Karnataka Rails: ವಿಶೇಷ ರೈಲುಗಳ ಕಾರ್ಯಾಚರಣೆ, ನಿಲುಗಡೆ ಮತ್ತು ವೇಳಾಪಟ್ಟಿ...SWR
ಬೆಂಗಳೂರು, ನವೆಂಬರ್ 22: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ಆಚರಣೆಯ ಅಂಗವಾಗಿ ನೈಋತ್ಯ ರೈಲ್ವೆ (SWR) ವತಿಯಿಂದ ಹಲವು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಭಕ್ತರ ಹೆಚ್ಚಿದ ಸಂಚಾರ, ಪ್ರಯಾಣಿಕರ ಅನುಕೂಲ ಮತ್ತು ಪ್ರಮುಖ ನಗರಗಳಿಂದ ಪ್ರತ್ಯಕ್ಷ ಸಂಪರ್ಕ ಒದಗಿಸುವ ಉದ್ದೇಶದಿಂದ ವಿಜಯವಾಡ-ಯಲಹಂಕ-ವಿಜಯವಾಡ ಮತ್ತು ಚೆನ್ನೈ ಎಗ್ಮೋರ್-ಶ್ರೀ ಸತ್ಯ ಸಾಯಿ ಪ್ರಸಾಂತಿ ನಿಲಯಂ, ಸಿಕಂದರಾಬಾದ್-ಬೆಂಗಳೂರು ಕಂಟೋನ್ಮೆಂಟ್ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ.
ಸತ್ಯ ಸಾಯಿ ಬಾಬಾ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಕ್ತರ ಬೇಡಿಕೆಯನ್ನು ಗಮನಿಸಿ ವಿಜಯವಾಡ-ಯಲಹಂಕ-ವಿಜಯವಾಡ ನಡುವೆ ಕೂಡ ವಿಶೇಷ ಏಕಮಾರ್ಗ ರೈಲುಗಳ (07411/07412) ಸಂಚಾರ ಕಾರ್ಯಾಚರಣೆ ಮಾಡಲಿದೆ. ವಿಜಯವಾಡದಿಂದ ಯಲಹಂಕಕ್ಕೆ 22 ನವೆಂಬರ್ 2025 ರಂದು ರಾತ್ರಿ 7 ಗಂಟೆಗೆ ಹೊರಡುತ್ತದೆ. ಮರುದಿನ 23 ನವೆಂಬರ್ ಬೆಳಿಗ್ಗೆ 10 ಗಂಟೆಗೆ ತಲುಪಲಿದೆ. ಯಲಹಂಕದಿಂದ ವಿಜಯವಾಡಕ್ಕೆ ಮರಳಿ ವಿಶೇಷ ರೈಲು 24 ನವೆಂಬರ್ 2025 ರಂದು ಸಂಜೆ 4 ಗಂಟೆಗೆ ಹೊರಡುತ್ತದೆ. ಮಾರನೇ ದಿನ ನವೆಂಬರ್ 25ಕ್ಕೆ ಬೆಳಗ್ಗೆ 6.40ಕ್ಕೆ ವಿಜಯವಾಡ ತಲುಪಲಿದೆ.

ಗುಂಟೂರು, ನರಸರಾವ್ ಪೇಟೆ, ವಿನುಕೊಂಡ, ದೊನಕೊಂಡ, ಮಾರ್ಕಪುರ ರಸ್ತೆ, ಕುಂಬಂ, ಗಿಡ್ಡಲೂರು, ದಿಗುವಮೆಟ್ಟ, ನಂದ್ಯಾಳ, ಧೋಣೆ, ಗೂಟಿ, ಅನಂತಪುರ, ಧರ್ಮಾವರಂ ಮತ್ತು ಶ್ರೀ ಸತ್ಯ ಪ್ರಶಾಂತಿ ನಿಯಲಂ ನಿಲ್ದಾಣಗಳಲ್ಲಿ ಈ ರೈಲುಗಳು ನಿಲುಗಡೆ ಆಗಲಿದೆ.
ಇನ್ನೂ ಚೆನ್ನೈ ಎಗ್ಮೋರ್-ಶ್ರೀ ಸತ್ಯ ಸಾಯಿ ಪ್ರಸಾಂತಿ ನಿಲಯಂ ಮಾರ್ಗದಲ್ಲಿ ವಿಶೇಷ ರೈಲುಗಳು (06065/06066) ಒಂದು ಪ್ರಯಾಣದ ವಿಶೇಷ ರೈಲು ನಿರ್ಧರಿಸಲಾಗಿದೆ. ಚೆನ್ನೈ ಎಗ್ಮೋರ್‌ನಿಂದ ನವೆಂಬರ್ 23 ರಾತ್ರಿ 11.55ಕ್ಕೆ ಹೊರಡುವ ರೈಲು 24 ನವೆಂಬರ್ ಬೆಳಗ್ಗೆ 9.10ಕ್ಕೆ ಪ್ರಸಾಂತಿ ನಿಲಯಂ ತಲುಪುತ್ತದೆ. ಮರಳಿ ಅದೇ ಮಾರ್ಗದಲ್ಲಿ ವಿಶೇಷ ರೈಲು ನವೆಂಬರ್ 24 ರಂದು 9.30ಕ್ಕೆ ಹೊರಟು ಮುಂದಿನ ದಿನ ಬೆಳಗ್ಗೆ 11.30ಕ್ಕೆ ಚೆನ್ನೈ ತಲುಪಲಿದೆ.
ಜನರಲ್, ಎಸಿ ಕೋರ್ಟ್, ನಾನ್ ಎಸಿ ಸ್ಲೀಪರ್ ಕೋರ್ಚ್ ರೈಲು ಸೇರಿ 21 ಬೋಗಿಗಳನ್ನು ಹೊಂದಿದೆ. ಮಾರ್ಗ ಮಧ್ಯ ಪೆರಂಬೂರು, ತಿರುವಲ್ಲೂರು, ಅರಕ್ಕೋಣಂ, ಕಟ್ಟಪಾಡಿ, ಜೊಲಾರ್ ಪೇಟೆ, ವೈಟ್‌ಫೀಲ್ಡ್ ಹಾಗೂ ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.
ಸಿಕ್ರಂದರಾಬಾದ್-ಬೆಂಗಳೂರು ಕ್ಯಾಂಟ್ ನಡುವೆ ಒಂದು ಪ್ರಯಾಣದ ವಿಶೇಷ ರೈಲು (08553/ 08554) 22 ನವೆಂಬರ್ 2025 ರಂದು ಸಂಜೆ 6.05ಕ್ಕೆ ಹೊರಟು 23 ನವೆಂಬರ್ ಬೆಳಗ್ಗೆ 10.45ಕ್ಕೆ ಬೆಂಗಳೂರನ್ನು ತಲುಪುತ್ತದೆ. ಅದರ ಪ್ರತಿರೂಪ ರೈಲು 24 ನವೆಂಬರ್ 2025 ರಂದು ಸಂಜೆ 5.00ಕ್ಕೆ ಬೆಂಗಳೂರು ಕ್ಯಾಂಟ್‌ನಿಂದ ಹೊರಟು 25 ನವೆಂಬರ್ ಬೆಳಗ್ಗೆ 7.45ಕ್ಕೆ ಸೆಕೆಂದರಾಬಾದ್ ತಲುಪುತ್ತದೆ.
ಈ ಎರಡು ಬದಿ ಸಂಚಾರ ಮಾರ್ಗದಲ್ಲಿ ಲಿಂಗಂಪಳ್ಳಿ, ವಿಕಾರಾಬಾದ್, ತಾಂಡೂರ್, ನವಂದಗಿ, ಸೇಲಂ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ, ಅದೋನಿ, ಗುಂಟಕಲ್, ಅನಂತಪುರ, ಧರ್ಮಾವರಂ ಮತ್ತು ಶ್ರೀ ಸತ್ಯ ಸಾಯಿ ಪ್ರಸಾಂತಿ ನಿಲಯಂ ಸೇರಿ ಹಲವು ನಿಲ್ದಾಣಗಳಲ್ಲಿ ತಂಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವಿಶೇಷ ರೈಲುಗಳಲ್ಲಿ ಒಟ್ಟು 24 ಬೋಗಿಗಳನ್ನು ಸೇರಿಸಲಾಗಿದೆ.
ಪ್ರಯಣಿಕರು ಈ ವಿಶೇಷ ರೈಲುಗಳ ಬೋಗಿ ವಿವರಗಳು ಮತ್ತು ಇತರ ಮಾಹಿತಿ ಪಡೆಯಲು ಅಧಿಕೃತ http://www.enquiry.indianrail.gov.in ವೆಬ್‌ಸೈಟ್ಗೆ ಭೇಟಿ ನೀಡಿ. NTES ಅಪ್ ಅಥವಾ 139 ಸೇವೆಯನ್ನು ಬಳಕೆ ಮಾಡಬಹುದೆಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.












Click it and Unblock the Notifications