ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಸಿಗ್ನಲ್‌ನಲ್ಲಿ ನಿಂತು ಹಾರ್ನ್ ಮಾಡಿದ್ರೆ ವಾಹನ ಮುಂದೆ ಹೋಗಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 4: ನಗರದಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ಮುಂಬೈ ಮಾದರಿಯ ಸಿಗ್ನಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಟ್ರಾಫಿಕ್ ಪೊಲೀಸ್ ಮುಂದಾಗಿದ್ದಾರೆ.

ಇನ್ಮುಂದೆ ಸಿಗ್ನಲ್ ಬಿಟ್ಟ ತಕ್ಷಣ ವೇಗವಾಗಿ ಹೋಗಬೇಕು ಎಂದು ಹೆಚ್ಚು ಹಾರ್ನ್ ಮಾಡಿದರೆ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಇನ್ಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದರೂ ಕ್ರಮಇನ್ಮುಂದೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದರೂ ಕ್ರಮ

ವಾಹನ ಸವಾರರೇ ಸಿಗ್ನಲ್‌ಗಳಲ್ಲಿ ನಿಂತು ಅನಗತ್ಯವಾಗಿ ಹಾರ್ನ್ ಮಾಡಿ ಶಬ್ದ ಮಾಲಿನ್ಯ ಮಾಡಿದರೆ, ಹೆಚ್ಚು ನಿಮಿಷ ಸಿಗ್ನಲ್‌ನಲ್ಲಿಯೇ ಇರಬೇಕಾದೀತು ಹುಷಾರ್.

 ವಾಹನ ಸವಾರರು ಕಾಯುವ ಸಮಯ ಹೆಚ್ಚಳ

ವಾಹನ ಸವಾರರು ಕಾಯುವ ಸಮಯ ಹೆಚ್ಚಳ

ಹೌದು ಇಂತಹದೊಂದು ಶಬ್ದ ಮಾಲಿನ್ಯ ನಿಯಂತ್ರಿಸಲು ಸೆಕೆಂಡುಗಳ ಸಂಖ್ಯೆ ಹೆಚ್ಚಿಸಿ, ಸವಾರರ ಕಾಯುವ ಸಮಯವನ್ನು ಹೆಚ್ಚಿಸುವ ಮುಂಬೈ ಸಂಚಾರ ಪೊಲೀಸರ ಪ್ರಯೋಗವನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.

 ಮೋರ್ ಹಾಂಕ್ ಮೋರ್ ವೇಯ್ಟ್‌

ಮೋರ್ ಹಾಂಕ್ ಮೋರ್ ವೇಯ್ಟ್‌

ಮುಂಬೈ ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳನ್ನು ಪೊಲೀಸರು ಗುರುತಿಸಿ ಡೆಸಿಬಲ್‌ ಮೀಟರ್‌ಗಳನ್ನು ಅಳವಡಿಸಿದ್ದಾರೆ. ರೆಡ್ ಸಿಗ್ನಲ್ ಬಿದ್ದವೇಳೆ ವಾಹನ ಸವಾರರು ಗ್ರೀನ್ ಸಿಗ್ನಲ್ ಬರುವ ತನಕ ಯಾವುದೇ ಹಾರ್ನ್ ಮಾಡದೆ ಸುಮ್ಮನೆ ಕಾಯಬೇಕು. ಅದನ್ನು ಬಿಟ್ಟು ಪದೇ ಪದೇ ಹಾರ್ನ್ ಮಾಡುತ್ತಿದ್ದರೆ , ಶಬ್ದದ ಪ್ರಮಾಣ 85 ಡೆಸಿಬಲ್‌ಗಿಂತ ಜಾಸ್ತಿ ಆಗುತ್ತಿದ್ದಂತೆ ಸಿಗ್ನಲ್ ಮತ್ತೆ ರಿ ಸೆಟ್ ಆಗುತ್ತದೆ. ಡಿಸಿಬಲ್ ಮೇಲೆ ಮೋರ್ ಹಾಂಕ್ ಮೋರ್ ವೇಯ್ಟ್ ಎಂದು ಸೂಚನೆಯನ್ನು ಹಾಕಿದ್ದಾರೆ.

 ವಿಡಿಯೋ ವೈರಲ್

ವಿಡಿಯೋ ವೈರಲ್

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಾರ್ನ್ ಕಿರಿ ಕಿರಿ ತಪ್ಪಿಸಲು ಮುಂಬೈ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಿಗ್ನಲ್‌ಗಳಲ್ಲಿ ಡೆಸಿಬಲ್ ಯಂತ್ರಗಳನ್ನು ಅಳವಡಿಸಿದ್ದು, ಹಸಿರು ನಿಶಾನೆ ಬರುವ ತನಕ ಪ್ರತಿಯೊಬ್ಬರು ಕಾಯಬೇಕು. ಅದನ್ನು ಬಿಟ್ಟು ಸುಖಾಸುಮ್ಮನೆ ಹಾರ್ನ್ ಮಾಡುತ್ತಿದ್ದರೆ ಶಬ್ದದ ಪ್ರಮಾಣ 90 ಡೆಸಿಬಲ್‌ದಾಟುತ್ತಿದ್ದಂತೆ ಸಿಗ್ನಲ್ ತನಗೆ ತಾನೇ ರೀಸೆಟ್ ಆಗುತ್ತದೆ.

 ಹೊಸ ಸಿಗ್ನಲ್ ವ್ಯವಸ್ಥೆ ಬಗ್ಗೆ ಮಾಹಿತಿ

ಹೊಸ ಸಿಗ್ನಲ್ ವ್ಯವಸ್ಥೆ ಬಗ್ಗೆ ಮಾಹಿತಿ

ಸಿಗ್ನಲ್‌ಗಳಲ್ಲಿ ದೀಪದ ಕೆಳಗೆ ಶಬ್ದ ಪ್ರಮಾಣ ಅಳೆಯುವ ಯಂತ್ರ ಅಳವಡಿಕೆ, ರೆಡ್ ಸಿಗ್ನಲ್ ಇದ್ದಾಗ ಸಿಗ್ನಲ್ ಬೀಳುವ ತನಕ ಸುಮ್ಮನೆ ಕಾಯಬೇಕು, ಅದನ್ನು ಬಿಟ್ಟು ಪದೇ ಪದೇ ಹಾರ್ನ್ ಮಾಡಿದರೆ ಸಿಗ್ನಲ್ ರೀಸೆಟ್ ಮಾಡಲಾಗುತ್ತದೆ.

English summary
Bengaluru traffic police are always looking for novel measures to deal with the problem of traffic on Bengaluru’s roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X