• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಿಂದ ಆಫ್ರಿಕಾಕ್ಕೆ ನೇರ ವಿಮಾನ ಸೇವೆ, ಎಂದಿನಿಂದ?

|

ಬೆಂಗಳೂರು, ಜುಲೈ 26: ಇನ್ನುಮುಂದೆ ಆಫ್ರಿಕಾಕ್ಕೆ ತೆರಳಬೇಕಿದ್ದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ನೇರವಾಗಿ ತೆರಳಬಹುದಾಗಿದೆ.

ಆಫ್ರಿಕಾದ ಇಥಿಯೋಪಿಯಾಗೆ ಮೊದಲ ನೇರ ಪ್ರಯಾಣಿಕರ ವಿಮಾನ ಸೇವೆ ಆರಂಭವಾಗುತ್ತಿದೆ. ಇದೇ ಅಕ್ಟೋಬರ್ 27ರಿಂದ ವಾರಕ್ಕೆ ನಾಲ್ಕು ಬಾರಿ ಇಥಿಯೋಪಿಯನ್ ಏರ್‌ಲೈನ್ಸ್‌ ಇಥಿಯೋಪಿಯಾದ ರಾಜಧಾನಿ ಆಡಿಸ್‌ ಆಬಾಗೆ ವಿಮಾನ ಹಾರಾಟ ಪ್ರಾರಂಭ ಮಾಡಲಿದೆ.

ಸ್ಪೈಸ್‌ಜೆಟ್ ವಿಮಾನದೊಳಗೆ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ ಸ್ಪೈಸ್‌ಜೆಟ್ ವಿಮಾನದೊಳಗೆ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

ಆಫ್ರಿಕಾ ಖಂಡದ ಯಾವುದೇ ರಾಷ್ಟ್ರಕ್ಕೆ ಬೆಂಗಳೂರಿನಿಂದ ನೇರ ವಿಮಾನ ಸಂಪರ್ಕ ಇರಲಿಲ್ಲ. ವ್ಯಾಪಾರ, ವ್ಯಾಸಂಗ, ಪ್ರವಾಸ, ವೈದ್ಯಕೀಯ ಪ್ರವಾಸೋದ್ಯಮ ಉದ್ದೇಶಗಳಿಗೆ ಬೆಂಗಳೂರಿಗೆ ಬರುವ ಹಾಗೂ ಬೆಂಗಳೂರಿನಿಂದ ಇಥಿಯೋಪಿಯಾ ಸೇರಿದಂತೆ ಇತರೆ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗೆ ವಿಮಾನ ಸೇವೆ ಅನುಕೂಲವಾಗಲಿದೆ.

ಅರೂವರೆ ತಾಸುಗಳ ಪ್ರಯಾಣಕ್ಕೆ ಬೋಯಿಂಗ್ 747-800 ವಿಮಾನವನ್ನು ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ನೆದರ್‌ಲ್ಯಾಂಡ್ ರಾಜಧಾನಿ ಆಮ್‌ಸ್ಟರ್‌ಡ್ಯಾಂಗೆ ನೇರ ವಿಮಾನ ಸಂಪರ್ಕ ಕಲ್ಪಿಸಿದ್ದ ಜೆಟ್‌ ಏರ್‌ವೇಸ್‌ ಬಾಗಿಲು ಹಾಕಿದೆ.

ಸ್ಥಗಿತಗೊಂಡಿರುವ ಈ ಮಾರ್ಗದಲ್ಲಿ ಕೆಎಲ್‌ಎಂ ಏರ್‌ಲೈನ್ಸ್ ಅಕ್ಟೋಬರ್ 30ರಿಂದ ವಿಮಾನ ಹಾರಾಟ ಆರಂಭಿಸುತ್ತಿದೆ. ಇಥಿಯೋಪಿಯಾಗೆ ತೆರಳುವ ಭಾರತೀಯರಿಗೆ ವೀಸಾ ಆನ್‌ ಅರೈವಲ್ ಅವಕಾಶವಿದೆ. ಪ್ರವಾಸ ಉದ್ದೇಶಕ್ಕೆ ತೆರಳುವವರಿಗೆ ಪಾಸ್‌ಪೋರ್ಟ್ ಅವಧಿ 6 ತಿಂಗಳು ಇದ್ದಲ್ಲಿ, ಆಡೀಸ್ ಆಬಬಗೆ ತೆರಳಿದ ನಂತರ ವೀಸಾ ಪಡೆಯಬಹುದು.

ಕೆಐಎನಿಂ ಜಪಾನಿನ ಟೋಕಿಯೋಗೆ 2020ಕ್ಕೆ ಜಪಾನ್ ಏರ್‌ಲೈನ್ಸ್ ವಿಮಾನ ಸಂಪರ್ಕ ಆರಂಭಿಸುತ್ತಿವೆ.

English summary
Bengaluru to Ethiopia Flight Service started first time in the history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X