Bengaluru Suburban train: SWRನಿಂದ 452 ಕಿ.ಮೀ.ವಿಸ್ತರಣೆಯ ಉಪನಗರ ರೈಲು ಯೋಜನೆ ತಿರಸ್ಕಾರ, ಕಾರಣ ಏನು?
ಬೆಂಗಳೂರು, ನವೆಂಬರ್, 28: ಸ್ಯಾಟಲೈಟ್ ಪಟ್ಟಣಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಪ್ರಯತ್ನಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ 452 ಕಿ.ಮೀ.ಗೆ ಚಾಲನೆ ನೀಡುವ 2ನೇ ಹಂತದ ಪೂರ್ವ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸುವಲ್ಲಿ ನೈರುತ್ಯ ರೈಲ್ವೆ (South Western Railway) ವಲಯ ತಿರಸ್ಕರಿಸಿದೆ.
ರೈಲ್ವೆ ಇಲಾಖೆಯ ಒಪ್ಪಿಗೆ ಪಡೆಯಲು ಬಿಎಸ್ಆರ್‌ಪಿಯನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾದ ಕೆ-ರೈಡ್‌ನಿಂದ ಕೆಲವು ತಿಂಗಳ ಹಿಂದೆ ನೈರುತ್ಯ ರೈಲ್ವೆ (South Western Railway) ವಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅಸ್ತಿತ್ವದಲ್ಲಿರುವ ರೈಲು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗಮನಹರಿಸುವಂತೆ ನೈರುತ್ಯ ರೈಲ್ವೆ ವಲಯ ಕೇಳಿದೆ.

2ನೇ ಹಂತದ ಎಲ್ಲಾ ದಿಕ್ಕುಗಳಲ್ಲಿ 4 ಕಾರಿಡಾರ್‌ಗಳಿಗೆ ಸಾಗುವ 148.17 ಕಿಲೋ ಮೀಟರ್ ಹಂತ-1 ಉಪನಗರ ರೈಲು ಜಾಲದ ವಿಸ್ತರಣೆ ಆಗಿತ್ತು. ಕೆ-ರೈಡ್ ಮೂಲವು ಇದನ್ನು ಉದ್ದೇಶಿತ 452-ಕಿ.ಮೀಟರ್ ಮಾರ್ಗವೆಂದು ನಿರ್ದಿಷ್ಟಪಡಿಸಿದೆ. ಕಾರಿಡಾರ್ 1: ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ: 22 ಕಿಲೋ ಮೀಟರ್ ಮತ್ತು ಚಿಕ್ಕಬಳ್ಳಾಪುರದಿಂದ ಕೋಲಾರ - 85 ಕಿಲೋ ಮೀಟರ್ ಎಂದು ಕಳುಹಿಸಲಾಗಿದೆ.
ಕಾರಿಡಾರ್-2 - ಚಿಕ್ಕಬಾಣಾವರದಿಂದ ತುಮಕೂರಿನವರೆಗೆ ದಾಬಸ್‌ಪೇಟೆ 35 ಕಿಲೋ ಮೀಟರ್ ಹೊಸ ಕಾರಿಡಾರ್ 2ಎ: ಚಿಕ್ಕಬಾಣಾವರದಿಂದ ಮಾಗಡಿ: 45 ಕಿ.ಮೀ; ಕಾರಿಡಾರ್ 3- ರಾಮನಗರ ಮತ್ತು ಮಂಡ್ಯ ಮೂಲಕ ಕೆಂಗೇರಿಯಿಂದ ಮೈಸೂರಿಗೆ-125 ಕಿ.ಮೀ, ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ- 45 ಕಿ.ಮೀ ಮತ್ತು ಹೆಲ್ಲಳಿಗೆ ಹೊಸೂರಿಗೆ: 23 ಕಿ.ಮೀ; ಕಾರಿಡಾರ್ 4: ರಾಜನಕುಂಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರಿಗೆ: 52 ಕಿ.ಮೀ ಎಂದು ಕಳುಹಿಸಲಾಗಿತ್ತು.
SWR ಪರವಾಗಿ, (ಜಿಎಂ, ಎಸ್‌ಡಬ್ಲ್ಯೂಆರ್ ಅವರ ಒಪ್ಪಿಗೆಯೊಂದಿಗೆ) ಮುಖ್ಯ ಎಂಜಿನಿಯರ್, ಟ್ರ್ಯಾಕ್ ಪ್ರೊಕ್ಯೂರ್‌ಮೆಂಟ್, ಎಸ್‌ಡಬ್ಲ್ಯೂಆರ್‌ನ ಲಕ್ಷ್ಮಣ್ ಸಿಂಗ್ ಅವರು ಸಹಿ ಹಾಕಿರುವ ಪತ್ರವನ್ನು ನವೆಂಬರ್ 13ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂಲಸೌಕರ್ಯ, ಕರಂಟಕ ಮತ್ತು ಎಂಡಿ, ಕೆ-ರೈಡ್ ಅವರಿಗೆ ಕಳುಹಿಸಲಾಗಿದೆ. ಸ್ಯಾಟಲೈಟ್ ಟೌನ್ ನ್ನು ಬೆಂಗಳೂರು ನಗರಕ್ಕೆ ಸಂಪರ್ಕಿಸಲು ರೈಲ್ವೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳುತ್ತದೆ.
ರೈಲ್ವೆಯು ಈಗಾಗಲೇ ಸಾಕಷ್ಟು ಯೋಜನೆಯನ್ನು ಮಾಡಿರುವುದರಿಂದ ಸ್ಯಾಟಲೈಟ್ ಟೌಟ್‌ಗೆ ಯೋಜಿತ 4 ಬಿಎಸ್‌ಆರ್‌ಪಿ ಕಾರಿಡಾರ್‌ಗಳನ್ನು ವಿಸ್ತರಿಸಲು ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳುವಲ್ಲಿ ಯಾವುದೇ ಸಮರ್ಥನೆ ಇಲ್ಲವೆದು ಪತ್ರದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಈ ರೈಲು ನಿಲ್ದಾಣ ವಿಶ್ವದರ್ಜೆಗೆ
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು 377 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ (ನವೆಂಬರ್ 27) ಹೇಳಿದ್ದಾರೆ.
ಕೆಲವು ಸಿವಿಲ್ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲು ನಿಲ್ದಾಣವು ಮೇಲ್ಛಾವಣಿ ಪ್ಲಾಜಾವನ್ನು ಹೊಂದಿದ್ದು, ಇದು ಮಕ್ಕಳ ಆಟದ ಪ್ರದೇಶ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಥಳಾವಕಾಶವನ್ನು ಹೊಂದಿರಲಿದೆ. ಇದು ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಇದು ಬೆಂಗಳೂರು (ನಗರ ನಿಲ್ದಾಣ), ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರವನ್ನು ಒದಗಿಸುತ್ತದೆ. ಯಶವಂತಪುರದಲ್ಲಿ ಪ್ರಮುಖ ಪುನರಾಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಮಾಡಲು 377 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿಲ್ದಾಣದ ಎರಡೂ ಬದಿಗಳು ಸಂಪರ್ಕಗೊಳ್ಳುತ್ತವೆ. ಎರಡೂ ಕಡೆಗಳಿಗೆ ಪ್ರವೇಶವಿರುತ್ತದೆ ಮತ್ತು ಮೇಲ್ಛಾವಣಿಯ ಪ್ಲಾಜಾ ಇರುತ್ತದೆ. ತುಂಬಾ ವಿಶಾಲವಾದ, ದೊಡ್ಡ ಛಾವಣಿಯ ಪ್ಲಾಜಾದಲ್ಲಿ ಜನರು ತುಂಬಾ ಆರಾಮದಾಯಕವಾಗಿ ಕಾಯಬಹುದಾಗಿದ್ದು, ಅಲ್ಲಿ ಮಕ್ಕಳು ಆಟವಾಡಬಹುದು, ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶಿಸಬಹುದು. ಮತ್ತು ಮಾರಾಟ ಮಾಡಬಹುದು. ಆದ್ದರಿಂದ, ನಾವು ಪ್ರಪಂಚದಾದ್ಯಂತ ನೋಡಿದ ರೀತಿಯಲ್ಲಿ, ಯಶವಂತಪುರದಲ್ಲೂ ಅಂತಹ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications