• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಷ್ಟ್ರಮಟ್ಟದ ತಂತ್ರಜ್ಞಾನ ಸ್ಪರ್ಧೆಯಲ್ಲಿ ಮಿಂಚಿದ ಬೆಂಗ್ಳೂರ್ ಹುಡುಗರು

|

ಬೆಂಗಳೂರು, ಸೆಪ್ಟೆಂಬರ್ 25: ವಿಜ್ ಜೂನಿಯರ್ಸ್ ಆನ್ ಲೈನ್ ತಂತ್ರಜ್ಞಾನ ಆಧಾರಿತ ಸ್ವರ್ಧೆ 'ವಿಜ್ ಗೂಗ್ಲರ್' 2018ರಲ್ಲಿ ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆ ಎನ್.ಎಲ್.ಓ ನ ವಿದ್ಯಾರ್ಥಿಗಳಾದ ಕುಶಾಲ್ ರಾಜೀವ್ ಮತ್ತು ಪುನೀಲ್ ಪಟೇಲ್ ಅಗ್ರಸ್ಥಾನ ಪಡೆದಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ದ ಗ್ರಾಂಡ್ ಅವಾರ್ಡ್ ಶೋ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಮತ್ತಷ್ಟು ಚುರುಕಾಗುವಂತೆ ಮಾಡಲು ಭಾರತದ ಎಲ್ಲೆಡೆ ವಿಜ್ ಜೂನಿಯರ್ಸ್ ಆನ್ ಲೈನ್ ತಂತ್ರಜ್ಞಾನ ಆಧಾರಿತ ಸ್ವರ್ಧೆ ಆಯೋಜಿಸಲಾಗುತ್ತದೆ.

2018ರ ಪ್ರಸ್ತುತ ವರ್ಷದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಾದ ದೆಹಲಿ ಪಬ್ಲಿಕ್ ಸ್ಕೂಲ್ ಸೌತ್; ನ್ಯಾಷನಲ್ ಪಬ್ಲಿಕ್ ಸ್ಕೂಲ್; ಶ್ರೀ ಅರಬಿಂದೋ ಮೆಮೋರಿಯಲ್ ಸ್ಕೂಲ್; ವೆಂಕಟ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್; ಆರ್ಮಿ ಪಬ್ಲಿಕ್ ಸ್ಕೂಲ್; ಪಿಆರ್ ಟಿ ಸಿ ಇನ್ವೆಂಚರ್ ಅಕಾಡೆಮೆ ಸೇರಿದಂತೆ 150+ ಶಾಲೆಗಳಿಂದ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಮುಂಬೈನ ವೋರ್ಲಿಯ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರದ ಗೌರವಾನ್ವಿತ ಮುಖ್ಯಮಂತ್ರಿಯವರ ಪತ್ನಿ, ಗಾಯಕಿ, ಸಮಾಜ ಸೇವಕಿ ಶ್ರೀಮತಿ ಅಮೃತಾ ಫಡ್ನಿವೀಸ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಲೋನ್ ಪುಟುರ ಮತ್ತು ವಿಜ್ ಜೂನಿಯರ್ಸ್ ಸಂಸ್ಥಾಪಕಿ ಹಾಗೂ ಸಿಇಓ ವಿದೂಷಿ ಡಾಗಾ; ಟೆಕ್ನಾಲಜಿ ಮ್ಯಾರಥಾನ್‍ಗೆ ದೊರೆತ ಪ್ರತಿಕ್ರಿಯೆ ಸಂತಸ ನೀಡಿದ್ದು ತೆರೆಮರೆಯ ಪ್ರತಿಭೆ ಹೊರತರುವ ಯತ್ನ ಗ್ರಾಂಡ್ ಅವಾರ್ಡ ಶೋನಲ್ಲಿ ಫಲ ನೀಡಿದೆ. ಈ ಮೂಲಕ ವಿಜ್ ಜೂನಿಯರ್ಸ್ ಕಂಪ್ಯೂಟರ್ ಜ್ಞಾನವನ್ನು ವೇಗವಾಗಿ ಮತ್ತು ಮನರಂಜನೆ ಮೂಲಕ ಕಲಿಯುವುದಕ್ಕೆ ವೇದಿಕೆ ಒದಗಿಸಿದೆ, ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವಿತದ ಒಂದು ಭಾಗವಾಗಿರುವ ಇದರಲ್ಲಿ ಎಷ್ಟು ಕಲಿತಿದ್ದೇವೆ ಎಂಬುದನ್ನು ತಿಳಿಯಲು ಸಹಾಯಕಾರಿ ಆಗಿದೆ ಎಂದರು.

English summary
The Grand Award show, an online technology-based competition to unearth & recognize talented students, teachers and schools nationally which attracted a total participation of 3,000+ students from 150+ schools, culminated with a large number of Namma Bengaluru students and teachers bagging awards in different categories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X