮನೆ ತಲುಪಿಲ್ಲ. ಕಾರಣ ಬೆಂಗಳೂರು ಟ್ರಾಫಿಕ್, ಎಂದು ಅವರು ವಿಡಿಯೋ ಹಂಚಿಕೊಂಡಿದ್ದರು. ತಮಾಷೆಗೆ ಅವರು ಹೀಗೆ ಹೇಳಿದ್ದರು ಸಹ ನಗರದ ಟ್ರಾಫಿಕ್ ಜಂಜಾಟವನ್ನು ಅವರ ಪೋಸ್ಟ್ ಪ್ರದರ್ಶಿಸಿದೆ.

ಟ್ರಾವೆಲ್ ಹಾಗೂ ಫುಡ್ ಕುರಿತು ಇನ್ಸ್‌ಟಾಗ್ರಾಮ್ ಪೋಸ್ಟ್ ವಿಡಿಯೋ ಹಾಕುವ ಪ್ರಿಯಾಂಕಾ ಮತ್ತು ಇಂದ್ರಯಾನಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಬೆಂಗಳೂರು ದೇವನಹಳ್ಳಿ ಮಾರ್ಗ ಯಲಹಂಕ ಪ್ರಮುಖ ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಟ್ರಾಫಿಕ್ ಜಾಮ್‌ ಅನ್ನು ತೋರಿಸುತ್ತದೆ. ವಾಹನಗಳು ಸಾಲುಗಟ್ಟಿ ನಿಂತಿದ್ದನ್ನು ನೀವು ನೋಡಬಹುದಾಗಿದೆ.

ಟ್ರಾಫಿಕ್ ಸಂಕಷ್ಟ ಹಂಚಿಕೊಂಡ ನೆಟ್ಟಿಗರು

ಇವರ ಈ ಪೋಸ್ಟ್‌ಗೆ ಟ್ರಾಫಿಕ್ ನಲ್ಲಿ ಸಿಲುಕಿದವರು ಬಗೆ ಬಗೆಯ ಕಾಮೆಂಟ್ ಹಾಕಿಕೊಂಡಿದ್ದಾರೆ. ತಮ್ಮ ಸಂಕಟಗಳು, ಬೇಸರವನ್ನು ಹೊರ ಹಾಕಿದ್ದಾರೆ. ''ಈ ವಿಷಯ ನಿಜಕ್ಕೂ ನನಗೂ ಸಂಬಂಧಿಸಿದ್ದಾಗಿದೆ. ನನ್ನ ಹೆತ್ತವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿದರು. ಅಲ್ಲಿಂದ ನಾನು ದೆಹಲಿ ತಲುಪಿದೆ. ಅದೇ ವೇಳೆಗೆ ಅವರು ಮನೆ ತಲುಪಿದರು'' ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ. ಮತ್ತೊಬ್ಬ ನೆಟ್ಟಿಗರು ಟ್ರಾಫಿಕ್ ಹೆಚ್ಚುತ್ತಿರುವ ಬೆಂಗಳೂರಿನಲ್ಲಿ ನಾನು ನಡೆಯಲು ಇಷ್ಟಪಡುತ್ತೇನೆ. ಏಕೆಂದರೆ ಒಂದು ಕಿಲೋ ಮೀಟರ್ ದೂರವನ್ನು ಕಾರಿನಲ್ಲಿ ತೆರಳಲು ಮೂರು ಗಂಟೆ ಬೇಕು. ಅದೇ ನಡೆದುಕೊಂಡು ಹೋದರೆ 10 ನಿಮಿಷಗಳಲ್ಲಿ ತಲುಬಹುದೆಂದು ಟ್ರಾಫಿಕ್ ಪರಿಸ್ಥಿತಿ ವಿವರಿಸಿದರು.

ಈ ರೀತಿ ನನಗೂ ಆಗಿದೆ. ನಾನು ತಮಾಷೆ ಮಾಡುತ್ತಿಲ್ಲ. ನನ್ನ ಸಹೋದರಿ ಮಂಗಳೂರಿಗೆ ಹೊರಡುತ್ತಿದ್ದಳು. ಅವಳು ಕೊನೆಯ ನಿಮಿಷದಲ್ಲಿ ವಿಮಾನ ಹತ್ತಿಸಿ ಬಂದೆ. ಅವಳು ತ್ವರಿತವಾಗಿ ಮಂಗಳೂರು ತಲುಪಿದರು. ಆಗ ನಾನು ಇನ್ನೂ ಮನೆ ಕಡೆಗೆ ಹೋಗುತ್ತಿದ್ದೆ ಎಂದು ನೆಟ್ಟಿಗರು ಹೀಗೆ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಸವಾರರಿಗೆ ನಿತ್ಯ ಟ್ರಾಫಿಕ್ ಕಿರಿ

ಇದು ಬೆಂಗಳೂರು ಏರ್‌ಪೋರ್ಟ್ ಕಡೆಗೆ ಹೋಗುವಾಗ ಉಂಟಾಗುವ ಟ್ರಾಫಿಕ್ ಸಮಸ್ಯೆ ಅಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗಲು ಗಂಟೆ ಗಟ್ಟಲೇ ಸಮಯ ಹಿಡಯುತ್ತದೆ. ಮಳೆಗಾಲದಲ್ಲಿ ಸೋಮವಾರ ಮತ್ತು ಇತರ ದಿವಸಗಳಂದು ಪೀಕ್ ಸಮಯದಲ್ಲಿ ವಾಹನಗಳು ಸಾಲಾಗಿ ನಿಂತಲ್ಲೇ ನಿಂತಿರುತ್ತವೆ. ಇದರಿಂದ ನಿತ್ಯ ವಾಹನದಲ್ಲಿ ಓಡಾಡುವವರು ಕಿರಿ ಅನುಭವಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+