Get Updates
Get notified of breaking news, exclusive insights, and must-see stories!

ಬೆಂಗಳೂರು ಜಲ ಮಂಡಳಿ ಬ್ಲೂ ಫೋರ್ಸ್ ಭರ್ಜರಿ ಕಾರ್ಯಾಚರಣೆ: ಈ ತಪ್ಪು ಮಾಡಿದರೆ ನೀರಿಲ್ಲ

ಬೆಂಗಳೂರು: ಬೆಂಗಳೂರಿನಲ್ಲಿ ಈಚೆಗೆ ಜಲಮಂಡಳಿಯು ಬ್ಲೂ ಫೋರ್ಸ್ (ನೀಲಿ ಪಡೆ)ಯನ್ನು ರಚನೆ ಮಾಡಿದ್ದು, ಅಕ್ರಮವಾಗಿ ನೀರು ಸಂಪರ್ಕ ಪಡೆದುಕೊಳ್ಳುತ್ತಿರುವವರ ಮೇಲೆ ಕಣ್ಣಿರಿಸಿದೆ. ಅಲ್ಲದೇ ಈಗಾಗಲೇ ಬೆಂಗಳೂರಿನ ವಿವಿಧ ಭಾಗದಲ್ಲಿ ಸಾವಿರಾರು ಮನೆಗಳ ಪರಿಶೀಲನೆ ಮಾಡಲಾಗಿದ್ದು, ಅಕ್ರಮವಾಗಿ ನೀರು ಸಂಪರ್ಕ ಪಡೆದುಕೊಳ್ಳುತ್ತಿರುವವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ.

ಬೆಂಗಳೂರಿನಲ್ಲಿ ಈಚೆಗೆ ಬ್ಲೂ ಫೋರ್ಸ್‌ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದರು. ಈ ತಂಡವು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ನೀರಿನ ಸಂಪರ್ಕ ತೆಗೆದುಕೊಂಡಿರುವವರಿಗೆ ಬಿಸಿ ಮುಟ್ಟಲು ಪ್ರಾರಂಭವಾಗಿದೆ. ಬ್ಲೂ ಫೋರ್ಸ್ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಒಂದೇ ತಿಂಗಳಲ್ಲಿ 4,000ಕ್ಕೂ ಹೆಚ್ಚು ಸ್ಥಳಗಳ ತಪಾಸಣೆ ಮಾಡಿದೆ. ಅಲ್ಲದೇ ಅಕ್ರಮ ಸಂಪರ್ಕಗಳ ವಿರುದ್ಧ ಸಮರ ಸಾರಿದೆ ಎಂದು ಜಲ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Water Board Blue Force Crackdown One Mistake No Water Supply

ಡಿಸೆಂಬರ್ 20ರ ಒಂದೇ ದಿನದಲ್ಲಿ 70 ಅಕ್ರಮ ಸಂಪರ್ಕ ಕಡಿತ ಮಾಡಲಾಗಿದ್ದು, ಇದರಲ್ಲಿ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಅಕ್ರಮ ಪತ್ತೆ ಮಾಡಲಾಗಿದೆ. ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆಹಚ್ಚಲು ಬೆಂಗಳೂರು ಜಲಮಂಡಳಿ ರಚಿಸಿರುವ ವಿಶೇಷ ಕಾರ್ಯಪಡೆ 'ಬ್ಲೂ ಫೋರ್ಸ್' (Blue Force), ಕಳೆದ ಒಂದು ತಿಂಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಗರದಾದ್ಯಂತ ಬರೋಬ್ಬರಿ 4,000ಕ್ಕೂ ಹೆಚ್ಚು ಕಟ್ಟಡಗಳು ಮತ್ತು ಸ್ಥಳಗಳನ್ನು ತಪಾಸಣೆ ನಡೆಸಿರುವ ಪಡೆ, ನೂರಾರು ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ಬಿಸಿ ಮುಟ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಒಂದೇ ದಿನ 70 ಸಂಪರ್ಕ ಕಡಿತ

ಇನ್ನು ಬೆಂಗಳೂರಿನಲ್ಲಿ ನೀರಿನ ಅಕ್ರಮ ಸಂಪರ್ಕ ಕಡಿತ ಮಾಡಿರುವ ಬಗ್ಗೆ ಜಲ ಮಂಡಳಿ ನೀಡಿರುವ ದತ್ತಾಂಶಗಳ ಪ್ರಕಾರ, ಡಿಸೆಂಬರ್ 20, 2025 ರಂದು ಒಂದೇ ದಿನ ಬ್ಲೂ ಫೋರ್ಸ್ ತಂಡಗಳು ನಗರದ ನಾಲ್ಕು ವಲಯಗಳಲ್ಲಿ 237 ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿ ನಡೆಸಿವೆ. ಈ ವೇಳೆ ಅಕ್ರಮವಾಗಿ ನೀರು ಬಳಸುತ್ತಿದ್ದ 70 ಸಂಪರ್ಕಗಳನ್ನು ಸ್ಥಳದಲ್ಲೇ ಕಡಿತಗೊಳಿಸಲಾಗಿದೆ.

ಬೆಂಗಳೂರಲ್ಲಿ ವಲಯವಾರ ನೀರಿನ ಸಂಪರ್ಕ ಕಡಿತ

ದಕ್ಷಿಣ ವಲಯ: ಅತಿ ಹೆಚ್ಚು ಕಾರ್ಯಾಚರಣೆ ನಡೆದಿದ್ದು, 61 ಕಟ್ಟಡಗಳ ತಪಾಸಣೆ ನಡೆಸಿ 33 ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

ಪೂರ್ವ ವಲಯ: 18 ಸಂಪರ್ಕ ಕಡಿತ.

ಪಶ್ಚಿಮ ವಲಯ: 15 ಸಂಪರ್ಕ ಕಡಿತ.

ಉತ್ತರ ವಲಯ: 4 ಸಂಪರ್ಕ ಕಡಿತ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, ನೀರು ಕಳ್ಳತನ ಮತ್ತು ಅನಧಿಕೃತ ಸಂಪರ್ಕಗಳಿಂದ ಮಂಡಳಿಗೆ ಆಗುತ್ತಿರುವ ಆದಾಯ ಸೋರಿಕೆ ತಡೆಗಟ್ಟಲು ಬ್ಲೂ ಫೋರ್ಸ್ ಹಗಲಿರುಳು ಶ್ರಮಿಸುತ್ತಿದೆ. 4,000 ತಪಾಸಣೆಗಳು ಕೇವಲ ಆರಂಭವಷ್ಟೇ. ಅಕ್ರಮ ಸಂಪರ್ಕ ಹೊಂದಿರುವವರು ಕೂಡಲೇ ಸಕ್ರಮಗೊಳಿಸಿಕೊಳ್ಳಬೇಕು, ಇಲ್ಲದಿದ್ದರೆ ದಂಡ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+