Karnataka Weather: ಜೂನ್ 9ರವರೆಗೆ ಬೆಂಗಳೂರಿಗೆ ವ್ಯಾಪಕ ಮಳೆ ಮುನ್ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಕೆಲವೆಡೆ ಮುಂಗಾರು ಮಳೆಯ ಮೊದಲ ಸಿಂಚನವಾಗಿದೆ. ಮುಂದಿನ 48ಗಂಟೆಗಳಲ್ಲಿ ನಗರಾದ್ಯಂತ ಮುಂಗಾರು ಹೆಚ್ಚಿನ ಚುರುಕು ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ. ತಾಪಮಾನದಲ್ಲಿ ಕುಡಿತ ಕಂಡು ಬಂದಿದ್ದು, ನಗರವೆಲ್ಲ ಸಂಪೂರ್ಣ ತಂಪಾಗಿದೆ, ರಾಜ್ಯದ ಉತ್ತರ ಕರ್ನಾಟಕ ಭಾಗಕ್ಕೂ ಮುಂಗಾರು ಮಳೆ ವಿಸ್ತರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಜೂನ್ 9ರವರೆಗೆ ಹಗುರದಿಂದ ಸಾಧಾರಣ ಮಳೆ ಆಗಲಿದ್ದು, ಕೆಲವೆಡೆ ಬಿರುಗಾಳಿ ಸಹಿತ ವ್ಯಾಪಕ ಮಳೆ ಬೀಳಲಿದೆ. ಮಧ್ಯಾಹ್ನ ಬಳಿಕ ನಗರಾದ್ಯಂತ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಲಿದೆ. ಚಳಿ ಗಾಳಿ ಬೀಸಲಿದ್ದು, ರಾಜಧಾನಿಗೆ ಸಂಪೂರ್ಣ ಮಳೆಗಾಲ ಆವರಿಸಲಿದೆ ಎಂಬ ಮುನ್ಸೂಚನೆ ಇದೆ.

Bengaluru Weather

ನಗರದ ತಾಪಮಾನ 30 ಡಿ.ಸೆ. ಕುಸಿತ

ನಗರದಲ್ಲಿ ಈ ಹಿಂದೆ ಬಿಸಿಲಿನ ದಿನಗಳಲ್ಲಿ ಗರಿಷ್ಠ ತಾಪಮಾನ 34-35 ರಷ್ಟು ತಾಪಮಾನ ದಾಖಲಾಗುತ್ತಿತ್ತು. ಇದೀಗ ಮಳೆ ಬಂದ ಬೆನ್ನಲ್ಲೆ 30 ಡಿಗ್ರಿ ಸೆಲ್ಸಿಯಸ್‌ಗೆ ಗರಿಷ್ಠ ತಾಪಮಾನ ಇಳಿಕೆ ಆಗಿದ್ದು, ಕನಿಷ್ಠ ತಾಪಮಾನ 21-22 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮುಂದಿನ ನಾಲ್ಕು ತಿಂಗಳು ನಗರವೆಲ್ಲ ಕೋಲ್ ಆಗಿರಲಿದೆ. ಜನರು ಇಂದಿನ ವಾತಾವರಣ ಸ್ವಾಗತಿಸಿದ್ದಾರೆ. ಆದರೆ ತಗ್ಗು ಪ್ರದೇಶದ ನಿವಾಸಿಗಳು ಮಳೆ ಆತಂಕ ಎದುರಿಸುವಂತಾಗಿದೆ. ರಸ್ತೆ ಕಾಮಗಾರಿ, ವಾಟರ್ ಲಾಗಿಂಗ್ ಹಾಗೂ ಇನ್ನಿತರ ಸಮಸ್ಯೆ ಉದ್ಭವಿಸುವ ಕಾರಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮಳೆ ತಲೆನೋವಾಗಿ ಪರಿಣಮಿಸಲಿದೆ.

Monsoon Rain: ಕೊನೆಗೂ ಕೇರಳ ಪ್ರವೇಶಿಸಿತು ಮುಂಗಾರು, ಕರ್ನಾಟಕಕ್ಕೆ ಧಾರಾಕಾರ ಮಳೆ ಮುನ್ಸೂಚನೆ: ಐಎಂಡಿ
Monsoon Rain: ಕೊನೆಗೂ ಕೇರಳ ಪ್ರವೇಶಿಸಿತು ಮುಂಗಾರು, ಕರ್ನಾಟಕಕ್ಕೆ ಧಾರಾಕಾರ ಮಳೆ ಮುನ್ಸೂಚನೆ: ಐಎಂಡಿ

83 ವಾರ್ಡ್‌ಗಳಲ್ಲಿ ಮುಂಗಾರು ಮೊದಲ ಸಿಂಚನ

ಬೆಂಗಳೂರಿನ ಕೋರಮಂಗಲ, ಕನಕಪುರ ರಸ್ತೆ, ಹಾರೋಹಳ್ಳಿ, ಎಚ್‌ಎಸ್‌ಆರ್ ಬಡಾವಣೆ ಸೇರಿದಂತೆ ಸುಮಾರು 83 ವಾರ್ಡ್‌ಗಳಲ್ಲಿ ಶನಿವಾರ ಮಧ್ಯಾಹ್ನ ಬಿರುಸಿನ ಮಳೆ ದಾಖಲಾಗಿದೆ. ಹಾರೋಹಳ್ಳಿಯಲ್ಲಿ ಮಾತ್ರ 11.50 ಮಿಲಿ ಮೀಟರ್ ಮಳೆ ಸುರಿಯಿತು. ನಂತರ ತಗ್ಗಿದ ಮಳೆ ಎಲ್ಲಿಯೂ ಅಷ್ಟಾಗಿ ಸುರಿದಿಲ್ಲ. ಬದಲಾಗಿ ಮಬ್ಬು ವಾತಾವರಣ, ತೇವಭರಿತ ಗಾಳಿ ಬೀಸಿತು. ಮುಂದಿನ ಮೂರು ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಳೆ ಬಂದ ದಿನದಿಂದಲೂ (ಜೂನ್ 4) ಕರಾವಳಿ ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಮುಂದಿನ ಒಂದು ವಾರ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಅತ್ಯಧಿಕ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದ ಒಳನಾಡಿನ ಭಾಗದಲ್ಲೂ ಉತ್ತಮ ಮುಂಗಾರು ನಿರೀಕ್ಷೆ ಇದೆ.

E Khata: ಆಸ್ತಿ ದಾಖಲೆಗಳಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್: ಮನೆಬಾಗಿಲಿಗೆ ಇ-ಖಾತಾ, ಬಿ-ಖಾತಾ ಸೇವೆ
E Khata: ಆಸ್ತಿ ದಾಖಲೆಗಳಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್: ಮನೆಬಾಗಿಲಿಗೆ ಇ-ಖಾತಾ, ಬಿ-ಖಾತಾ ಸೇವೆ

ಕರಾವಳಿ ಸೇರಿ ವಿವಿಧೆಡೆ ಬಿರುಸಿನ ಮಳೆ

ಇಂದು ಶನಿವಾರ ಮಂಗಳೂರಿನ ಶಕ್ತಿನಗರದಲ್ಲಿ ಅತ್ಯಧಿಕ 60 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ಮಂಗಳೂರು ವಿಮಾನ ನಿಲ್ದಾಣ 37 ಮಿಲಿ ಮೀಟರ್, ಕಾರವಾರ 25.8 ಮಿಲಿ ಮೀಟರ್, ಗದಗ ಭಾಗದಲ್ಲಿ 32.8 ಮಿಲಿ ಮೀಟರ್, ಹಾವೇರಿ 2.0 ಮಿಲಿ ಮೀಟರ್, ಹೊನ್ನಾವರದಲ್ಲಿ 1.1, ಚಿತ್ರದುರ್ಗ 3.1 ಮಿಲಿ ಮೀಟರ್ ಹಾಗೂ ಬೆಂಗಳೂರು ನಗರದಲ್ಲಿ 3.0 ಮಿಲಿ ಮೀಟರ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+