Bengaluru Bandh: ಬಂದ್‌ ಎಫೆಕ್ಟ್: ಬಿಎಂಟಿಸಿ, ನಮ್ಮ ಮೆಟ್ರೋಗೆ ಭರ್ಜರಿ ಆದಾಯ!

ಸೋಮವಾರ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳ ಮುಷ್ಕರದಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಖಾಸಗಿ ವಾಹನಗಳ ಮಾಲೀಕರು ಬಂದ್‌ಗೆ ಕರೆ ನೀಡಿದ್ದ ಕಾರಣ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ ಬಸ್ ಸೇವೆ ಒದಗಿಸಲಾಗಿತ್ತು, ನಮ್ಮ ಮೆಟ್ರೋ ಕೂಡ ಹೆಚ್ಚಿನ ಟ್ರಿಪ್ ಓಡಾಟ ನಡೆಸಿತ್ತು.

ಖಾಸಗಿ ಸಾರಿಗೆ ಒಕ್ಕೂಟ ಸೋಮವಾರ ಬಂದ್ ಆಚರಿಸಿದ್ದು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಲಕ್ಷಾಂತರ ಆಟೋರಿಕ್ಷಾಗಳು, ಕ್ಯಾಬ್‌ಗಳು ಮತ್ತು ಖಾಸಗಿ ಬಸ್‌ಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ರಸ್ತೆಗಿಳಿದಿದ್ದವು.

bengaluru-strike-boosts-bmtc-and-metro-ridership

ಸೋಮವಾರ ಖಾಸಗಿ ಸೇವೆ ಇಲ್ಲದ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ 39,52,476 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಬಿಎಂಟಿಸಿ ಹೆಚ್ಚುವರಿಯಾಗಿ 1,600 ಟ್ರಿಪ್‌ಗಳನ್ನು ನಿರ್ವಹಿಸಿದೆ ಎಂದು ನ್ಯೂಸ್‌9 ವರದಿ ಮಾಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದ ಹೊರತಾಗಿಯೂ ಬಿಎಂಟಿಸಿ ಉತ್ತಮ ಆದಾಯ ಗಳಿಸಿರುವುದು ಗಮನಾರ್ಹ.

ಒಂದೇ ದಿನ 5.69 ಕೋಟಿ ಆದಾಯ

ವಿಮಾನ ನಿಲ್ದಾಣದ ಮಾರ್ಗದಲ್ಲಿ, ಸರಾಸರಿ 12,000 ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ ಆದರೆ ಬಂದ್ ದಿನದಂದು ಈ ಸಂಖ್ಯೆ 22,371 ಕ್ಕೆ ಏರಿತು. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು. ಟ್ವಿಟರ್ ನಲ್ಲಿ ಅವರು 'ಎಕ್ಸ್' ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಮಾರ್ಗದಲ್ಲಿ ಸಾರಿಗೆ ನಿಗಮಕ್ಕೆ ಎಂದಿನಂತೆ ಬರುತ್ತಿದ್ದ 32 ಲಕ್ಷ ರೂ.ಗಳ ಬದಲಿಗೆ ಒಂದೇ ದಿನದಲ್ಲಿ ರೂ.60 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಒಟ್ಟಾರೆ ಸೋಮವಾರ ಬಿಎಂಟಿಸಿಯ 5.96 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬೆಳಗಿನ ಜಾವದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗಂತೆ ನೋಡಿಕೊಳ್ಳಲು ಮೆಟ್ರೋ ರೈಲುಗಳ ಸಂಚಾರವನ್ನು ಹೆಚ್ಚಿಸಿತ್ತು. ಸೋಮವಾರ, ಒಟ್ಟು 6,13,513 ಜನರು ಮೆಟ್ರೋ ಸೇವೆಗಳನ್ನು ಬಳಸಿದ್ದಾರೆ ಇದು ಸರಾಸರಿ ಪ್ರಯಾಣಿಕರಿಗಿಂತ ಹೆಚ್ಚು ಎಂದು ವರದಿಯಾಗಿದೆ.

ಖಾಸಗಿ ಸಾರಿಗೆ ಒಕ್ಕೂಟಗಳು 32 ಬೇಡಿಕೆಗಳನ್ನು ಮುಂದಿಟ್ಟಿದ್ದು, ಸಾರಿಗೆ ಸಚಿವರು ತಮ್ಮ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮುಷ್ಕರವನ್ನು ಹಿಂಪಡೆಯಲಾಯಿತು. ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಲು ವಿಫಲವಾದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಬೆದರಿಕೆ ಹಾಕಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+