Vande Bharat Express: ಬೆಂಗಳೂರು-ಮುಂಬೈ ವೇಗದ ರೈಲು ಸಂಪರ್ಕದ ಅಪ್ಡೇಟ್ ಮಾಹಿತಿ

ಬೆಂಗಳೂರು, ಡಿಸೆಂಬರ್ 05: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರಾಜಧಾನಿ ಬೆಂಗಳೂರಿನಿಂದ ವಾಣಿಜ್ಯ ನಗರ ಮುಂಬೈಗೆ ಒಂದೇ ಒಂದು ರೈಲು ಇದೆ. ಈ ಸಂಬಂಧ ವೇಗದ ರೈಲು ಸಂಪರ್ಕ ಕಲ್ಪಿಸಬೇಕೆಂಬುದು ಬಹಳ ದಿನಗಳ ಆಸೆಯಾಗಿದೆ. ಅದೀಗ ಈಡೇರುವ ಕಾಲ ಹತ್ತಿರ ಬಂದಿದೆ. ಮುಂಬೈ-ಬೆಂಗಳೂರು ವಂದೇ ಬಾರತ್ ರೈಲು ಸಂಪರ್ಕ ಸೇವೆಯ ಮಹತ್ವದ ಅಪ್ಡೇಟ್ ಸಿಕ್ಕಿದೆ.

ಬಹುಬೇಡಿಕೆ ಬೆಂಗಳೂರು- ಮುಂಬೈ ನಡುವೆ ವೇಗದ ರೈಲು ಅಳವಡಿಕೆಯ ಉದ್ದೇಶಿತ ಯೋಜನೆಗೆ ಕೊಂಚ ಪ್ರಗತಿ ಕಂಡುಬಂದಿದೆ. ಬೆಂಗಳೂರು ಎಸ್‌ಎಂವಿಟಿ ಹಾಗೂ ಮುಂಬೈ ಸಿಎಸ್‌ಎಂಟಿ ಮಹಾರಾಜ ಟರ್ಮಿನಲ್ ವರೆಗೆ ಒಂದು ರೈಲು ಮಾತ್ರ ಸಂಚರಿಸುತ್ತದೆ. ಇದೇ ಮಾರ್ಗದಲ್ಲಿ ಹೊಸ ವೇಗದ ರೈಲು ಬಿಡುವಂತೆ ಸಂಸದರ ಒತ್ತಾಯಿಸಿದ್ದಾರೆ ಎಂದು 'ಡಿಎಚ್' ವರದಿ ಮಾಡಿದೆ.

Bengaluru to Mumbai Vande Bharat Express Train Connection Updates

ಡಿಸೆಂಬರ್ 2 ರಂದು ಬೆಂಗಳೂರಿನ ನೈಋತ್ಯ ರೈಲ್ವೆಯ (SWR) ಸ್ಥಾಯಿ ಸಮಿತಿಯ ಅಧ್ಯಯನ ತಂಡವನ್ನು ಇತ್ತೀಚೆಗೆ ಬೆಂಗಳೂರು ಕೇಂದ್ರದ ಸಂಸದ ಪಿಸಿ ಮೋಹನ್ ಅವರು ಭೇಟಿ ಮಾಡಿದರು. ಅವರು ಬೆಂಗಳೂರು SMVTಯಿಂದ ಮುಂಬೈ ಟರ್ಮಿನಲ್ ನಿಲ್ದಾಣವರೆಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಒದಗಿಸುವಂತೆ ಕೋರಿದರು.

ಲಿಖಿತ ರೂಪದಲ್ಲಿ ಪ್ರಸ್ತಾವ ರೈಲ್ವೆ ಮಂಡಳಿಗೆ ಸಲ್ಲಿಕೆ

ಇದಕ್ಕೆ ಪ್ರಕ್ರಿಯಿಸಿದ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ ಅವರು, ಸಂಸದರ ಪ್ರಸ್ತಾಪಿಸಿದ ವಿಚಾರವನ್ನು ಲಿಖಿತ ಪ್ರತಿಕ್ರಿಯೆಯಲ್ಲಿ ಕೇಂದ್ರ ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.

ಹಾಲಿ ಬೆಂಗಳೂರು-ಮುಂಬೈ ಮಾರ್ಗದಲ್ಲಿ ಒಂದು ರೈಲು ಮಾತ್ರವೇ ಸೇವೆ ನೀಡುತ್ತಿದೆ. ಈ ರೈಲು ಮುಂಬೈ ತಲುಪಲು ಭರ್ತಿ 24-30 ಗಂಟೆ ತೆಗೆದುಕೊಳ್ಳುತ್ತದೆ. ಅಷ್ಟು ಸಮಯಕ್ಕಿಂತ ಕಡಿಮೆ ಸಮಯ ಅಂದರೆ ಕೇವಲ 16-18 ಗಂಟೆಗಳಲ್ಲಿ ಮುಂಬೈನಿಂದ ಬಸ್ ಬೆಂಗಳೂರಿಗೆ ಬರುತ್ತವೆ. ಆದ್ದರಿಂದ ಈ ಮಾರ್ಗದಲ್ಲಿ ವೇಗದ ರೈಲು ಸೇವೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು KSR ರೈಲು ನಿಲ್ದಾಣದಿಂದ ಮುಂಬೈನ CSMT ಮುಂಬೈ ಸಂಪರ್ಕಿಸುವ ಉದ್ಯಾನ ಎಕ್ಸ್‌ಪ್ರೆಸ್ ರೈಲು ಕಲಬುರಗಿ ಮೂಲಕ 1,136 ಕಿಮೀ ದೂರ ಕ್ರಮಿಸಲಿದೆ. ಯಶವಂತಪುರ- ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ತಿರುನಲ್ವೇಲಿ ಮತ್ತು ಪುದುಚೇರಿಗೆ ವಿಸ್ತರಣೆ ಮಾಡಲಾಗಿದ್ದು, ಇದು ಇಷ್ಟು ಕ್ರಮಿಸಲು ಒಂದು ದಿನ ಸಮಯ ತೆಗೆದುಕೊಳ್ಳುತ್ತದೆ.

ಉಪನಗರ ರೈಲು ಯೋಜನೆ

ಸಂಸದರ ಜೊತೆಗಿನ ಮಾತುಕತೆ ನಂತರ ಪ್ರಧಾನ ವ್ಯವಸ್ಥಾಪಕರು, ಬೆಂಗಳೂರು ಕಂಟೋನ್ಮೆಂಟ್ ನಿಂದ ವೈಟ್‌ಫೀಲ್ಡ್ ವರೆಗಿನ 16 ಕಿಮೀ ಮಾರ್ಗವು 2025ರ ಜೂನ್ ವೇಳೆಗೆ ವಿಸ್ತರಣೆಗೊಳ್ಳಲಿದೆ. ಬೈಯಪ್ಪನಹಳ್ಳಿ-ಹೊಸೂರು 48 ಕಿಮೀ ರೈಲು ಮಾರ್ಗ ಮತ್ತು ಯಶವಂತಪುರ-ಬೈಯಪ್ಪನಹಳ್ಳಿ-ಚನ್ನಸಂದ್ರ 21.7 ಕಿಮೀ ಮಾರ್ಗವು 2025ರ ಆಗಸ್ಟ್ ಹೊತ್ತಿಗೆ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದರು. ಅಲ್ಲದೇ ರೈಲ್ವೆ ವ್ಯಾಪ್ತಿಯ ಯೋಜನೆಗಳ ವಿವರ ಕೊಟ್ಟರು.

ಹಾಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮಾರ್ಗದಲ್ಲಿ ಪ್ಲಾಟ್‌ಫಾರ್ಮ್ ಕಾರಣದಿಂದ ಮೆಮು ರೈಲುಗಳನ್ನು ಕೆಂಗೇರಿ ಮತ್ತು ವೈಟ್‌ಫೀಲ್ಡ್ ಮಧ್ಯೆ ಪರಿಚಯಿಸುವುದು ಅಸಾಧ್ಯ. KSR ರೈಲು ನಿಲ್ದಾಣದಲ್ಲಿ ಮೂರು ಪ್ಲಾಟ್‌ಫಾರ್ಮ್‌ ಕೆಂಗೇರಿಯಿಂದ ಬರುವ ರೈಲುಗಳಿಗೆ ಅವಕಾಶ ಇದೆ ಎಂದು ಉದ್ದೇಶ ರೈಲ್ವೆ ಪ್ರಸ್ತಾವನೆಗೆ ರೈಲ್ವೆ ಅಧಿಕಾರಿಗಳು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+