ATM Van Robbery: 03 ಪ್ರಮುಖ ಆರೋಪಿಗಳ ಪೊಲೀಸ್ ಬಂಧನ: ₹5.76 ಕೋಟಿ ವಶಕ್ಕೆ, ಎದುರಾದ ಸವಾಲುಗಳೇನು?
ಬೆಂಗಳೂರು, ನವೆಂಬರ್ 22: ಬೆಂಗಳೂರಿನಲ್ಲಿ ಎಟಿಎಂಗೆ ಹಣ ಹಾಕಲು ಹೊರಟ್ಟಿದ್ದ ಖಾಸಗಿ ಏಜೆನ್ಸಿಯಾದ CMS ವಾಹನ ಅಡ್ಡಗಟ್ಟಿ ನಡೆದಿದ್ದ ಭರ್ಜರಿ 7. 11 ಕೋಟಿ ರೂಪಾಯಿ ದರೋಡೆ ಪ್ರಕರಣದ ಆರೋಪಿಗಳ ಬಂಧನವಾಗಿದೆ. ಹಾಡಹಗಲೇ ನಡೆದಿದ್ದ ಈ ಸಿನಿಮಿಯ ರೀತಿಯ ದರೋಡೆ ಕೇಸ್ ಅನ್ನು ಮೂರು ದಿನಗಳಲ್ಲಿ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಗದು ವ್ಯಾನ್ ದರೋಡೆ ಪ್ರಕರಣ ಪತ್ತೆ ಮಾಡಿದ್ದಾರೆ. ಬಂಧಿತರಿಂದ ಪೊಲೀಸರು ಒಟ್ಟು 60 ಗಂಟೆಗಳೊಳಗೆ ಕಳ್ಳತನವಾಗಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್ ಒಟ್ಟು ಹಣದಲ್ಲಿ ₹5.76 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ. ಹಲವು ಸವಾಲುಗಳ ಮಧ್ಯೆ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಒಂದು ಹಂತಕ್ಕೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರನ್ನೆ ಬೆಚ್ಚಿಬೀಳಿಸಿದ್ದ ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ನಡೆಸುತ್ತಿದ್ದಾರೆ. ಬಂಧಿತರ ವಿಚಾರಣೆ ನಡೆಸಿ ತಮ್ಮೊಂದಿಗೆ ಯಾರೆಲ್ಲ ಕೈ ಜೋಡಿಸಿದ್ದಾರೆ. ನಿಮ್ಮ ಉದ್ದೇಶ ಏನಾಗಿತ್ತು?, ಈ ಹಿಂದೆ ಯಾವೆಲ್ಲ ಕಡೆ ದರೋಡೆ ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದೇ ನವೆಂಬರ್ 19/11/2025 ರಂದು ನಡೆದ ಪ್ರಕರಣ ಇದಾಗಿದೆ. ಎಟಿಎಂ ನಗದು ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲೇ ನಿಖರವಾಗಿ ಯೋಜಿಸಲಾದ ಮತ್ತು ಮಾಹಿತಿ ಆಧಾರಿತ ದರೋಡೆ ಮಾಡಲಾಗಿದೆ. ಪರಿಚಯಸ್ಥರೇ ಯಾರೋ ಸಹಾಯ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು. ಪ್ರಕರಣ ತನಿಖೆ ವೇಳೆ ಪೊಲೀಸರು ಹಲವು ಸವಾಲುಗಳನ್ನು ಎದರಿಸಿದ್ದಾರೆ. ಅವು ಯಾವುವು?..
ದರೋಡೆ ಕೇಸ್: ತನಿಖೆಗೆ ಎದುರಾಗಿದ್ದ ಸವಾಲುಗಳು
* ಈ ದರೋಡೆ ನಿಖರವಾದ ಪೂರ್ವ ಯೋಜಿತವಾಗಿದ್ದು, ಪ್ರಾಥಮಿಕ ಸುಳಿವುಗಳು ಕಡಿಮೆ ಇದ್ದವು.
* ಅಪರಾಧಿಗಳು ಅನೇಕ CCTV ಕಾಣದ ಪ್ರದೇಶಗಳಲ್ಲಿ ನಿಖರ ನಿಲುಗಡೆಗಳನ್ನು ಮಾಡಿದ್ದರು.
* ದರೋಡೆ ವೇಳೆ ಖದೀಮರು ಸಮಯದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಲಾಗಲಿಲ್ಲ.
* ತನಿಖೆ ದಿಕ್ಕು ತಪ್ಪಿಸಿಕೊಳ್ಳಲು ಹಲವು ಭಾಷೆಗಳಲ್ಲಿ ಸಂವಹನ ನಡೆಸಿದ್ದ ಗ್ಯಾಂಗ್.
* ಪೊಲೀಸರಿಂದ ಕಣ್ತಪ್ಪಿಸಿಕೊಳ್ಳಲು ಅನೇಕ ವಾಹನಗಳನ್ನು ಬಳಸಿದ್ದರು. ಅವುಗಳ ನಂಬರ್ ಪ್ಲೇಟ್‌ಗಳನ್ನು ಪದೇ ಪದೇ ಬದಲಾಯಿಸಿದ್ದರು.
* ದರೋಡೆ ಮಾಡಿದ ನೋಟುಗಳು ಸರಣಿ ಸಂಖ್ಯೆಗಳ ದಾಖಲಾತಿ ಇರದ ಕಾರಣ ಗುರುತಿಸುವುದು ಕಷ್ಟವಾಗಿತ್ತು.
* ಅಧಿಕೃತವಲ್ಲದ ಮಾಧ್ಯಮ ವರದಿಗಳು ಆರಂಭಿಕ ತನಿಖೆಯ ಸಂವೇದನಾಶೀಲ ಹಂತಗಳಿಗೆ ಅಡಚಣೆ ತಂದವು.
* ಈ ಎಲ್ಲಾ ಸವಾಲುಗಳ ನಡುವೆಯೂ ತಾಂತ್ರಿಕ ವಿಶ್ಲೇಷಣೆ ಮತ್ತು ತಂಡದ ಸಂಯೋಜಿತ ಕಾರ್ಯದಿಂದ ಪ್ರಕರಣವನ್ನು ತ್ವರಿತವಾಗಿ ಪತ್ತೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ದರೋಡೆ ಪ್ರಕರಣದ ಹಿನ್ನೆಲೆ
ನವೆಂಬ್ 19ರಂದು ಮಧ್ಯಾಹ್ನ ₹ 7.11 ಕೋಟಿ ಹಣ ಹೊಯ್ಯುತ್ತಿದ್ದ ವ್ಯಾನ್ ಅನ್ನು ಡಿ.ಜೆ ಹಳ್ಳಿಯ ಬಳಿ, ಅಪರಿಚಿತರು RBI ನಿಯಂತ್ರಣಾಧಿಕಾರಿಗಳ ಹೆಸರಿನಲ್ಲಿ ನಿಲ್ಲಿಸಿದ್ದರು. ಹಣ ಹೊಯ್ಯುತ್ತಿದ್ದ ವ್ಯಾನ್‌ನ್ನು ಅಪಹರಿಸಿರುವ ಬಗ್ಗೆ CMS ಸಂಘಟನೆಯಿಂದ ವರದಿ ದೊರಕಿರುತ್ತದೆ. ನಂತರದ ತನಿಖೆಯಲ್ಲಿ, ಈ ಘಟನೆ 12:48 ಗಂಟೆಗಳ ಸಮಯದಲ್ಲಿ ಅಶೋಕ ಪಿಲ್ಲರ್-ಜಯನಗರ-ಡೇರಿ ಸರ್ಕಲ್ ಬಳಿ ನಡೆದಿರುವುದು ಖಚಿತವಾಗುತ್ತದೆ.
ಅಪರಾಧಿಗಳು ವ್ಯಾನ್ ಅನ್ನು ತಡೆದು ಶಸ್ತ್ರ ತೋರಿಸಿ, ಬೆದರಿಸಿ, ನಗದು ಪೆಟ್ಟಿಗೆಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಮಧ್ಯಾಹ್ನ 13:16 ಗಂಟೆಗೆ ವಾಹನವನ್ನು ಬಿಟ್ಟು ಪರಾರಿಯಾಗಿರುತ್ತಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಇದೀಗ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
-
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications