₹45 ಲಕ್ಷ ಬಂದರೂ ನೆಮ್ಮದಿಯ ಜೀವನ ಸಿಗ್ತಿಲ್ಲ ಎಂದ ಬೆಂಗಳೂರು ಟೆಕ್ಕಿ, "ಬಾನಿಗೊಂದು ಎಲ್ಲೇ ಎಲ್ಲಿದೆ" ಎಂದ ನೆಟ್ಟಿಗರು

ಲಕ್ಷಾಂತರ ರೂಪಾಯಿ ಆದಾಯ ಬಂದರೂ, ನೆಮ್ಮದಿ ಇಲ್ಲ ಎನ್ನುವ ಯುವಕನೊಬ್ಬನ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಟೆಕ್ ಉದ್ಯೋಗಿಯೊಬ್ಬರು, ವರ್ಷಕ್ಕೆ ಸುಮಾರು ₹45 ಲಕ್ಷ ಸಂಬಳ ಇದ್ದರೂ ಪ್ರತಿ ತಿಂಗಳು ಆರ್ಥಿಕ ಒತ್ತಡದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. ಮುಂದುವರಿದು ಅತ್ಯುತ್ತಮ ಸಿಟಿಯಲ್ಲಿ ಬೆಳೆದೆ. ಒಳ್ಳೆಯ ಶಿಕ್ಷಣ, ಆದಾಯ ಎಲ್ಲವೂ ಇದ್ದರೂ ನೆಮ್ಮದಿ ಇರಲಿಲ್ಲ ಎನ್ನುವ ಯುವಕನೊಬ್ಬನ ವಿಚಿತ್ರ ದಾರುಣ ಕಥೆಯನ್ನು ಲಿಂಕ್ಡ್‌ಇನ್‌ನಲ್ಲಿ Bharat Prajapati ಅವರು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನು ಅಭಿವೃದ್ಧಿ ಹೊಂದಿರುವ ನಗರದಲ್ಲಿಯೇ ಬೆಳೆದೆ. ಕಾಲೇಜಿನಿಂದ ಫ್ರೆಶರ್ ಆಗಿ 45+ ಲಕ್ಷ ವಾರ್ಷಿಕ ವೇತನದ ಉದ್ಯೋಗ ಮಾಡುತ್ತಿದ್ದೆ. ಕಳೆದ ವರ್ಷ ಆ ಕೆಲಸ ಬಿಟ್ಟು ಸ್ಟಾರ್ಟ್‌ಅಪ್ ಆರಂಭಿಸುವ ಕನಸಿನ ಹಿಂದೆ ಹೋದೆ. ಒಂದಲ್ಲ, ಎರಡು ಕಂಪನಿಗಳನ್ನು ಆರಂಭಿಸಿದೆ. ಆದರೆ ಎರಡೂ ಸ್ಟಾರ್ಟ್ ಅಪ್ ಯಶಸ್ವಿಯಾಗಲಿಲ್ಲ. ನನ್ನ ಬಳಿ ಉಳಿತಾಯವಿಲ್ಲ, ವ್ಯವಹಾರವಿಲ್ಲ. ಈ ವೈಫಲ್ಯದಿಂದ ಹಣಕ್ಕಿಂತ ಹೆಚ್ಚಾಗಿ ನನ್ನ ಆತ್ಮವಿಶ್ವಾಸವೇ ಕುಸಿದಿದೆ. ನಾನು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಬಹುದೇ ಎನ್ನುವ ಅನುಮಾನವೂ ಶುರುವಾಗಿದೆ ಎಂದು ಆ ಯುವಕ ಹೇಳಿಕೊಂಡಿದ್ದಾನೆ.

Bengaluru

ಮೂರು ತಿಂಗಳ ಹಿಂದೆ ಮತ್ತೆ ಉದ್ಯೋಗ ಹುಡುಕಲು ನಿರ್ಧರಿಸಿದೆ. ಆದರೆ ಇಂಟರ್‌ವ್ಯೂ ಕೊಡುವುದಕ್ಕೆ ಟ್ರೈ ಮಾಡಬೇಕು ಎಂದು ಸಿದ್ಧತೆ ಆರಂಭಿಸಬೇಕೆಂದಾಗ, ನನ್ನಂಥವನನ್ನು ಯಾವ ಕಂಪನಿ ಕೆಲಸಕ್ಕೆ ತೆಗೆದುಕೊಳ್ಳುತ್ತದೆ ?' ಎಂಬ ಒಂದೇ ಪ್ರಶ್ನೆ ನನ್ನನ್ನು ತಡೆಯುತ್ತಿದೆ. ನನ್ನ ಕಥೆ ಯಾರನ್ನೂ ಹೆದರಿಸುವುದಕ್ಕೆ ಅಲ್ಲ. ಪ್ರತಿಯೊಬ್ಬ ಸ್ಟಾರ್ಟ್‌ಅಪ್‌ನ ಪಯಣವೂ ವಿಭಿನ್ನ. ನಿಮ್ಮ ಕನಸುಗಳು ಖಂಡಿತ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಇದೇ ಅನುಭವವನ್ನು ಎದುರಿಸಿದವರಿಂದ ಒಂದು ಸಲಹೆ ಅಥವಾ ಪ್ರೋತ್ಸಾಹ ಸಿಗಬಹುದು ಎಂಬ ನಿರೀಕ್ಷೆಯಿಂದ ಈ ಪೋಸ್ಟ್ ಮಾಡುತ್ತಿದ್ದೇನೆ. ಈಗ ನನಗೆ ಅದರ ಅಗತ್ಯವಿದೆ.

ವಾರ್ಷಿಕವಾಗಿ 45 ಲಕ್ಷ ರೂಪಾಯಿ ಆದಾಯ ಬರುತ್ತಿದ್ದರೂ ನಾನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೆ, ನೆಮ್ಮದಿಯ ಜೀವನ ನಡೆಸಲು ಆಗುತ್ತಿರಲಿಲ್ಲ ಎಂದೂ ಆ ಯುವಕ ಹೇಳಿಕೊಂಡಿದ್ದಾನೆ. ಭಾರತದಲ್ಲಿ ಶೇ.80ರಷ್ಟು ಉದ್ಯೋಗಸ್ಥರು ಅಥವಾ ಬಹುತೇಕ ಕೆಲಸಗಳಲ್ಲಿ ಇರುವವರು ಅತ್ಯಂತ ಕಡಿಮೆ ಸಂಬಳ ಪಡೆಯುತ್ತಾರೆ. ಕಡಿಮೆ ಸಂಬಳದಲ್ಲಿಯೇ ಹಲವರು ದುಡಿಯುತ್ತಿದ್ದಾರೆ. ಆದರೆ ಈ ರೀತಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದರೂ, ನೆಮ್ಮದಿ ಇಲ್ಲ ಎಂದರೆ ಹೇಗೆ ಎಂದು ಹಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Bengaluru: ಲಿಂಕ್ಡ್‌ಇನ್‌ ಪೋಸ್ಟ್‌ ವೈರಲ್‌

Bharat Prajapati ಎನ್ನುವವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ವರ್ಷಕ್ಕೆ ₹45 ಲಕ್ಷ ಸಂಬಳ. ಆದರೆ ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣವೇ ಉಳಿಯುವುದಿಲ್ಲವಂತೆ. ಇತ್ತೀಚೆಗೆ ಬೆಂಗಳೂರಿನ ಟೆಕ್ ಉದ್ಯೋಗಿಯೊಬ್ಬರು, ವರ್ಷಕ್ಕೆ ಸುಮಾರು ₹45 ಲಕ್ಷ ಸಂಬಳ ಇದ್ದರೂ ಪ್ರತಿ ತಿಂಗಳು ಆರ್ಥಿಕ ಒತ್ತಡದಲ್ಲೇ ಇರುತ್ತೇನೆ ಎಂದು ಹಂಚಿಕೊಂಡಿದ್ದಾರೆ.

* ಮನೆ ಸಾಲ (ಹೋಮ್ ಲೋನ್)
* ಮಕ್ಕಳ ಶಾಲಾ ಶುಲ್ಕ
* ಕುಟುಂಬದ ಖರ್ಚು
* ದಿನನಿತ್ಯದ ಜೀವನ ವೆಚ್ಚ

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ₹45 ಲಕ್ಷ ಸಂಬಳವೂ ಸಾಲದಿದ್ದರೆ, ಎಷ್ಟು ಬಂದರೂ ಸಾಲದು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹೆಚ್ಚು ಸಂಬಳ ಎಂದರೆ ಆರ್ಥಿಕ ಸ್ವಾತಂತ್ರ್ಯ ಎನ್ನುವ ಕಾಲ ಮುಗಿದಿದೆಯೇ ಎಂದು ಪ್ರಶ್ನಿಸಿದ್ದಾರೆ. ನಾವು ಹೆಚ್ಚು ಸಂಪಾದಿಸಲು ಶ್ರಮಿಸುತ್ತೇವೆ. ಆದರೆ ಆದಾಯ ಹೆಚ್ಚಿದಂತೆ ಖರ್ಚುಗಳೂ ಹೆಚ್ಚುತ್ತವೆ.

* ಉತ್ತಮ ಮನೆ
* ದೊಡ್ಡ EMI
* ಹೆಚ್ಚು ಸಬ್‌ಸ್ಕ್ರಿಪ್ಷನ್‌ಗಳು
* ಹೊಸ ಅಪ್‌ಗ್ರೇಡ್‌ಗಳು
* ಹೆಚ್ಚಿದ ನಿರೀಕ್ಷೆಗಳು

ಕೊನೆಗೆ, ಸಂಬಳ ಹೆಚ್ಚಾದರೂ ಅದರ ಬಹುಪಾಲು ಖರ್ಚಿನಲ್ಲೇ ಮುಗಿದು ಹೋಗುತ್ತದೆ. ಸಮಸ್ಯೆ ಯಾವಾಗಲೂ ಕಡಿಮೆ ಆದಾಯವಲ್ಲ. ಆದಾಯ ಹೆಚ್ಚಿದಷ್ಟು ವೇಗವಾಗಿ ಖರ್ಚುಗಳೂ ಹೆಚ್ಚುವುದು ಕೂಡ ಒಂದು ಕಾರಣ. ಹೆಚ್ಚು ಸಂಬಳ ಜೀವನದಲ್ಲಿ ಹೆಚ್ಚು ಆಯ್ಕೆಗಳನ್ನು ನೀಡಬೇಕು, ಹೆಚ್ಚು ಒತ್ತಡವಲ್ಲ. ಏಕೆಂದರೆ ಆರ್ಥಿಕ ಸ್ವಾತಂತ್ರ್ಯವನ್ನು ನಿಮ್ಮ CTC ನಿರ್ಧರಿಸುವುದಿಲ್ಲ. ಸಂಬಳ ಬಂದ ನಂತರ ನಿಮ್ಮ ಹಣ ಮತ್ತು ಜೀವನದ ಮೇಲೆ ನಿಮಗಿರುವ ನಿಯಂತ್ರಣವೇ ಅದನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+