ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು (ಜ.28) ಸಹ ವಿದ್ಯುತ್ ವ್ಯತ್ಯಯ

ಬೆಂಗಳೂರು, ಜನವರಿ 28: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ, ವಿಪರೀತ ಚಳಿ ಹಾಗೂ ಶೀತಗಾಳಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗ ಮತ್ತೆ ಜನವರಿ 28ರ ಶುಕ್ರವಾರದಂದು ಮತ್ತೆ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಮುಂದಾಗಿದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಇಂದು ಬನಶಂಕರಿ, ಮಾರತ್​ಹಳ್ಳಿ, ಇಸ್ರೋ ಲೇಔಟ್, ದೊಮ್ಮಲೂರು, ಹೆಗಡೆ ನಗರ, ಶ್ರೀನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ.

ಬೆಂಗಳೂರಿನ ದಕ್ಷಿಣ ವಲಯ
ಇಂದು (ಶುಕ್ರವಾರ) ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಲಕ್ಷ್ಮಿ ರಸ್ತೆ, ಬಿಕಾಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕೆಆರ್ ರಸ್ತೆ ಬನಶಂಕರಿ 2ನೇ ಹಂತ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಹಂತ, ಉತ್ತರಹಳ್ಳಿ ವೃತ್ತ, ಮಾರತಹಳ್ಳಿ, ಸಂಜಯ್ ನಗರ, ಮಂಜುನಾಥ ನಗರ, ಶ್ರೀನಗರ, ಅಶ್ವತ್ಥ ನಗರ, ಗೊಟ್ಟಿಗೆರೆ ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಇರಲಿದೆ.

bengaluru to face power cuts on january 28; full details

ಬೆಂಗಳೂರಿನ ಪೂರ್ವ ವಲಯ
ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಟಿ.ಸಿ. ಪಾಳ್ಯ ರಸ್ತೆ, ಕೆ.ಜಿ ಪುರ ಮುಖ್ಯ ರಸ್ತೆ, ಬಾಬುಸಾಪಾಳ್ಯ ಪ್ರದೇಶ, ದೊಮ್ಮಲೂರು 2ನೇ ಹಂತ, ಎಚ್‌ಎಎಲ್ 2ನೇ ಹಂತ ಮತ್ತು ನಾರ್ತ್ ಅವೆನ್ಯೂ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಂಗಳೂರಿನ ಉತ್ತರ ವಲಯ
ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಆಂಜನೇಯ ಬ್ಲಾಕ್, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಚಾಮುಂಡೇಶ್ವರಿ ಲೇಔಟ್, ಮಾರುತಿ ನಗರ, ತಿರುಮಲ ನಗರ, ಆದಿತ್ಯನಗರ, ಹುರಳಿ ಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ದಾಸೇನಹಳ್ಳಿ, ಹೆಗಡೆ ನಗರ, ಕೋಗಿಲು ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ದಾಸರಹಳ್ಳಿ ಮುಖ್ಯರಸ್ತೆ, ಭುವನೇಶ್ವರಿ ನಾಗರ ಮತ್ತು ಎಂಎಲ್ ಪುರಂ 2ನೇ ಹಂತದಲ್ಲಿ ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯ

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಉತ್ತರಹಳ್ಳಿ ರಸ್ತೆ, ಕೋನಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ಹರ್ಷಾ ಲೇಔಟ್, ವಿದ್ಯಾಪೀಠ ರಸ್ತೆ, ಹೊಸಹಳ್ಳಿ ರಸ್ತೆ, ಅಂದ್ರಹಳ್ಳಿ ಮುಖ್ಯರಸ್ತೆ, ಉಳ್ಳಾಲ ನಗರ, ಮಾರುತಿ ನಗರ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ ಮತ್ತು ದೊಡ್ಡ ಬಸ್ತಿ ನಗರ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಶ್ರೀರಾಮಪುರಂ, ಪ್ಲಾಟ್‌ಫಾರ್ಮ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಎಚ್‌ಎಂಟಿ ಇಂಡಸ್ಟ್ರಿ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್ ಲೇಔಟ್, ಕೊಡಿಗೇಹಳ್ಳಿ, ಕೆಂಪನಹಳ್ಳಿ, ಅಮೃತನಗರ, ಹೆಗಡೆ ನಗರ, ಕೋಗಿಲು, ದ್ವಾರಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ರಸ್ತೆ, ಭುವನಘಟ್ಟ ರಸ್ತೆ, ವಿಧ್ಯಾಪೀಠ, ಶಂಕರನಾಗ್ ವೃತ್ತ, ಹನುಮಂತನಗರ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್​ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಜನರಿಗೆ ಬೆಸ್ಕಾಂ ಸಹಕರಿಸುವಂತೆ ಮನವಿ ಮಾಡಿದೆ.

ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Recommended Video

      ಮೊಹಮ್ಮದ್ ಶಮಿಗೆ ಟೆಸ್ಟ್ ತಂಡದ ನಾಯಕನಾಗುವ ಆಸೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+