'ರಸ್ತೆ ಸೂಪರೋ..ಗುಂಡಿ ಡೇಂಜರೋ..ಗುಂಡಿಯಾ ಆಸು-ಪಾಸು ಇನ್ನೂ ಡೇಂಜರೋ...': ತೆರಿಗೆದಾರರ ಪ್ರತಿಭಟನೆ

ಬೆಂಗಳೂರು, ಏಪ್ರಿಲ್ 14: ಮಹಾನಗರ, ಐಟಿ ಕೇಂದ್ರ, ಹೂಡಿಕೆಗೆ ಸೂಕ್ತ ತಾಣವಾದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಇನ್ನೂವರೆಗೆ ರಸ್ತೆ ಗುಂಡಿಗಳು, ಹದಗೆಟ್ಟ ರಸ್ತೆಗಳ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಜನರು ತೆರಿಗೆ ಮಾತ್ರ ಒಂದೂ ರೂಪಾಯಿ ಬಿಡದಂತೆ ಕಟ್ಟುತ್ತಿದ್ದಾರೆ. ಆದರೆ ಅವರಿಗೆ ರಸ್ತೆ ಮೂಲಕ ಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ. ಈ ಸಂಬಂಧ ತೆರಿಗೆದಾರರು ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ Citizens Movement, East Bengaluru ರಸ್ತೆ ಗುಂಡಿಗಳು, ಹದಗೆಟ್ಟ ರಸ್ತೆ ಸ್ಥಿತಿಗಳ, ಅದರಲ್ಲಿಯೇ ವಾಹನ ಸಂಚಾರದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ರಸ್ತೆ ಗುಂಡಿಗೆ ಬಣ್ಣ ಹಾಕಿದ ತೆರಿಗೆ ಪಾವತಿದಾರರು ಪಾಲಿಕೆಯ ಕಳಪೆ ನಿರ್ವಹಣೆ, ರಸ್ತೆ ಪರಿಸ್ಥಿತಿ ಕುರಿತು ವಿಡಂಬನೆಯ ಹಾಡು ಹಾಡಿದರು. ಈ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ನಾನು ರಸ್ತೆಗಾಗಿ ತೆರಿಗೆ ಕಟ್ಟಿದ್ದೇನೆ ಎಂದು ಬರೆದಿರುವ ಟೀಶರ್ಟ್ ಹಾಕಿಕೊಂಡು ಆಕ್ರೋಶ ಹೊರ ಹಾಕಿದರು.

Bengaluru Taxpayers Helpless BBMP Broken Promises No Substandard Roads Zero Accountability

'ರಸ್ತೆ ಸೂಪರೋ...ಗುಂಡಿ ಡೇಂಜರೋ..ಗುಂಡಿಯ ಆಸು-ಪಾಸು ಇನ್ನೂ ಡೇಂಜರೋ. ಗುಂಡಿನಕ್ಕಾ ನಕ್ಕ ನಕ್ಕ..ನಕ್ಕ..ನಕ್ಕಾ ನಾ...' ಎಂದು ವಿಡಂನಾತ್ಮಕವಾಗಿ ಪ್ರತಿಭಟನಾಕಾರರು ಹಾಡು ಹಾಡುವ ಮೂಲಕ ಪಾಲಿಕೆ ನಿರ್ಲಕ್ಷ್ಯ ಖಂಡಿಸಿದ್ದಾರೆ. ನಾವು ತೆರಿಗೆ ನೀಡುತ್ತಿವೆ. ಆದರೆ ಹೊಣೆಗಾರಿಕೆಯಿಂದ ಪಾಲಿಕೆ ತಪ್ಪಿಸಿಕೊಳ್ಳುತ್ತಿದೆ. ಇನ್ನೂ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಬೆಂಗಳೂರಿನಲ್ಲಿ ತೆರಿಗೆದಾರರ ಅಸಹಾಯಕತೆ ಹೇಳತೀರದಾಗಿದೆ. ತೆರಿಗೆ ಕಟ್ಟಿಸಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಪಾಲಿಕೆಗೆ ಯಾವುದೇ ಹೊಣೆಗಾರಿಕೆ ಇಲ್ಲ, ಅಧಿಕಾರಿಗಳು ಕೇವಲ ಲೂಟಿ ಹೊಡೆಯುತ್ತಿದ್ದಾರೆ. ಬಿಬಿಎಂಪಿ ಇಂದು ರಸ್ತೆ ದುರಸ್ತಿ ಮಾಡಿದರೂ ಸಹಿತ ಅವುಗಳು ಬಾಳಿಕೆ ಕೇವಲ 3 ತಿಂಗಳು. ಕೆಲವೊಮ್ಮೆ ಅಷ್ಟರೊಳಗೆ ರಸ್ತೆಗಳು ಮತ್ತೆ ಹಾಳಾಗುತ್ತವೆ.

Take a Poll

ಹಣ ಹೊಡೆಯಲು ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿದೆ. ಅಗತ್ಯದಷ್ಟು ಅನುದಾನ ಬಳಸದೇ ಕೇವಲ ಲೆಕ್ಕದಲ್ಲಿ ತೋರಿಸಿ ಕಡಿಮೆ ಹಣದಲ್ಲಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿದ್ದರಿಂದ ಹೀಗಾಗಿದೆ ಎಂಬ ದೂರು ಕೇಳಿ ಬಂದಿದೆ. ಬೇಸಿಗೆ ವೇಳೆ ರಸ್ತೆ ಗುಂಡಿ ನಿರ್ಮಿಸಲು ಸಾಕಷ್ಟು ಅವಕಾಶ ಇರುತ್ತದೆ. ತಡ ಮಾಡಿದರೆ ಮಳೆ ಆರಂಭವಾಗದರೆ ವಾಹನ ಸವಾರರಿಗೆ ಮತ್ತಷ್ಟು ಕಷದ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಗರಲ್ಲಿ ಎಲ್ಲೆಲ್ಲಿ ರಸ್ತೆ ಹಾಳಾಗಿದೆಯೋ ಅವೆಲ್ಲವನ್ನು ಕೂಡಲೇ ಪಾಲಿಕೆ ಅಧಿಕಾರಿಗಳು ದುರಸ್ತಿಗೊಳಿಸಬೇಕೆಂಬುದು ನಗರವಾಸಿಗಳ ಆಶಯ.

ಹಾಲಿ ರಸ್ತೆ ಅಭಿವೃದ್ಧಿ ಮಾಡಿ..

ವಿಡಿಯೋದಲ್ಲಿ ಇರುವಂತೆ ಈ ರಸ್ತೆಗಳು ಮಾತ್ರವಲ್ಲ. ನಗರದ ಅನೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ಮಳೆ ಬಂತೆಂದರೆ, ರಸ್ತೆ ಯಾವುದು, ಒಳಚರಂಡಿ ಯಾವುದು ಎಂಬುದು ಗೊತ್ತಾಗದಂತೆ ಗುಂಡಿಗಳಲ್ಲಿ ನೀರು ನಿಂತುಕೊಂಡಿರುತ್ತದೆ. ಜನರ ತೆರಿಗೆ ಹಣವನ್ನು ಇಂತಹ ಮೂಲಸೌಕರ್ಯ ಸುಧಾರಣಗೆ ವ್ಯಯಿಸಬೇಕಿದೆ. ಅದರ ಬದಲು ಹೊಸ ಹೊಸ ಬ್ಲಾಕ್ ಟಾಪಿಂಗ್, ವೈಟ್ ಟಾಪಿಂಗ್ ಹೆಸರಿನಲ್ಲಿ ಯೋಜನೆ ತಂದರೆ ಉಪಯೋಗವಾಗದು. ಬದಲಾಗಿ ಇರುವ ರಸ್ತೆ ಸುಧಾರಿಸಿ, ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿ ಹೊಸ ರಸ್ತೆ ಮಾಡಿಕೊಳ್ಳಬೇಕು ಎಂದು ಜನರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+