Bengaluru Suburban Rail: ಈ ಮಾರ್ಗದಲ್ಲಿ ನಿಲ್ದಾಣಗಳ ವಿನ್ಯಾಸ ಬದಲಾವಣೆ, ಎಲ್ಲೆಲ್ಲಿ ಹಾಗೂ ವೆಚ್ಚ ಎಷ್ಟು?-ಅಂಕಿಅಂಶಗಳ ವಿವರ

ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್‌ನ ನಿಲ್ದಾಣಗಳ ವಿನ್ಯಾಸ ಬದಲಾವಣೆಯೊಂದಿಗೆ ತಿಂಗಳಾಂತ್ಯದಲ್ಲಿ ಮರು ಟೆಂಡರ್‌ ಕರೆಯಲು ಕೆ-ರೈಡ್ ಕಂಪನಿ ನಿರ್ಧಿರಿಸಿದೆ.

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ 25.01 ಕಿಲೋ ಮೀಟರ್‌ ಉದ್ದದ ಮಾರ್ಗ ಇದಾಗಿದ್ದು, ಇಲ್ಲಿ 12 ನಿಲ್ದಾಣಗಳ ನಿರ್ಮಾಣಕ್ಕೆ ಈ ಮೊದಲು ಕರೆದಿದ್ದ ಟೆಂಡರ್‌ ನವೆಂಬರ್‌ನಲ್ಲಿ ರದ್ದಾಗಿತ್ತು. ಆದರೆ ಇದೀಗ ನಿಲ್ದಾಣ ವಿನ್ಯಾಸ ಬದಲು ಅಂದರೆ ಮೂರು ಬೋಗಿ ನಿಲ್ಲುವಷ್ಟು ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಬೇಕೆ ಅಥವಾ ಆರು ಬೋಗಿ ರೈಲು ನಿಲುಗಡೆಗೆ ಪೂರಕವಾಗಿ ರೂಪಿಸಿಕೊಳ್ಳಬೇಕೆ ಎಂಬ ಚರ್ಚೆಗಳು ನಡೆಯುತ್ತಿವೆ.

Bengaluru Suburban Rail: Stations Design change on this routes, know cost details

6 ಬೋಗಿಗಳ ರೈಲಿಗೆ ಅನುಗುಣವಾದ ಪ್ಲಾಟ್‌ಫಾರ್ಮ್‌ ನಿರ್ಮಿಸಿಕೊಳ್ಳುವುದು ಹಾಗೂ ಮೂರು ಬೋಗಿಗಳ ರೈಲನ್ನು ಓಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆಯಂತೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (BMRCL)ವು ನಮ್ಮ ಮೆಟ್ರೋ 3ನೇ ಹಂತದ ಮಾಗಡಿ ರೋಡ್‌ ಕಾರಿಡಾರ್‌ನಲ್ಲಿ ಮೂರು ಬೋಗಿಗಳ ರೈಲು ಓಡಿಸಲು ಡಿಪಿಆರ್‌ ತಯಾರಿಸಿ ಸಲ್ಲಿಸಿದೆ. ಉಪನಗರ ರೈಲ್ವೆ ಯೋಜನೆ ಅನುಷ್ಠಾನ ಮಾಡುತ್ತಿರುವ ಕೆ-ರೈಡ್‌ ಕೂಡ ಮೂರು ಬೋಗಿಗಳ ಕುರಿತು ಅಧ್ಯಯನ ಮಾಡಿದೆ.

ಕೆ-ರೈಡ್‌ ಮೂಲಗಳ ಪ್ರಕಾರ, ಉಪನಗರ ರೈಲ್ವೆಯ ಒಂದು ರೈಲ್ವೆ ಬೋಗಿ 300 ಜನ ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದೆ. ಒಂದು ಗಂಟೆಗೆ 30ಕ್ಕಿಂತಲೂ ಹೆಚ್ಚಿನ ಟ್ರಿಪ್‌ ಸಂಚರಿಸಬಹುದು. ಸಂಸ್ಥೆ ನಡೆಸಿದ ಪಿಎಚ್‌ಪಿಡಿಟಿ (ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್) ಅಧ್ಯಯನದ ಪ್ರಕಾರ, ಈ ಮಾರ್ಗದಲ್ಲಿ ವರ್ಷಕ್ಕೆ ಶೇಕಡಾ 19ರಷ್ಟು ಹೆಚ್ಚಿನ ಪ್ರಯಾಣಿಕರ ಹೆಚ್ಚಳವಾಗುವ ಸಾಧ್ಯೆತೆಯಿದೆ.

ಇನ್ನು 2031ರ ವೇಳೆಗೆ ದಿನಕ್ಕೆ 10,931, 2041ಕ್ಕೆ 13,858 ಪ್ರಯಾಣಿಕರು ಪ್ರಯಾಣ ಮಾಡಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ. 2051ಕ್ಕೆ 17,599 ಜನ ಸಂಚರಿಸುವ ಸಾಧ್ಯತೆ ಇದೆ. ಅಲ್ಲದೆ, 2061ರವರೆಗೂ ಇಷ್ಟೇ ಬೋಗಿಗಳು ಸಾಕಾಗುತ್ತವೆ. ಅಲ್ಲಿಯವರೆಗೆ ಮೂರು ಬೋಗಿಗಳ ರೈಲು ಸಂಚರಿಸಿದರೂ ಇಷ್ಟು ಪ್ರಯಾಣಿಕರು ತೊಂದರೆಯಿಲ್ಲದೆ ಪ್ರಯಾಣ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ಟ್ರಿಪ್‌ಗಳನ್ನು ಹೆಚ್ಚಳ ಆಗುವ ಸಾಧ್ಯತೆಯು ಹೆಚ್ಚಿದೆ ಎಂದು ಎನ್ನುವುದು ಅಧಿಕಾರಿಗಳ ಮಾತಾಗಿದೆ.

2019ರ ಮೂಲ ವಿಸ್ತ್ರತ ಯೋಜನಾ ವರದಿಯಲ್ಲಿ 9 ಬೋಗಿಯ ರೈಲಿಗೆ ಅನುಗುಣವಾಗಿ ನಿಲ್ದಾಣ ವಿನ್ಯಾಸ ಮಾಡಿಕೊಳ್ಳುವುದು ಹಾಗೂ ಆರು ಬೋಗಿಗಳ ನಿಲುಗಡೆಗೆ ತಕ್ಕಂತೆ ನಿಲ್ದಾಣ ನಿರ್ಮಾಣ ಮಾಡಲು ಯೋಜಿಸಲಾಗಿತ್ತು. ಆಗ ನಿಲ್ದಾಣಕ್ಕೆ ₹500 ಕೋಟಿ ವೆಚ್ಚ ಎಂದು ಅಂದಾಜು ಮಾಡಲಾಗಿತ್ತು. ಆದರೆ, 5 ವರ್ಷದ ಬಳಿಕ ಈ ವೆಚ್ಚ ಸುಮಾರು ₹850-900 ಕೋಟಿಗೆ ತಲುಪುತ್ತಿದೆ. ಆದ್ದರಿಂದ ನಿಲ್ದಾಣದ ವಿನ್ಯಾಸ ಬದಲಿಸಲು ಕೆ-ರೈಡ್‌ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ 9 ಬೋಗಿಯ ರೈಲು ನಿಲುಗಡೆಯಾಗುವಷ್ಟು ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಿಕೊಂಡು ಹೆಚ್ಚುವರಿ ವೆಚ್ಚದ ಬದಲು ಆರು ಬೋಗಿಯ ರೈಲು ನಿಲ್ಲುವಷ್ಟು ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಿಕೊಳ್ಳುವ ಚರ್ಚೆ ನಡೆದಿದೆ. ತಿಂಗಳಾಂತ್ಯದ ಒಳಗೆ ಕೆ-ರೈಡ್ ಬೋರ್ಡ್‌ ಸಭೆ ನಡೆಯಲಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಮಾಹಿತಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+